ಬ್ರೇಕಿಂಗ್ ನ್ಯೂಸ್
28-04-22 01:39 pm Mangalore Correspondent ಕರಾವಳಿ
ಮಂಗಳೂರು, ಎ.28: ಕ್ರಿಶ್ಚಿಯನ್ ಶಾಲೆಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ತರಗತಿಗಳನ್ನ ನಡೆಸುವಂತಿಲ್ಲ. ಶಾಲೆಯ ಆವರಣದಲ್ಲಿ ಬೈಬಲ್, ಕುರಾನ್ ರೀತಿಯ ಧರ್ಮಾಧಾರಿತ ತರಗತಿಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪುನರುಚ್ಚರಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಯಾವ ಶಾಲೆಗಳು ಕರ್ನಾಟಕ ಶಿಕ್ಷಣ ಇಲಾಖೆಗೆ ನೋಂದಣಿ ಮಾಡಿಕೊಂಡಿರುತ್ತವೋ ಆ ಎಲ್ಲಾ ಶಾಲೆಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಶಿಕ್ಷಣ ಕಾಯ್ದೆ ಪ್ರಕಾರ ಯಾವುದೇ ಧರ್ಮದ ಪಠ್ಯ ಪುಸ್ತಕವನ್ನ ಶಾಲೆಗಳಲ್ಲಿ ತರಲು ಅವಕಾಶವಿಲ್ಲ. ಆದರೆ ಕೆಲವು ಕ್ರಿಶ್ಚಿಯನ್ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬೈಬಲ್ ತರಬೇಕು ಎಂಬ ನಿಯಮ ಮಾಡಿದ್ದಾರೆ. ಈ ಬಗ್ಗೆ ಶಾಲೆಯ ವೆಬ್‌ಸೈಟ್‌ನಲ್ಲೂ ನಮೂದಿಸಿದ್ದು, ಬೈಬಲ್ ನಿಯಮ ಪಾಲಿಸುವವರಿಗೆ ಮಾತ್ರ ಶಾಲಾ ಪ್ರವೇಶಕ್ಕೆ ಅವಕಾಶ ಅಂತ ತಿಳಿಸಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಪರೀಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಧರ್ಮಾಧಾರಿತ ಪಠ್ಯ ಬೋಧನೆಗೆ ಅವಕಾಶವಿಲ್ಲ ಎಂದಿದ್ದಾರೆ.

ಭಗವದ್ಗೀತೆ ಧರ್ಮಾಧಾರಿತವಲ್ಲ
ಬೈಬಲ್ ಹಾಗೂ ಕುರಾನ್ ಬಗ್ಗೆ ಮಾತ್ರ ಯಾಕೆ ಆಕ್ಷೇಪ ಎಂಬ ಪ್ರಶ್ನೆಗೆ, ಬೈಬಲ್, ಖುರಾನ್ ಧರ್ಮಾಧಾರಿತ ಗ್ರಂಥಗಳಾಗಿದ್ದು, ಇವುಗಳ ಆಚರಣೆ ಶಾಲೆಗಳಲ್ಲಿ ಬೇಡ. ಆದರೆ ಭಗವದ್ಗೀತೆ ಯಾವುದೇ ಧರ್ಮಾಧಾರಿತ ಗ್ರಂಥವಲ್ಲ. ಶಾಲೆಗಳಲ್ಲಿ ಭಗವದ್ಗೀತೆಯಲ್ಲಿರುವ ಮೌಲ್ಯಗಳನ್ನ ಹೇಳಿ ಕೊಡಲಾಗುತ್ತದೆ. ಕುರಾನ್, ಬೈಬಲ್ ರೀತಿ ಧರ್ಮಾಚರಣೆಗೆ ಉಪದೇಶ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಭಗವದ್ಗೀತೆಯನ್ನ ಬೈಬಲ್, ಕುರಾನ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ ಅಂತ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಇತ್ತೀಚೆಗೆ ಕ್ರಿಶ್ಚಿಯನ್ ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ. ಈಗಾಗಲೇ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇವೆ. ಪರಿಶೀಲನೆ ವೇಳೆ ಶಾಲೆಗಳಲ್ಲಿ ಬೈಬಲ್ ಕಲಿಕೆ ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
Education minister Nagesh said that there is there is no chance for conducting religious classes in schools run by Christians.
19-11-25 12:20 pm
HK News Desk
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
19-11-25 11:10 am
HK News Desk
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am