ಬ್ರೇಕಿಂಗ್ ನ್ಯೂಸ್
14-04-22 10:13 pm Udupi Correspondent ಕರಾವಳಿ
ಉಡುಪಿ, ಎ.14: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಉಡುಪಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತೋಷ್ ಸಾವಿನ ಪ್ರಕರಣದಲ್ಲಿ ನಾನಾ ರೀತಿಯ ಸಂಶಯಗಳು, ಪ್ರಶ್ನೆಗಳಿದ್ದು, ಈ ಬಗ್ಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಸಂತೋಷ್ ಪಾಟೀಲ್ ಜೊತೆಗೆ ಬಂದಿದ್ದ ಇಬ್ಬರು ಸ್ನೇಹಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಂತೋಷ್ ಪಾಟೀಲ್ ಸಾವಿನಲ್ಲಿ ಇಬ್ಬರು ಸ್ನೇಹಿತರೇ ಪ್ರಬಲ ಸಾಕ್ಷೀದಾರರು. ಎ.11ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಉಡುಪಿಗೆ ಬಂದಿದ್ದರಿಂದ ಅದೇ ದಿನ ಸಂತೋಷ್ ಪಾಟೀಲ್ ಮುಖ್ಯಮಂತ್ರಿ ಭೇಟಿಗಾಗಿ ಆಗಮಿಸಿದ್ದರೇ ಎನ್ನುವ ಸಂದೇಹಗಳಿವೆ. ಸಿಎಂ ಭೇಟಿಗಾಗಿ ಉಡುಪಿಗೆ ಬಂದಿದ್ದು ಹೌದಾಗಿದ್ದರೆ ಯಾಕೆ ಭೇಟಿ ಸಾಧ್ಯವಾಗಿಲ್ಲ ಎನ್ನುವ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಉತ್ತರ ಪಡೆಯಲು ಆತನ ಜೊತೆಗಿದ್ದ ಸ್ನೇಹಿತರಾದ ಸಂತೋಷ್ ಮಡಿಕೇರಿ ಮತ್ತು ಪ್ರಶಾಂತ್ ಬೈಂದೂರು ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಸಂತೋಷ್ ಪಾಟೀಲ್ ಸಾವಿನ ಬಗ್ಗೆ ತಿಳಿದು ಎರಡು ದಿನ ಕಳೆದರೂ, ಆತನ ಜೊತೆಗಿದ್ದವರು ಮಾಧ್ಯಮದ ಮುಂದೆ ಬಂದಿಲ್ಲ. ಇಬ್ಬರು ಸ್ನೇಹಿತರು ಜೊತೆಗಿದ್ದರು ಅನ್ನೋದು ಪೊಲೀಸರಿಂದ ತಿಳಿಸಿರುವ ಮಾಹಿತಿಯಷ್ಟೇ. ಹಾಗಾಗಿ ಅವರಿಬ್ಬರನ್ನೂ ಪೊಲೀಸರು ನಿಗೂಢ ಜಾಗದಲ್ಲಿ ಇಟ್ಟಿರುವ ಸಾಧ್ಯತೆ ಬಗ್ಗೆ ಅನುಮಾನಗಳಿವೆ. ಬುಧವಾರ ಸಂಜೆಯಷ್ಟೇ ವಿಧಿ ವಿಜ್ಞಾನ ತಜ್ಞರ ಪರಿಶೀಲನೆ ಮತ್ತು ಶವದ ಪೋಸ್ಟ್ ಮಾರ್ಟಂ ನಡೆದಿದ್ದು, ಅದರ ವರದಿ ಬಂದ ಬಳಿಕ ಸಾಕಷ್ಟು ಅನುಮಾನಗಳಿಗೆ ಉತ್ತರ ಸಿಗಲಿದೆ.
ಸಂತೋಷ್ ಪಾಟೀಲ್ ಮೃತದೇಹ ಇದ್ದ ಕೊಠಡಿಯಲ್ಲಿ ಆತ ಒಬ್ಬಂಟಿಯಾಗಿದ್ದುದಲ್ಲದೆ, ಬಿಸ್ಕೆಟ್ ಪ್ಯಾಕ್, ಕೋಲ್ಡ್ ಡ್ರಿಂಕ್ಸ್ ಬಾಟಲಿ ಮತ್ತು ಕಸದ ಬುಟ್ಟಿಯಲ್ಲಿ ವಿಷದ ಬಾಟಲಿ ಪತ್ತೆಯಾಗಿತ್ತು. ಈ ಮೂರನ್ನೂ ಸಂತೋಷ್ ಪಾಟೀಲ್ ಸ್ನೇಹಿತರ ಜೊತೆಗೆ ಬರುವಾಗಲೇ ಪಡೆದುಕೊಂಡು ಬಂದಿದ್ದರೆ ಜೊತೆಗಿದ್ದವರಿಗೆ ತಿಳಿಯಲಿಲ್ಲವೇ..? ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳವುದು ಸ್ನೇಹಿತರಿಗೆ ತಿಳಿದಿತ್ತೇ ಅಥವಾ ಹೊರಗಿನ ವ್ಯಕ್ತಿಗಳು ವಿಷ ಬೆರಸಿ ಕೊಟ್ಟಿದ್ದರೇ ಇತ್ಯಾದಿ ಅನುಮಾನಗಳಿವೆ. ಇದಲ್ಲದೆ, ಸಾವಿಗೆ ಶರಣಾಗುವ ಬಗ್ಗೆ ಸಂತೋಷ್ ಪಾಟೀಲ್ ತನ್ನ ಕುಟುಂಬಿಕರಿಗೆ ಯಾವುದೇ ಸುಳಿವು ಕೊಟ್ಟಿರಲಿಲ್ಲ. ಮುನ್ನಾ ದಿನವೂ ಪತ್ನಿ ಮತ್ತು ಮಗುವಿನ ಜೊತೆ ಸಹಜವಾಗಿಯೇ ಮಾತನಾಡಿದ್ದ. ಹೀಗಾಗಿ ಸಾವಿನ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಸಂತೋಷ್ ಪಾಟೀಲ್ ಮೊಬೈಲ್, ಕೊನೆಯ ಬಾರಿಗೆ ಮಾಡಿರುವ ಕರೆಗಳು, ಸ್ನೇಹಿತರ ಜೊತೆಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಇತ್ಯಾದಿ ವಿಚಾರಗಳ ಬಗ್ಗೆ ತನಿಖೆ ಸಾಗಿದೆ. ಇದೇ ವೇಳೆ ಉಡುಪಿ ನಗರ ಪೊಲೀಸರು ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಕುಂದಾಪುರ, ಚಿಕ್ಕಮಗಳೂರಿಗೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ. ಸಾವಿಗೂ ಹಿಂದಿನ ಒಂದು ವಾರ ಕಾಲ ಸಂತೋಷ್ ಪಾಟೀಲ್ ಮನೆಗೆ ತೆರಳಿರಲಿಲ್ಲ. ಈ ಸಂದರ್ಭದಲ್ಲಿ ಆತ ಎಲ್ಲೆಲ್ಲಿ ಓಡಾಡಿದ್ದ, ಯಾರನ್ನೆಲ್ಲ ಭೇಟಿಯಾಗಿದ್ದ, ಸಂತೋಷ್ ಕೊಲೆಗೆ ಯಾರಾದ್ರೂ ಹಿಡನ್ ಜಾಲ ಹೆಣೆದಿದ್ದರೇ ಎನ್ನುವ ಬಗ್ಗೆಯೂ ತನಿಖೆಯ ಜಾಡು ಸಾಗಿದೆ. ಉಡುಪಿ ನಗರ ಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
The Santosh suicide case has become a high profile one in the state political circles, causing upheavals in the state's polity. Many questions are being raised about Santosh's unnatural death. Why did a Belagavi contractor come to Udupi to end his life? What were his plans when CM Bommai was on a visit to Udupi on April 11 for which he was invited? Whom did he want to meet?
10-12-25 12:58 pm
Bangalore Correspondent
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಅ...
08-12-25 10:39 pm
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
09-12-25 07:30 pm
HK News Desk
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟ...
09-12-25 11:55 am
ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್ ; ವ...
08-12-25 10:11 pm
Mangalore, Puttur, Mahesh Shetty Timarodi: ಪ್...
08-12-25 04:52 pm
09-12-25 04:33 pm
Mangalore Correspondent
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm