ಬ್ರೇಕಿಂಗ್ ನ್ಯೂಸ್
19-04-22 10:30 pm Mangalore Correspondent ಕರಾವಳಿ
ಉಳ್ಳಾಲ, ಎ.19: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೈದಿದ್ದ ಉಡುಪಿ ಶಾಂಭವಿ ಲಾಡ್ಜಲ್ಲಿ ಇಂದು ಉಳ್ಳಾಲದ ಯುವಕನೊಬ್ಬ ಆತ್ಮಹತ್ಯೆಗೈದಿದ್ದಾನೆ.
ಸೋದರ ಮಾವ ಮತ್ತು ಪ್ರೇಯಸಿಯ ತಂದೆ ಮೃತ ಯುವಕನಿಗೆ ಥಳಿಸಿದ್ದಲ್ಲದೆ, ಪ್ರೇಯಸಿಯ ಕಾಲನ್ನು ಹಿಡಿಸಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಅಂಬ್ಲಮೊಗರು ಗ್ರಾಮದ ಮದಕ ನಿವಾಸಿ ಶರಣ್ ರಾಜ್ ಪೂಜಾರಿ(31) ಆತ್ಮಹತ್ಯೆಗೈದ ಯುವಕ. ಶರಣ್ ಮಂಗಳೂರಿನಲ್ಲಿ ಮೆಡಿಕಲ್ ರೆಫ್ ಆಗಿ ಕೆಲಸ ಮಾಡುತ್ತಿದ್ದ. ತೊಕ್ಕೊಟ್ಟಿನ ಪ್ರಖ್ಯಾತ ಇಂಟೀರಿಯರ್ ಡೆಕೊರೇಟರ್ ಮಾತ್ರವಲ್ಲದೆ ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ಸಂಘಟನೆಯೊಂದರ ಪ್ರಭಾವಿ ಮುಖಂಡನೋರ್ವನ ಅಣ್ಣನ ಮಗಳು ಮತ್ತು ಶರಣ್ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಯುವತಿಗೆ ಪೋಷಕರು ಇತ್ತೀಚೆಗಷ್ಟೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನಡೆಸಿದ್ದರಂತೆ. ಇದರಿಂದ ವಿಚಲಿತನಾದ ಶರಣ್ ನಿಶ್ಚಿತಾರ್ಥಗೈದ ಯುವಕನಲ್ಲಿ ತಮ್ಮಿಬ್ಬರ ಪ್ರೇಮದ ಬಗ್ಗೆ ತಿಳಿಸಿದ್ದ ಎನ್ನಲಾಗಿದೆ.
ಮೊನ್ನೆ ಆದಿತ್ಯವಾರ ಮಧ್ಯಾಹ್ನದ ವರೆಗೂ ಶರಣ್ ಅಂಬ್ಲಮೊಗರಿನ ಬಸ್ತಿಪಡ್ಪು ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ಆಡಿದ್ದಾನೆ. ಈ ವೇಳೆ ಶರಣ್ ಸೋದರ ಮಾವನೇ ಶರಣ್ ನನ್ನು ಎಲಿಯಾರ್ ಪದವಿನ ಬಾರ್ದಡ್ಕ ಎಂಬ ನಿರ್ಜನ ಸ್ಥಳಕ್ಕೆ ಕರ್ಕೊಂಡು ಹೋಗಿದ್ದರು ಎನ್ನಲಾಗುತ್ತಿದ್ದು ಅಲ್ಲಿ ಶರಣ್ ಪ್ರೇಯಸಿ ತಂದೆ, ಸೋದರ ಮಾವ ಇನ್ನಿತರರು ಸೇರಿ ಶರಣ್ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದರು ಎನ್ನುವ ಆರೋಪಗಳಿವೆ. ಇದಲ್ಲದೆ ಪ್ರೇಯಸಿಯ ಕಾಲನ್ನ ಒತ್ತಾಯಪೂರ್ವಕ ಹಿಡಿಸಿ ಕ್ಷಮೆ ಕೇಳುವಂತೆ ಮಾಡಿಸಿದ್ದಾರೆ. ಅಲ್ಲದೆ ಶರಣ್ ಮೊಬೈಲನ್ನು ಕೂಡ ಕಿತ್ಕೊಂಡಿದ್ದರಂತೆ.
ಸಂಬಂಧಿಕರೇ ಪ್ರೇಯಸಿ ತಂದೆಯೊಂದಿಗೆ ಸೇರಿ ಹಲ್ಲೆ ನಡೆಸಿದ್ದರಿಂದ ಅವಮಾನ ತಡೆಯಲಾರದೆ ಶರಣ್ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ. ತಂದೆಯ ಮೊಬೈಲನ್ನ ಇಸ್ಕೊಂಡ್ ಹೋಗಿದ್ದ ಶರಣ್ ಹೊಸ ಕ್ಯಾಮೆರಾ ಮೊಬೈಲ್ ಖರೀದಿಸಿ ಅದರಲ್ಲಿ ತನ್ನ ಸಾವಿಗೆ ಕಾರಣರಾದವರ ಬಗ್ಗೆ ವೀಡಿಯೋ ಸಾಕ್ಷ್ಯ ಹೇಳಿ ನೇಣಿಗೆ ಶರಣಾಗಿದ್ದಾರೆಂದು ಅವರ ಆಪ್ತರು ಹೇಳಿದ್ದಾರೆ. ಮಂಗಳವಾರ ಶರಣ್ ಉಡುಪಿಯ ಶಾಂಭವಿ ಲಾಡ್ಜಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.
ಮೃತ ಶರಣ್ ಕಳೇಬರ ಮಂಗಳವಾರ ಸಾಯಂಕಾಲ ಮದಕಕ್ಕೆ ಆಗಮಿಸುತ್ತಿದ್ದಂತೆ ಶರಣ್ ಸೋದರ ಮಾವ ಆಗಮಿಸಿದ್ದು ಶರಣ್ ಸ್ನೇಹಿತರು, ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಕೊಣಾಜೆ ಪೊಲೀಸರ ಸಮಕ್ಷಮದಲ್ಲಿ ಮೃತ ಶರಣ್ ಅಂತ್ಯಕ್ರಿಯೆ ನೆರವೇರಿದೆ.
Ullal youth suicide in Shambhavi lodge at udupi, thrashed by lovers father suspected for suicide. One more person dies by suicide at Shambhavi Hotel here, which was known all over the state for the suicide of contractor Santhosh K Patil, who alleged demand of commission from minister K S Eshwarappa. Sharan (33), a medical representative of Mangaluru origin, killed himself by hanging on Tuesday April 19.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm