ಬ್ರೇಕಿಂಗ್ ನ್ಯೂಸ್
09-04-22 03:31 pm Mangalore Correspondent ಕರಾವಳಿ
ಪುತ್ತೂರು, ಎ.9 : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವ ಎಪ್ರಿಲ್ 10 ರಿಂದ 20ರ ತನಕ ನಡೆಯಲಿದ್ದು, ಈ ಬಾರಿ ಅನ್ಯಧರ್ಮೀಯರಿಗೆ ಉತ್ಸವ ಸಂದರ್ಭದಲ್ಲಿ ವ್ಯಾಪಾರಕ್ಕೆ ನಿಷೇಧ ಹೇರುವ ಜೊತೆಗೆ ಆಟೋ ರಿಕ್ಷಾ ಸೇರಿ ಟ್ಯಾಕ್ಸಿ ವಾಹನಗಳಿಗೂ ನಿರ್ಬಂಧ ಹೇರಲು ಹಿಂದು ಸಂಘಟನೆಗಳು ಸಿದ್ಧತೆ ನಡೆಸಿವೆ.
ಪುತ್ತೂರು ಜಾತ್ರೆ ಸಂದರ್ಭದಲ್ಲಿ ಭಕ್ತರು ಮುಸ್ಲಿಮರ ಆಟೋ, ಕ್ಯಾಬ್ಗಳನ್ನು ಬಳಕೆ ಮಾಡದಂತಾಗಲು ಹಿಂದುಗಳ ಆಟೋ ಇನ್ನಿತರ ವಾಹನಗಳಿಗೆ ಕೇಸರಿ ಧ್ವಜ ನೀಡುವ ಅಭಿಯಾನಕ್ಕೆ ಹಿಂದು ಜಾಗರಣ ವೇದಿಕೆ ಮುಂದಾಗಿದೆ. ಪುತ್ತೂರಿನ ಆಟೋ ಚಾಲಕರಿಗೆ ಭಗವಧ್ವಾಜವನ್ನು ವಿತರಣೆ ಮಾಡಲಾಗುತ್ತಿದ್ದು ಹಿಂದುಗಳು ಮುಸ್ಲಿಮರ ವಾಹನಗಳನ್ನು ಕಾರ್ಯಕರ್ತರು ಬಳಸದಂತೆ ಕರೆ ನೀಡುತ್ತಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮೀಯ ಯುವಕರು ಹಿಂದು ಹೆಣ್ಣು ಮಕ್ಕಳನ್ನು ಮೋಸದ ಜಾಲದಲ್ಲಿ ಸಿಲುಕಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆಯ ನಾಯಕರು, ಭಗವಾಧ್ವಜ ಇರುವ ಆಟೋಗಳಲ್ಲಿ ಮಾತ್ರವೇ ಭಕ್ತಾದಿಗಳು ಜಾತ್ರೆಗೆ ಆಗಮಿಸಬೇಕು. ಅದಕ್ಕಾಗಿ ಹಿಂದುಗಳ ಆಟೋಗಳಿಗೆ ಕೇಸರಿ ಧ್ವಜ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದಿಂದ ಹಿಂದೂಗಳಿಗೆ ಯಾವುದೇ ಸಹಾಯ ದೊರೆಯುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲಾಗುತ್ತಿದ್ದು , ಅದಕ್ಕಾಗಿ ಹಿಂದು ಸಮಾಜವೇ ಸ್ವತಃ ಕಾರ್ಯಾಚರಣೆಗೆ ಇಳಿದಿದೆ ಎನ್ನುವ ವಾದವನ್ನು ಹಿಂಜಾವೇ ಮುಖಂಡರು ಮುಂದಿಟ್ಟಿದ್ದಾರೆ. ಹಿಂಜಾವೇ ಕಾರ್ಯಕರ್ತರ ಹೊಸ ನಡೆ ಚರ್ಚೆಗೆ ಕಾರಣವಾಗಿದ್ದು, ಧರ್ಮ ಸಂಘರ್ಷಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗಿದೆ.
ಇತ್ತೀಚೆಗೆ ಪುತ್ತೂರು ಜಾತ್ರೆ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ಅವಕಾಶ ಇಲ್ಲವೆಂದು ದೇವಸ್ಥಾನದ ಆಡಳಿತ ಮಂಡಳಿಯೇ ನಿರ್ಧಾರ ಮಾಡಿದ್ದಲ್ಲದೆ, ವ್ಯಾಪಾರಸ್ಥರ ಏಲಂ ಪ್ರಕಟಣೆಯಲ್ಲಿ ಬಹಿರಂಗವಾಗಿಯೇ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆಡಳಿತ ಮಂಡಳಿ ಸದಸ್ಯರು, 2013 ರಿಂದಲೇ ಇದೇ ನೀತಿ ಅನುಸರಿಸಲಾಗುತ್ತಿದೆ ಎಂದು ಹೇಳಿದ್ದರು.
Amid Hindu Muslim row in Karnataka a new controversy has erupted in Mangalore Dakshina Kannada at Puttur Shree Mahalingeshwara Temple annual feast where Muslim vehicles like auto cars two wheelers are not allowed inside the temple premises.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm