ಬ್ರೇಕಿಂಗ್ ನ್ಯೂಸ್
06-04-22 04:21 pm Mangalore Correspondent ಕರಾವಳಿ
ಮಂಗಳೂರು, ಎ.6: ಮಸೀದಿ ಆಜಾನ್ ಮೇಲಿನ ನಿಯಂತ್ರಣಕ್ಕಾಗಿ ಹಿಂದು ಸಂಘಟನೆಗಳ ಒತ್ತಾಯದ ಬೆನ್ನಲ್ಲೇ ಶಬ್ದಮಾಲಿನ್ಯ ತಡೆಯುವ ಸಲುವಾಗಿ ಪೊಲೀಸ್ ಇಲಾಖೆಯಿಂದ ದೇವಸ್ಥಾನ, ಮಸೀದಿ, ಚರ್ಚ್ ಸೇರಿ ಎಲ್ಲ ಕಡೆಗೂ ನೋಟೀಸ್ ನೀಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1001 ಸಂಸ್ಥೆಗಳಿಗೆ ಧ್ವನಿವರ್ಧಕದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದ ಇರಬೇಕೆಂದು ಸೂಚಿಸಿ ನೋಟೀಸ್ ನೀಡಲಾಗಿದೆ.
ಮಂಗಳೂರಿನಲ್ಲಿ ನೋಟೀಸ್ ಸಿಕ್ಕಿರುವ ದೇವಸ್ಥಾನಗಳಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನವೂ ಸೇರಿದೆ. ಅಲ್ಲದೆ, ನಗರದ ಪ್ರಮುಖ ಮಸೀದಿ ಬಾವುಟಗುಡ್ಡೆಯ ಈದ್ಗಾ ಮಸೀದಿ, ಬಂದರಿನ ಬದ್ರಿಯಾ ಮಸೀದಿ, ವೆಲೆನ್ಸಿಯಾ, ಅಲೋಶಿಯಸ್ ಚರ್ಚ್, ಅಲ್ಲಿನ ಶಿಕ್ಷಣ ಸಂಸ್ಥೆಗಳ ಹೆಸರೂ ಇದೆ. ಮಂಗಳೂರಿನಲ್ಲಿ ಒಟ್ಟು 357 ದೇವಸ್ಥಾನಗಳು, 168 ಮಸೀದಿ, 95 ಚರ್ಚ್ ಗಳಿಗೆ ನೋಟೀಸ್ ನೀಡಲಾಗಿದೆ.
106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಪ್ರದೇಶಗಳು, 98 ಮನರಂಜನಾ ಸಂಸ್ಥೆಗಳಿಗೂ ನೋಟೀಸ್ ರವಾನೆಯಾಗಿದೆ. ನಗರ ವ್ಯಾಪ್ತಿಯ ಒಂದು ಸಾವಿರದ ಒಂದು ಕಡೆಗಳಲ್ಲಿ ಈಗಾಗಲೇ ಧ್ವನಿವರ್ಧಕ ಬಳಕೆಗೆ ಪೊಲೀಸ್ ಅನುಮತಿ ಪಡೆದಿದ್ದು ಅವುಗಳೆಲ್ಲದಕ್ಕೂ ಎಚ್ಚರಿಕೆ ನೋಟೀಸ್ ರವಾನಿಸಲಾಗಿದೆ. ಇದಲ್ಲದೆ, ಧ್ವನಿವರ್ಧಕ ಬಳಸುತ್ತಿರುವ ಭಾರತ್ ಮಾಲ್, ಸಿಟಿ ಸೆಂಟರ್ ಮಾಲ್, ಪಬ್ಬಾಸ್ ಐಸ್ ಕ್ರೀಂ ಪಾರ್ಲರ್, ಫೋರಂ ಫಿಜಾ ಮಾಲ್, ರಿವರ್ ಡೇಲ್ ಸುಲ್ತಾನ್ ಬತ್ತೇರಿ ಹೀಗೆ ಎಲ್ಲೆಲ್ಲಿ ಮೈಕ್, ಧ್ವನಿವರ್ಧಕ ಬಳಸಲಾಗುತ್ತೆ ಅಲ್ಲಿನ ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದೆ.
ನೋಟೀಸ್ ನಲ್ಲಿ ಏನಿದೆ ? ಡೆಸಿಬಲ್ ಎಷ್ಟು ?
ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಹೊರಡಿಸಿರುವ ಆದೇಶದ ಪ್ರಕಾರ, 2010ರಲ್ಲಿ ತಿದ್ದುಪಡಿ ಕಾಯ್ದೆಯಂತೆ ವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ಕೈಗಾರಿಕೆ ಪ್ರದೇಶಗಳಲ್ಲಿ ಶಬ್ದಮಾಲಿನ್ಯ ತಡೆಗಟ್ಟುವ ಸಲುವಾಗಿ ಇಂತಿಷ್ಟೇ ಡೆಸಿಬಲ್ ಶಬ್ದ ಹೊರಡಿಸಬೇಕೆಂದು ಆದೇಶ ಮಾಡಲಾಗಿದೆ. ಅದರಂತೆ, ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಧ್ವನಿವರ್ಧಕದಿಂದ ಹಗಲಿನ ಸಮಯ(ಬೆಳಗ್ಗೆ 6ರಿಂದ ರಾತ್ರಿ 10) ದಲ್ಲಿ 75 ಡೆಸಿಬಲ್ ಮತ್ತು ರಾತ್ರಿ ಸಮಯ(ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ) ದಲ್ಲಿ 70 ಡೆಸಿಬಲ್ ಶಬ್ದ ಇರಬೇಕು. ವಾಣಿಜ್ಯ ಸಂಕೀರ್ಣದಲ್ಲಿ ಹಗಲಿನ ವೇಳೆ 65 ಮತ್ತು ರಾತ್ರಿ 55 ಡೆಸಿಬಲ್ ಇರಬೇಕು. ವಸತಿ ಇರುವ ಪ್ರದೇಶಗಳಲ್ಲಿ ಹಗಲಿನ ವೇಳೆ 55 ಮತ್ತು ರಾತ್ರಿ ಸಮಯ 45 ಡೆಸಿಬಲ್ ಇರಬೇಕು. ಸೈಲೆನ್ಸ್ ಝೋನ್ (ಶಾಂತ ವಲಯ) ಎಂದು ಘೋಷಿಸಲ್ಪಟ್ಟಿರುವ ಆಸ್ಪತ್ರೆ, ಶಾಲೆ, ಕಾಲೇಜು ಆವರಣದಲ್ಲಿ ಹಗಲು 50 ಮತ್ತು ರಾತ್ರಿ 40 ಡೆಸಿಬಲ್ ಅಷ್ಟೇ ಧ್ವನಿವರ್ಧಕ ಇರಬೇಕು ಎಂದು ಸೂಚಿಸಲಾಗಿದೆ.
ಕಾಯ್ದೆಯ ಪ್ರಕಾರ, ಧ್ವನಿವರ್ಧಕದ ಮಿತಿ ಇರಬೇಕು. ಕಾಯ್ದೆ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಆಯಾ ಸಂಸ್ಥೆಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಲ್ಲ ಸಂಸ್ಥೆಗಳಿಗೂ ನೋಟೀಸ್ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Amid the row over mosque loudspeakers, the Mangaluru Police on Wednesday issued an internal circular to initiate action against noise pollution in religious institutions and other places.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm