ಬ್ರೇಕಿಂಗ್ ನ್ಯೂಸ್
13-04-22 05:20 pm Mangalore Correspondent ಕರಾವಳಿ
ಉಳ್ಳಾಲ, ಎ.13 : ಚರ್ಚ್ ತೆರಳಿ ಮನೆಗೆ ವಾಪಾಸಾಗಿದ್ದ ಬಾಲಕ ಧಿಡೀರ್ ನಾಪತ್ತೆಯಾದ ಘಟನೆ ಉಳ್ಳಾಲ ಬೈಲಿನ ಗಣೇಶನಗರದಲ್ಲಿ ನಡೆದಿದೆ. ಬಾಲಕ ಅಪಹರಣಕ್ಕೀಡಾದ ಶಂಕೆ ವ್ಯಕ್ತವಾಗಿದ್ದು ಉಳ್ಳಾಲ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಳ್ಳಾಲ ಬೈಲು, ಗಣೇಶ ನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಸ್ಕಿನ್ಹಾ - ರೋಹಿತ ಬ್ರಾಕ್ಸ್ ದಂಪತಿಯ ಪ್ರಥಮ ಪುತ್ರ ರಿಯಾನ್ (9) ನಾಪತ್ತೆಯಾದ ಬಾಲಕ. ರಿಯಾನ್ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಮೂರನೇ ತರಗತಿ ಮುಗಿಸಿದ್ದ. ರಿಯಾನ್ ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ತೊಕ್ಕೊಟ್ಟು ಚರ್ಚ್ ತೆರಳಿದ್ದು ಮಧ್ಯಾಹ್ನ 1.35 ಗಂಟೆಗೆ ವಾಪಾಸಾಗಿದ್ದ. ಚರ್ಚಿನಿಂದ ವಾಪಸಾದ ರಿಯಾನ್ ಗಣೇಶ್ ನಗರದ ತನ್ನ ದೊಡ್ಡಮ್ಮನ ಮನೆಗೆ ತೆರಳಿದ್ದು ಅಲ್ಲಿದ್ದ ತಾಯಿ ತಮ್ಮ ಬಾಡಿಗೆ ಮನೆಯ ಕೀಲಿ ಕೈಯನ್ನ ರಿಯಾನಲ್ಲಿ ನೀಡಿ ಮನೆಗೆ ಹೋಗಲು ಹೇಳಿದ್ದಾರೆ. ರಿಯಾನ್ ತಾಯಿ ರೋಹಿತ ಅವರು 2 ಗಂಟೆ ಸುಮಾರಿಗೆ ಮನೆಗೆ ತೆರಳಿದಾಗ ಕಿಟಕಿಯಲ್ಲಿ ಮನೆಯ ಕೀಲಿ ಕೈ ಇದ್ದು ರಿಯಾನ್ ನಾಪತ್ತೆಯಾಗಿದ್ದಾನೆ. ಗಲಿ ಬಿಲಿಗೊಂಡ ರಿಯಾನ್ ಕುಟುಂಬಸ್ಥರು ಮತ್ತು ಸ್ಥಳೀಯರು ಬಾಲಕನಿಗಾಗಿ ಶೋಧ ನಡೆಸಿದ್ದಾರೆ.
ರಿಯಾನ್ 1.30 ಗಂಟೆಗೆ ಚರ್ಚಿಂದ ವಾಪಸಾದದ್ದನ್ನ ಸ್ಥಳೀಯರು ಗಮನಿಸಿದ್ದಾರೆ. ಘಟನೆಯ ಬಗ್ಗೆ ರಿಯಾನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸ್ಥಳೀಯ ಮನೆಯೊಂದರ ಸಿಸಿಟಿವಿ ಪೂಟೇಜನ್ನ ಪರಿಶೀಲನೆ ನಡೆಸುತ್ತಿದ್ದಾರೆ.ರಿಯಾನ್ ಗೆ ಇದೇ ಬರುವ ಎಪ್ರಿಲ್ 24 ರಂದು ಪೋಷಕರು ಹೋಲಿ ಕಮಿನಿಯನ್ ನಡೆಸಲು ತಯಾರಿಯಲ್ಲಿದ್ದರು ಎನ್ನಲಾಗಿದೆ.
Mangalore Nine year old boy goes missing after coming from church, kidnap suspected in Ullal. Riyan is the boy found missing. Royal is said to be of class three. A missing case has been registered at Ullal police station. April 24th Riyan had his holy communion in the church.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm