ಬ್ರೇಕಿಂಗ್ ನ್ಯೂಸ್
07-04-22 10:40 am Udupi Correspondent ಕರಾವಳಿ
ಉಡುಪಿ, ಎ.7: ಹಿಜಾಬ್ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಉಗ್ರರ ಲಿಂಕ್ ಹೊಂದಿರುವುದು ಖಾತ್ರಿಯಾಗಿದೆ. ಈ ಬಗ್ಗೆ ಎನ್ಐಎ ತನಿಖೆ ನಡೆಸಬೇಕು. ಇವರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆ ಕುಟುಂಬಸ್ಥರು ಮತ್ತು ಇಲ್ಲಿನ ಮುಸ್ಲಿಮ ಸಂಘಟನೆಗಳ ನಾಯಕರನ್ನು ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಹಿಜಾಬ್ ವಿಚಾರದಲ್ಲಿ ಮಂಡ್ಯದ ವಿದ್ಯಾರ್ಥಿನಿ ಮತ್ತು ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಅಲ್ ಖೈದಾ ಉಗ್ರವಾದಿ ಸಂಘಟನೆಯ ಮುಖ್ಯಸ್ಥ ಪ್ರಶಂಸೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಯಶಪಾಲ್ ಸುವರ್ಣ ಮತ್ತು ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇರುವ ಬಗ್ಗೆ ಮೊದಲೇ ಅನುಮಾನಗಳಿದ್ದವು. ಇದೀಗ ಅಲ್ ಖೈದಾ ಉಗ್ರರು ಹೇಳಿಕೆ ಬಿಡುಗಡೆ ಮಾಡಿದ್ದರಿಂದ ಇವರ ಸಂಚು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಆರು ವಿದ್ಯಾರ್ಥಿನಿಯರಿಗೆ ಸಮಾಜದಲ್ಲಿ ಬಹಿಷ್ಕಾರ ಹಾಕಬೇಕು. ಅಲ್ಲದೆ, ಅವರ ಕುಟುಂಬಸ್ಥರನ್ನು ತನಿಖೆಗೆ ಒಳಪಡಿಸಬೇಕು. ಅವರು ಉಗ್ರವಾದಿ ಸಂಘಟನೆಗಳ ಲಿಂಕ್ ಹೊಂದಿದ್ದು ಪೊಲೀಸರು ತನಿಖೆ ನಡೆಸಬೇಕು. ವಿದ್ಯಾರ್ಥಿನಿಯರಿಗೆ ಉಗ್ರರ ಸಂಪರ್ಕ ಹೊಂದಿರುವುದು ಹೌದಾದಲ್ಲಿ ದೇಶದಿಂದಲೇ ಗಡೀಪಾರು ಮಾಡಬೇಕು. ಇದರ ಬಗ್ಗೆ ಕೂಡಲೇ ರಾಜ್ಯ ಸರಕಾರ ತನಿಖೆಗೆ ಕ್ರಮ ಕೈಗೊಳ್ಳಬೇಕು. ನಾವು ಕುಳಿತು ಪ್ರೆಸ್ ಹೇಳಿಕೆ ಕೊಡುವುದರಿಂದ ಏನೂ ಪ್ರಯೋಜನ ಆಗೋದಿಲ್ಲ. ಇವರಿಗೆ ಬೆಂಬಲ ನೀಡುತ್ತಿರುವ ಕಾಣದ ಕೈಗಳನ್ನು ಬಯಲಿಗೆಳೆದು, ಅದರ ರೆಂಬೆ ಕೊಂಬೆಗಳನ್ನು ಕಟ್ ಮಾಡಿದರಷ್ಟೇ ನಮಗೆ ನ್ಯಾಯ ಸಿಕ್ಕಂತಾಗುವುದು. ಈ ವಿದ್ಯಾರ್ಥಿನಿಯರಿಗೆ ಉಳ್ಳಾಲದಲ್ಲಿ ಬಂಧಿತಳಾಗಿರುವ ಉಗ್ರವಾದಿ ಮಹಿಳೆಯ ಸಂಪರ್ಕ ಇರುವ ಶಂಕೆಯಿದ್ದು ಎನ್ಐಎ ತನಿಖೆ ನಡೆಸಿದಲ್ಲಿ ಮಾತ್ರ ಸತ್ಯ ಹೊರಬರಬಹುದು ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.
ಪ್ರಕರಣದಲ್ಲಿ ಇವರ ಶಾಮೀಲಾತಿ ಸಾಬೀತಾದಲ್ಲಿ ಆರೋಪಿಗಳಿಗೆ ಷರೀಯತ್ ಕಾನೂನು ಪ್ರಕಾರವೇ ದೇಶದ್ರೋಹಕ್ಕೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ಕೊಡಬೇಕು. ಇನ್ನಷ್ಟು ಮಂದಿ ಅಮಾಯಕರು ಬಲಿಯಾಗುವ ಮುನ್ನ ಸರಕಾರ ಎಚ್ಚತ್ತುಕೊಂಡು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಹಿಂದುತ್ವದ ನೆಲೆಯಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಅಗತ್ಯವಿದೆ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.
ಸರಕಾರ ಆಯಾ ಸಂದರ್ಭಗಳಲ್ಲಿ ಸೂಕ್ತವಾಗಿ ಸ್ಪಂದಿಸಬೇಕು. ಹಿಜಾಬ್ ವಿವಾದದ ಬಗ್ಗೆ ಆರಂಭದ ಹಂತದಲ್ಲೇ ಸೂಕ್ತವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುತ್ತಿದ್ದರೆ ಇಷ್ಟು ದೊಡ್ಡ ವಿವಾದ ಆಗುತ್ತಿರಲಿಲ್ಲ. ಇದಕ್ಕೆ ನಮ್ಮ ಸರಕಾರದ ವೈಫಲ್ಯವೂ ಕಾರಣ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.
In an insinuating statement, Hindutva leader and Udupi Government PU College Management Committee vice-president Yashpal Suvarna has suggested lapidation like in Sharia law for the six girl students of the college who fought for hijab rights accusing them of terror links.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
01-10-25 11:00 pm
Mangalore Correspondent
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm