ಬಲಿಪ ಶೈಲಿಯ ಸಿರಿಕಂಠದ ಪ್ರಸಾದ ಭಾಗವತರು ಇನ್ನಿಲ್ಲ

11-04-22 09:19 pm       Mangalore Correspondent   ಕರಾವಳಿ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತ, ಬಲಿಪ ಪರಂಪರೆಯ ಭಾಗವತರೆಂದೇ ಖ್ಯಾತಿ ಪಡೆದಿದ್ದ ಬಲಿಪ ಪ್ರಸಾದ ಭಾಗವತ (46) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮಂಗಳೂರು, ಎ.11: ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತ, ಬಲಿಪ ಪರಂಪರೆಯ ಭಾಗವತರೆಂದೇ ಖ್ಯಾತಿ ಪಡೆದಿದ್ದ ಬಲಿಪ ಪ್ರಸಾದ ಭಾಗವತ (46) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ತಂದೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಬಲಿಪ ನಾರಾಯಣ ಭಾಗವತರಿಂದಲೇ ಭಾಗವತಿಕೆ ಕಲಿತು ತನ್ನ 17ನೇ ವಯಸ್ಸಿನಲ್ಲೇ ಯಕ್ಷಗಾನ ಮೇಳದಲ್ಲಿ ಭಾಗವತಿಕೆ ಮಾಡಿದ್ದ ಪ್ರಸಾದ ಭಾಗವತರು, ತಂದೆಯ ಸಿರಿಕಂಠದ ರೀತಿಯಲ್ಲೇ ಪದ್ಯ ಹಾಡುವುದನ್ನು ರೂಢಿಸಿಕೊಂಡಿದ್ದರು.

ಹಿಂದಿನ ಕಾಲದಲ್ಲಿ ಬಲಿಪರ ಭಾಗವತಿಕೆ ಕೇಳಿದ್ದವರು ಮಗನ ಭಾಗವತಿಕೆಯಲ್ಲಿ ವ್ಯತ್ಯಾಸ ಕಾಣದಂತೆ ಸಿರಿಕಂಠ ಇತ್ತು. ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಎರಡನೇ ಮೇಳದಲ್ಲಿ ಮುಖ್ಯ ಭಾಗವತರ ಪಟ್ಟ ಪಡೆದುಕೊಂಡಿದ್ದರು. ಗಂಟಲು ಕ್ಯಾನ್ಸರ್ ಕಾಯಿಲೆಯಿಂದಾಗಿ ಈ ಬಾರಿ ಮೇಳದ ತಿರುಗಾಟಕ್ಕೆ ಹೋಗಿರಲಿಲ್ಲ. ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ಮೂಡುಬಿದಿರೆಯಲ್ಲಿ ನೆಲೆಸಿದ್ದ ಪ್ರಸಾದ ಭಾಗವತರು ಮೂರು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿದ್ದರು. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Mangalore Bhagavatha Balipa Prasad Bhat passed away on Monday, April 11. He was the main Bhagavatha of Kateel mela.