ಬ್ರೇಕಿಂಗ್ ನ್ಯೂಸ್
06-04-22 01:23 pm Udupi Correspondent ಕರಾವಳಿ
ಉಡುಪಿ, ಎ.6: ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 19 ವರ್ಷದ ಯುವಕನ ಮೆದುಳು ನಿಷ್ಕ್ರಿಯಗೊಂಡ ಕಾರಣ ಆತನ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಹೀಗಾಗಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಯುವಕ ತನ್ನ ಸಾವಿನೊಂದಿಗೆ ಆರು ಮಂದಿಯ ಜೀವ ಉಳಿಸಿದ ಸಾರ್ಥಕ್ಯ ಪಡೆದಿದ್ದಾನೆ.
ಎ.2ರಂದು ಸಂಜೆ ಉಪ್ಪಿನಕೋಟೆಯಲ್ಲಿ ಬೈಕ್ ಅಪಘಾತ ನಡೆದು ಸಾಲಿಗ್ರಾಮದ ಯುವಕ ಶ್ರೀನಿವಾಸ್(19) ತೀವ್ರ ಗಾಯಗೊಂಡಿದ್ದ. ಯುವಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಯುವಕನನ್ನು ಉಳಿಸಲು ಹರಸಾಹಸ ನಡೆಸಿದ್ದಾರೆ. ಆರು ಗಂಟೆಗಳ ಸುದೀರ್ಘ ಪರಿಶ್ರಮದ ಬಳಿಕ ಯುವಕನ ಮೆದುಳು ನಿಷ್ಕ್ರಿಯ ಆಗಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದು, ಅಂಗಾಂಗ ದಾನಕ್ಕೆ ಪ್ರೇರಣೆ ನೀಡಿದ್ದಾರೆ. ವೈದ್ಯರ ಸೂಚನೆಯಂತೆ ಯುವಕನ ತಂದೆ ರಾಜು ನಾಯರಿ ಮಗನ ಅಂಗಗಳು ಅಗತ್ಯ ಇದ್ದವರಿಗೆ ನೆರವಾಗಲಿ, ಅವರಿಗೆ ಬದುಕು ನೀಡಲಿ ಎಂದು ಹಾರೈಸಿ ಒಪ್ಪಿಗೆ ನೀಡಿದ್ದಾರೆ.
ಯುವಕನ ಎರಡು ಕಿಡ್ನಿ, ಎರಡು ಕಾರ್ನಿಯಾ, ಲಿವರ್ ಮತ್ತು ಚರ್ಮವನ್ನು ದಾನ ಮಾಡಲಾಗಿದ್ದು, ಆರು ಮಂದಿಯ ಜೀವ ಉಳಿಸಲು ನೆರವಾಗಿದೆ. ರಾಜ್ಯ ಸರಕಾರದ ಜೀವ ಸಾರ್ಥಕತೆ ಯೋಜನೆಯಡಿ ಎರಡು ಕಿಡ್ನಿ, ಎರಡು ಕಾರ್ನಿಯಾ ಮತ್ತು ಚರ್ಮವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದು, ಲಿವರ್ ಅನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಂಗಾಂಗ ದಾನ ಅನ್ನುವುದು ಮಾದರಿ ಸೇವೆಯಾಗಿದ್ದು ನನ್ನ ಮಗ ಸಾವಿಗಿಂತಲೂ ಶ್ರೇಷ್ಠ ಕೆಲಸಕ್ಕೆ ಮಾದರಿಯಾಗಿದ್ದಾನೆ ಎಂದು ರಾಜು ನಾಯರಿ ಹೇಳಿದ್ದಾರೆ.
ಬೆಂಗಳೂರಿಗೆ ಅಂಗಾಂಗ ರವಾನೆ ಮಾಡುವ ಸಂದರ್ಭದಲ್ಲಿ ಉಡುಪಿಯಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ತರಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಮಣಿಪಾಲ ಆಸ್ಪತ್ರೆ ಅಧೀಕ್ಷಕ ಅವಿನಾಶ್ ಶೆಟ್ಟಿ ಪ್ರತಿಕ್ರಿಯಿಸಿ, ಇನ್ನೊಬ್ಬರ ಜೀವ ಉಳಿಸುವಲ್ಲಿ ಅಂಗಾಂಗ ದಾನ ಅತ್ಯಂತ ದೊಡ್ಡ ಪಾತ್ರ ವಹಿಸುತ್ತದೆ. ಜನರು ಇಂತಹ ಕಾರ್ಯಕ್ಕೆ ಪ್ರೇರಣೆ ಆಗಬೇಕು ಎಂದು ಹೇಳಿದ್ದಾರೆ.
A road accident occurred at 4.45 PM on April 2 at Uppinakote, Brahmavar taluk. Srinivas, a resident of Saligrama, aged 19 years, son of Raju Nairy, was severely injured and admitted to Kasturba Hospital, Manipal for treatment.Despite the doctors' effort to salvage him, the prognosis was poor and he did not show any signs of recovery. Hence, Srinivas was declared brain dead by the panel of expert doctors officially twice at 6-hour intervals. The first was at 3.15 PM on April 4 and the second at 7.50 AM on Tuesday, April 5, under the protocols and procedures of the 1994 Human Rights Act.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm