ಬ್ರೇಕಿಂಗ್ ನ್ಯೂಸ್
11-04-22 03:09 pm Mangalore Correspondent ಕರಾವಳಿ
ಮಂಗಳೂರು, ಎ.11 : ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ಇತಿಹಾಸ, ಸಂಸ್ಕೃತಿ ಇದೆ. ಬಿಜೆಪಿಯಿಂದ ಈ ರಾಜ್ಯದ ಘನತೆಗೆ ಕಪ್ಪು ಚುಕ್ಕೆಯಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರಕಾರ ದಿವಾಳಿಯಾಗಿದೆ. ಇಷ್ಟೆಲ್ಲ ಬೆಳವಣಿಗೆ ನಡೀತಿದ್ದರೂ, ಸಿಎಂ ಬೊಮ್ಮಾಯಿ ಮೌನವಾಗಿದ್ದಾರೆ. ಗೂಂಡಾಗಳ ಕೈಯಲ್ಲಿ ರಾಜ್ಯವನ್ನು ಕೊಟ್ಟಿದ್ದಾರೆ. ರಾಜ್ಯವನ್ನು ಗೂಂಡಾಗಳು ಆಳುತ್ತಿದ್ದಾರೆ ಎಂದು ವಿಪಕ್ಷ ಉಪ ನಾಯಕ, ಮಾಜಿ ಸಚಿವ ಯು.ಟಿ ಖಾದರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್, ರಾಜ್ಯದ ಸದ್ಯದ ಬೆಳವಣಿಗೆಯ ಬಗ್ಗೆ 95% ಜನರು ತಿರಸ್ಕಾರದ ಭಾವನೆ ಹೊಂದಿದ್ದಾರೆ. ಧಾರವಾಢದಲ್ಲಿ ನಾಲ್ಕು ಜನ ಯುವಕರು ಕಲ್ಲಂಗಡಿ ಹಣ್ಣುಗಳನ್ನು ಒಡೆದು ವ್ಯಾಪಾರಿ ಮೇಲೆ ಹಲ್ಲೆಗೈದ ಕೃತ್ಯವನ್ನು ಸಮಾಜ ಖಂಡಿಸಿದೆ. ಇಂತಹ ಕೆಲಸಗಳನ್ನು ಕ್ರೂರಿ ಮನಸ್ಸಿನ ಜನರಷ್ಟೇ ಮಾಡುತ್ತಾರೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಯಾರದ್ದು? ಮುಖ್ಯಮಂತ್ರಿ ಮೌನಿಯಾಗಿದ್ದರೆ ಜನ ಏನು ತಿಳಿದುಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕಾಗಿದೆ. ಇಲ್ಲವಾದಲ್ಲಿ ಕನ್ನಡಿಗರು ಸರ್ಕಾರವನ್ನು ಕ್ಷಮಿಸೋದೇ ಇಲ್ಲ ಎಂದು ಹೇಳಿದರು.
ಕೋಮುವಾದಿಗಳು ಮಾಡುತ್ತಿರುವ ವಿವಾದವನ್ನು ಸರ್ಕಾರ ಮಟ್ಟ ಹಾಕಬೇಕು. ಕೋಮುವಾದಿ ಶಕ್ತಿಗಳು ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದೆ. ಕೋಮುವಾದಿಗಳ ಅಜೆಂಡಾವನ್ನು ಸಮಾಜದಲ್ಲಿ ಸಫಲವಾಗಲು ಬಿಡಬಾರದು ಎಂದು ಯುಟಿ ಖಾದರ್ ಹೇಳಿದರು.
ಮರಳುಗಾರಿಕೆ ನೀತಿಯಿಲ್ಲದೆ ಜನರಿಗೆ ಸುಲಿಗೆ
ರಾಜ್ಯದಲ್ಲಿ ಮರಳು ಗಾರಿಕೆಗೆ ಸಮರ್ಪಕ ನೀತಿ ಇಲ್ಲದೆ ಜನ ಸಾಮಾನ್ಯರಿಗೆ ಮನೆ ಕಟ್ಟಲು ಮರಳು ದೊರೆಯದೆ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಸರಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಯು.ಟಿ.ಖಾದರ್ ಒತ್ತಾಯಿಸಿದರು. ಸರಕಾರ ಮರಳು ನೀತಿ ಜಾರಿಗೆ ತರಲು ವಿಫಲವಾಗಿದ್ದು ಕೆಲವರು ಅನಧಿಕೃತ ಮರಳುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಜನರು ದುಬಾರಿ ಬೆಲೆ ತೆತ್ತು ಮರಳು ಪಡೆಯುವಂತಾಗಿದೆ. ಸಿಆರ್ ಝೆಡ್ ಹೊರತಾದ ಪ್ರದೇಶದ ಮರಳು ಬ್ಲಾಕ್ ಗಳಲ್ಲಿ ಟೆಂಡರ್ ಕರೆದ ಬಳಿಕವೂ ಮರಳು ಎತ್ತಲು ಅವಕಾಶ ನೀಡಿಲ್ಲ. ಸೂಕ್ತ ಕಾರಣವಿಲ್ಲದೆ ಮರಳು ದರ ಏರಿಸಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಫಾರೂಕ್ ತುಂಬೆ, ಸುರೇಶ್ ಭಟ್ನಗರ, ಜಯರಾಜ್, ರವಿ ಕಾಪಿಕಾಡ್ ಉಪಸ್ಥಿತರಿದ್ದರು.
Deputy leader of the Congress party in the state legislative assembly and MLA U T Khader, slamming the BJP-led the state government said that goons are ruling the state of Karnataka and not the chief minister.Addressing a press meet at circuit house here on Monday April 11, Khader said, "The chief minister and his administration has failed to control the people with cruel mindset who disrupt peace, harmony and brotherhood in the state.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 03:07 pm
Mangalore Correspondent
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
Mangalore Accident, Kulur, Death: ಕುಳೂರಿನಲ್ಲಿ...
09-09-25 11:48 am
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm