ಬ್ರೇಕಿಂಗ್ ನ್ಯೂಸ್
11-04-22 10:28 pm Mangalore Correspondent ಕರಾವಳಿ
ಮಂಗಳೂರು, ಎ.11: ಸ್ನೇಹಿತರಿಂದ ಸಾಲ ಮಾಡಿ ಹಿಂತಿರುಗಿಸಲಾಗದ ಬೇಸರದಲ್ಲಿ ಯುವಕನೊಬ್ಬ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ಕಾಟಿಪಳ್ಳ ನಿವಾಸಿ ಕ್ಯಾಂಡ್ರಿಕ್ ಲಾರೆನ್ಸ್ ಡಿಸೋಜ(24) ಮೃತ ವ್ಯಕ್ತಿ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸೋಮವಾರ ಬೆಳಗ್ಗೆ 11 ಗಂಟೆಗೆ ಮನೆ ಬಿಟ್ಟು ಹೋಗಿದ್ದ. ಪತ್ರವನ್ನು ನೋಡಿದ ತಾಯಿ ಬಳಿಕ ಹುಡುಕಾಟಕ್ಕೆ ತೊಡಗಿದ್ದರು. ಸುರತ್ಕಲ್ ಪೊಲೀಸರಿಗೂ ಮಾಹಿತಿ ನೀಡಿದ್ದರು. ಇದೇ ವೇಳೆ, ಮಧ್ಯಾಹ್ನ 3 ಗಂಟೆ ವೇಳೆಗೆ ಸುರತ್ಕಲ್ ಬಳಿಯ ಮಲ್ಲಮಾರು ಬೀಚ್ ನಲ್ಲಿ ಕ್ಯಾಂಡ್ರಿಕ್ ಲಾರೆನ್ಸ್ ಶವ ಪತ್ತೆಯಾಗಿದೆ.
ಡೆತ್ ನೋಟ್ ನಲ್ಲಿ ಕೆಲವರ ಹೆಸರು ಬರೆದಿದ್ದು ಅವರಿಗೆ ಆಗಬೇಕಾದ ಸಣ್ಣ ಪುಟ್ಟ ಹಣದ ಅವಶ್ಯಕತೆಗಳನ್ನು ಬರೆದಿದ್ದಾನೆ. ಅಲ್ಲದೆ, ಈ ಹಣವನ್ನು ಹಿಂತಿರುಗಿಸುವುದಕ್ಕಾಗಿ ತಾಯಿಯ ಬಂಗಾರವನ್ನು ಕೊಂಡೊಯ್ದಿದ್ದು 12 ಸಾವಿರ ರೂ.ಗೆ ಅಡವಿಟ್ಟಿದ್ದ. ಆದರೆ ಹಣವನ್ನು ಆಗಬೇಕಾದವರಿಗೆ ಹಿಂತಿರುಗಿಸಲಾಗದೆ ಕೈಯಲ್ಲಿ ಖರ್ಚಾಗಿ ಖಾಲಿಯಾಗಿತ್ತು ಎಂದು ಬರೆದಿದ್ದಾನೆ. ಜೊತೆಗೆ ಕುಡಿತದ ಚಟ ಹೊಂದಿದ್ದರಿಂದ ಅದಕ್ಕೇ ಹಣ ಖಾಲಿಯಾಗಿತ್ತು ಎನ್ನಲಾಗಿದೆ.
ಅಲ್ಲದೆ, ತನ್ನ ಮೊಬೈಲ್ ವಿವರಗಳನ್ನೂ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಗೂಗಲ್ ಪೇ, ಎಟಿಎಂ ಇತ್ಯಾದಿ ಪಾಸ್ ವರ್ಡ್ ಗಳನ್ನು ಬರೆದಿದ್ದಲ್ಲದೆ, ಮೇಲಿನ ಕಾರಣವಲ್ಲದೆ ಸಾವಿಗೆ ಪ್ರಮುಖ ಕಾರಣವೊಂದು ಮೊಬೈಲಿನಲ್ಲಿದೆ. ಸಾರಿ ಅಮ್ಮಾ ಎನ್ನುತ್ತಾ ಪತ್ರವನ್ನು ಬರೆದು ಮುಗಿಸಿದ್ದಾನೆ. ತುಳು ಭಾಷೆಯಲ್ಲಿ ಇಂಗ್ಲಿಷ್ ವರ್ಣಮಾಲೆಯಲ್ಲಿ ಪತ್ರವನ್ನು ಬರೆಯಲಾಗಿದೆ. ಸಾಮಾನ್ಯ ಕುಟುಂಬದ ಲಾರೆನ್ಸ್ ಸಣ್ಣ ವಯಸ್ಸಿನಲ್ಲಿಯೇ ಖಾಸಗಿಯಾಗಿ ಕೆಲಸಕ್ಕೆ ಸೇರಿದ್ದು ಕುಡಿಯುವುದನ್ನೂ ರೂಢಿಸಿಕೊಂಡಿದ್ದ. ಇದೀಗ ಸಣ್ಣ ಮಟ್ಟಿನ ಸಾಲದ ಮೊತ್ತವನ್ನೇ ದೊಡ್ಡ ಸಮಸ್ಯೆಯನ್ನಾಗಿಸಿ ಜೀವನ ಮುಗಿಸಿದ್ದಾನೆ. ಸುರತ್ಕಲ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
A 20-year-old young man killed himself by drowning in Surathkal poice station limits on Monday, April 11. The deceased youth is Kandrik Lawrence D'Souza, son of 65-year-old Karnel D'Souza, a resident of Katipalla in Surathkal.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm