ಬ್ರೇಕಿಂಗ್ ನ್ಯೂಸ್
02-05-22 08:39 pm Mangalore Correspondent ಕರಾವಳಿ
ಮಂಗಳೂರು, ಮೇ 2: ಪುನೀತ್ ರಾಜಕುಮಾರ್ ಹೆಸರಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಅಪ್ಪು ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರನಟ ಶಿವರಾಜ್ ಕುಮಾರ್ ಪೊಲೀಸರೊಂದಿಗೆ ಹಾಡಿಗೆ ಹೆಜ್ಜೆ ಹಾಕಿದ್ದಲ್ಲದೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಟಗರು ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಯನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಶಿವಣ್ಣ, ಅಪ್ಪುವನ್ನು ಕಳೆದುಕೊಂಡಿದ್ದನ್ನು ನಮ್ಮ ಕುಟುಂಬ ಮಾತ್ರವಲ್ಲ, ಇಡೀ ರಾಜ್ಯದ ಜನ ಮರೆಯಲ್ಲ. ಅಪ್ಪು ಇಲ್ಲ ಎಂದು ಕೊರಗುವುದಕ್ಕಿಂತ ಆತ ನಮ್ಮ ಜೊತೆಗೇ ಇದ್ದಾನೆಂದು ಸಂಭ್ರಮಿಸಬೇಕು. ಪುನೀತ್ ಹುಟ್ಟುವಾಗಲೇ ಸೂಪರ್ ಸ್ಟಾರ್ ಆಗಿಯೇ ಎದ್ದು ಬಂದಿದ್ದ. ಆರು ತಿಂಗಳಲ್ಲೇ ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ. ಆನಂತರ ಜೀವನದುದ್ದಕ್ಕೂ ಸೂಪರ್ ಸ್ಟಾರ್ ಆಗಿಯೇ ಇದ್ದ. ಮಾನವೀಯತೆ ಎನ್ನುವ ಪದಕ್ಕೆ ಆತ ಅನ್ವರ್ಥ ಆಗಿದ್ದ. ಆತ ತನ್ನ ಜೀವನದಲ್ಲಿ ಇಷ್ಟೆಲ್ಲ ಸಾಧನೆ, ಮಾನವೀಯ ಕಾರ್ಯಗಳನ್ನು ಮಾಡಿದ್ದಾನೆಂದು ಆತ ಜೀವಂತ ಇರುವಾಗ ತಿಳಿದಿರಲಿಲ್ಲ. ಆತ ಇಲ್ಲವಾದಾಗಲೇ ತಿಳಿದಿದ್ದು ಎಂದು ಹೇಳಿದರು.



ಮಂಗಳೂರು ಅಂದರೆ ನನಗೆ ತುಂಬ ಇಷ್ಟದ ಊರು. ಅಪ್ಪಾಜಿಯನ್ನು ಬಿಟ್ಟರೆ ನಮ್ಮ ಕುಟುಂಬದಲ್ಲಿ ನಾನು ನಟಿಸಿರುವ ಹೆಚ್ಚಿನ ಚಿತ್ರಗಳು ಇಲ್ಲಿಯೇ ಚಿತ್ರೀಕರಣ ಆಗಿದ್ದವು. ಮುಂದಿನ ಬಾರಿ ಮಂಗಳೂರಿನಲ್ಲಿಯೇ ಅಪ್ಪು ಸೆಲೆಬ್ರೇಶನ್ ಮಾಡೋಣ ಎಂದು ಶಿವಣ್ಣ ಹೇಳಿದಾಗ ಸಭೆಯಲ್ಲಿ ಚಪ್ಪಾಳೆ ಕೇಳಿಬಂತು. ಇದೇ ವೇಳೆ ಪೊಲೀಸರು ಕೇಳಿದ ವಿವಿಧ ರೀತಿಯ ಪ್ರಶ್ನೆಗಳಿಗೂ ಶಿವಣ್ಣ ಉತ್ತರಿಸಿದರು.


ತವರಿಗೆ ಬಾ ತಂಗಿ, ಅಣ್ಣ ತಂಗಿ ರೀತಿಯ ಚಿತ್ರಗಳು ಮತ್ತೆ ಬರುವ ಸಾಧ್ಯತೆ ಇದೆಯೇ ಎಂಬ ಪೊಲೀಸ್ ಸಿಬಂದಿ ಪ್ರಶ್ನೆಗೆ, ಈ ಮೂರೂ ಚಿತ್ರಗಳ ಕತೆಗಳು ಸಮ್ಮಿಳಿತವಾಗಿರುವ ಚಿತ್ರಕತೆಯೊಂದು ರೆಡಿಯಾಗಿದೆ. ಅದಕ್ಕೆ ತಂಗಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಶಿವಣ್ಣ ಸುಳಿವು ಬಿಟ್ಟುಕೊಟ್ಟರು. ಚಿತ್ರಗಳಲ್ಲಿ ರೌಡಿಸಂ ಪಾತ್ರಗಳ ವೈಭವೀಕರಣ ಆಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದಿದ್ದಕ್ಕೆ, ರೌಡಿಸಂ ಇದ್ದರೇನೇ ನಿಮಗೆ ಕೆಲಸ ಅಲ್ವಾ ಎಂದು ನಗೆಚಟಾಕಿ ಹಾರಿಸಿದರು. ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಶಿವರಾಜಕುಮಾರ್, ಬೈರಾಗಿ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ನಾನು ಮತ್ತು ಪ್ರಭುದೇವ ಜೊತೆಯಾಗಿ ನಟಿಸಿರುವ ಯೋಗರಾಜ್ ಭಟ್ಟರ ಚಿತ್ರ ರೆಡಿಯಾಗುತ್ತಿದೆ ಎಂದು ಹೇಳಿದರು.
Mangaluru Police had an interaction session with Dr Shivarajkumar held at SCDCC bank on Monday,May 2, 2022. Hattrick hero Dr Shivrajkumar along with other dignitaries paid tribute to late Puneeth Rajkumar.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
19-11-25 11:10 am
HK News Desk
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am