ಬ್ರೇಕಿಂಗ್ ನ್ಯೂಸ್
16-04-22 02:45 pm Mangalore Correspondent ಕರಾವಳಿ
ಮಂಗಳೂರು, ಎ.16: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜಿನಾಮೆ ಪಡೆದಿದ್ದು ಬಿಜೆಪಿಯ ಕುತಂತ್ರ, ಬೂಟಾಟಿಕೆಯ ರಾಜಕಾರಣ ಮಾತ್ರ. ತನಿಖೆ ನಡೆಸುತ್ತೇವೆ ಎಂದು ಹೇಳಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಿ ಆರೋಪಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಡೆತ್ ನೋಟಲ್ಲಿ ಈಶ್ವರಪ್ಪ ಮತ್ತು ಅವರ ಪಿಎ ಹೆಸರು ಇರುವುದರಿಂದ ಪೊಲೀಸರು ಅವರನ್ನು ಬಂಧಿಸಬೇಕು ಎಂದು ಹಿಂದು ಮಹಾಸಭಾ ಆಗ್ರಹಿಸಿದೆ.
ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಸುದ್ದಿಗೋಷ್ಠಿ ನಡೆಸಿ, ಈ ಹಿಂದೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಕಾಂಗ್ರೆಸಿಗರು ಆರೋಪಿ ಸ್ಥಾನದಲ್ಲಿದ್ದ ಕೆ.ಎಸ್. ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದಾರೆ. ಇವರಿಗೆ ಕ್ಲೀನ್ ಚಿಟ್ ನೀಡುವುದಷ್ಟೇ ಅಜೆಂಡಾ. ಯಾವುದೇ ವ್ಯಕ್ತಿ ಮರಣ ಕಾಲದಲ್ಲಿ ತನಗೆ ಕಿರುಕುಳ ನೀಡಿದವರ ಹೆಸರು ಹೇಳಿದರೆ, ಆ ಬಗ್ಗೆ ಪತ್ರ ಬರೆದಿಟ್ಟು ಸತ್ತರೆ ಅದು ಮರಣ ಪತ್ರವೇ ಆಗುತ್ತದೆ. ವಾಟ್ಸಪ್ ನಲ್ಲಿ ಪತ್ರ ಬರೆದರೂ, ಅದನ್ನು ಡೆತ್ ನೋಟ್ ಎಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಹೊರಗೆ ಬಿಟ್ಟುಕೊಂಡು ತನಿಖೆ ನಡೆಸುವುದಂದ್ರೆ ಅದು ನಾಟಕ ಅಷ್ಟೇ. ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಈಶ್ವರಪ್ಪ ಧರ್ಮಸ್ಥಳದಲ್ಲಿ ಆಣೆ ಮಾಡಲಿ

ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಮಾತನಾಡಿ, ಈಶ್ವರಪ್ಪ ತಾವು ತಪ್ಪೇ ಮಾಡಿಲ್ಲ, ತನಿಖೆ ನಡೆಸಿ ಶಿಕ್ಷೆ ಕೊಡಿ ಎಂದು ಹೇಳುತ್ತಿದ್ದಾರೆ. ಇವರು ತಪ್ಪು ಮಾಡಿಲ್ಲ ಎಂದು ತಾನೇ ಹೇಳಿಕೊಂಡರೆ ಸಾಲದು. ತಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ. ಸಂತೋಷ್ ಪಾಟೀಲ್ ಸಾವಿನ ವಿಚಾರದಲ್ಲಿ ಇವರು ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಇರಲಿ, ಮತ್ತಿನ್ನಾರೋ ಇರಲಿ. ಇವರದೇ ಸರಕಾರ ಇರುವಾಗ ಯಾಕೆ ಆರೋಪ ಮಾಡಬೇಕು. ಇವರು ತನಿಖೆ ನಡೆಸಿ, ಸತ್ಯಾಂಶ ಹೊರತರಲಿ. ಅದು ಬಿಟ್ಟು ಅಷ್ಟೆಲ್ಲಾ ಕಾಮಗಾರಿ ಮಾಡಿರುವಾಗ ತನಗೇ ಗೊತ್ತೇ ಇಲ್ಲ ಎನ್ನುವುದು, ಸಂತೋಷ್ ಪಾಟೀಲ್ ಪರಿಚಯವೇ ಇಲ್ಲ ಎನ್ನುವುದು ಬೂಟಾಟಿಕೆ ಮಾತ್ರ. ಸಂತೋಷ್ ಕುಟುಂಬಕ್ಕೆ ನ್ಯಾಯ ಸಿಗಬೇಕಿದ್ದರೆ ಸರಕಾರ ವಿಸರ್ಜಿಸಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಎದುರಿಸಲಿ ಎಂದು ಹೇಳಿದರು.
ಮಹಾಸಭಾ ಮಾತೃಪಕ್ಷ ಎನ್ನುವ ಯೋಗ್ಯತೆ ಇದೆಯೇ ?

ನಿಮ್ಮ ಪಕ್ಷದ ಬಗ್ಗೆಯೇ ಆರೋಪಗಳಿವೆ, ನಿಮ್ಮ ಒರಿಜಿನಲ್ ಯಾವುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜೇಶ್ ಪವಿತ್ರನ್, ಅದೆಲ್ಲಾ ಬಿಜೆಪಿಯವರ ಕುತಂತ್ರ. ಬಿಜೆಪಿ ಎನ್ನುವುದು ಜನಸಂಘದಿಂದ ಒಡೆದು ಬಂದಿರುವ ಪಕ್ಷ. ಆದರೆ ಹಿಂದು ಮಹಾಸಭಾ, ಕಾಂಗ್ರೆಸ್ ಹುಟ್ಟುವ ಮೊದಲೇ 1985ರಲ್ಲಿ ಸ್ಥಾಪನೆಯಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ತ್ಯಾಗ ಮಾಡಿದ್ದಾರೆ. ಶ್ಯಾಮಪ್ರಸಾದ್ ಮುಖರ್ಜಿ ಸೇರಿ 22 ಮಂದಿ ನಮ್ಮವರೇ ಸಂಸದರೂ ಆಗಿದ್ದರು. ಸಾವರ್ಕರ್, ಪಂಡಿತ್ ಗೋಡ್ಸೆ ನಮ್ಮ ನಾಯಕರಾಗಿದ್ದವರು. ಕಾಂಗ್ರೆಸ್ ನಾಯಕರು, ಬಿಜೆಪಿಯವರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ ಇಲ್ಲ ಎಂದು ಕೆದಕಿದರೆ, ಇವರಿಗೆ ಹಿಂದು ಮಹಾಸಭಾ ನಮ್ಮ ಮಾತೃಪಕ್ಷ ಎಂದು ಹೇಳುವ ಯೋಗ್ಯತೆ ಇದೆಯಾ..? ಢೋಂಗಿ ಹಿಂದುತ್ವ ಕಟ್ಟಿಕೊಂಡು ಇವರು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಐತಿಹಾಸಿಕ ಹಿನ್ನೆಲೆಯೇ ಇಲ್ಲ.
ಹಿಂದು ಮಹಾಸಭಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಕಾಂಗ್ರೆಸ್ ನಲ್ಲಿ ಗಾಂಧಿ ಇದ್ದರೆ, ಮಹಾಸಭಾದಲ್ಲಿ ಸಾವರ್ಕರ್ ಸೇರಿ ಸಾವಿರಾರು ಮಂದಿ ಕ್ರಾಂತಿಕಾರಿಗಳಿದ್ದರು. ಬಿಜೆಪಿಯ ಢೋಂಗಿ ರಾಜಕಾರಣಿಗಳು ಹಿಂದುತ್ವದ ಮತಬ್ಯಾಂಕ್ ಒಡೆಯುವ ಭಯದಲ್ಲಿ ಹಿಂದು ಮಹಾಸಭಾವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ಉಚ್ಚಾಟನೆ ಆದವರನ್ನು ಹಣ ಕೊಟ್ಟು ಅಧ್ಯಕ್ಷನಾಗಿ ಮಾಡಿ, ಪಕ್ಷ ಒಡೆಯುತ್ತಿದ್ದಾರೆ. ಕಳೆದ ಬಾರಿ ದೇವಸ್ಥಾನ ಒಡೆದ ಪ್ರಕರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾರಣಕ್ಕೆ ಪೊಲೀಸರ ಮೂಲಕ ನಮ್ಮ ಮೇಲೆ 420 ಕೇಸ್ ದಾಖಲಿಸಿದ್ದರು. ನಾವು ದೇವಸ್ಥಾನದ ಕಾಣಿಕೆ ಹುಂಡಿ ದೋಚಿಲ್ಲ. ಯಾರಿಗೂ ಮೋಸ ಮಾಡಿರಲಿಲ್ಲ. ಆದರೆ 420 ಸೆಕ್ಷನ್ ಅಡಿ ಮೋಸ ಎಸಗಿದ್ದಾಗಿ ಪೊಲೀಸರು ಕೇಸು ಹಾಕಿದ್ದರು. ಕೇಳಿದ್ದಕ್ಕೆ, ಮೇಲಿನಿಂದ ಒತ್ತಡಗಳಿರುವುದರಿಂದ ಕೇಸು ಹಾಕಿದ್ದೇವೆ ಎಂದಿದ್ದರು. ಇವರ ನಕಲಿ, ಬೂಟಾಟಿಕೆಯ ಹಿಂದುತ್ವಕ್ಕೆ ಧಿಕ್ಕಾರ ಕೂಗುವ ಕಾಲ ಬಂದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಂದು ಮಹಾಸಭಾ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ, ಹರ್ಷ ನಾಯಕ್, ಶಿವಪ್ರಸಾದ್ ಉಪಸ್ಥಿತರಿದ್ದರು.
Akhila Bharath Hindu Mahasabha demanded the arrest of minister K S Eshwarappa who was held responsible for his death by contractor Santhosh K Patil in his death note.Addressing media here on Saturday April 16, state president of Akhila Bharath Hindu Mahasabha, Rajesh Pavithran said, “A Hindu representative has ended his life and held minister Eshwarappa responsible for the suicide.
19-11-25 12:20 pm
HK News Desk
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
19-11-25 11:10 am
HK News Desk
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
19-11-25 01:01 pm
Mangalore Correspondent
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am