ಮಸೀದಿ ಮುಂದೆ ಭಜನೆ ಸರಿಯಲ್ಲ, ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ, ಕೋರ್ಟ್ ಆದೇಶ ಪಾಲಿಸ್ತೇವೆ; ರಘುಪತಿ ಭಟ್

04-05-22 07:48 pm       Udupi Correspondent   ಕರಾವಳಿ

ಆಜಾನ್ ಕೂಗು ತೆಗೆಸಬೇಕೆಂದು ಹೇಳಿ ಶ್ರೀರಾಮ ಸೇನೆ ಹೋರಾಟ ಕೈಗೆತ್ತಿಕೊಂಡಿರುವುದನ್ನು ಶಾಸಕ ರಘುಪತಿ ಭಟ್ ಟೀಕಿಸಿದ್ದಾರೆ. ಆಜಾನ್ ವಿರುದ್ಧ ಮಸೀದಿಗಳ ಮುಂದೆ ಭಜನೆ ನಡೆಸುವುದು ಸರಿಯಲ್ಲ.

ಉಡುಪಿ, ಮೇ 4: ಆಜಾನ್ ಕೂಗು ತೆಗೆಸಬೇಕೆಂದು ಹೇಳಿ ಶ್ರೀರಾಮ ಸೇನೆ ಹೋರಾಟ ಕೈಗೆತ್ತಿಕೊಂಡಿರುವುದನ್ನು ಶಾಸಕ ರಘುಪತಿ ಭಟ್ ಟೀಕಿಸಿದ್ದಾರೆ. ಆಜಾನ್ ವಿರುದ್ಧ ಮಸೀದಿಗಳ ಮುಂದೆ ಭಜನೆ ನಡೆಸುವುದು ಸರಿಯಲ್ಲ. ಭಜನೆ ಒಳ್ಳೆಯದೇ ಆದರೂ, ಮಸೀದಿಗಳ ಮುಂದೆ ಭಜನೆ ಮಾಡುವುದರಿಂದ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ರಘುಪತಿ ಭಟ್ ಹೇಳಿದ್ದಾರೆ.

ಆಜಾನ್ ಕೂಗಿಗೆ ಧ್ವನಿವರ್ಧಕ ಬಳಕೆಯ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಇದೆ. ಕೋರ್ಟ್ ಆದೇಶವನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಶಬ್ದ ಕಡಿಮೆಗೊಳಿಸಬೇಕು ಎಂಬ ಕೋರ್ಟ್ ಆದೇಶವನ್ನು ಪಾಲಿಸುವಂತೆ ಈಗಾಗಲೇ ನೋಟೀಸ್ ನೀಡಲಾಗಿದೆ.

Maharashtra loudspeaker row: Hanuman Chalisa played by MNS workers in  Mumbai during early morning Azaan | India News | Zee News

Top broadcasters join IBF in legal tussle with Trai, move Supreme Court  against HC order, Government News, ET Government

ಹಾಗೆಂದು ಮಸೀದಿಗಳ ಎದುರು ಸಂಘರ್ಷಕ್ಕಿಳಿಯೋದು ಸೌಹಾರ್ದ ದೃಷ್ಟಿಯಿಂದ ಒಳ್ಳೆಯದಲ್ಲ. ಬಹಳ ವರ್ಷಗಳಿಂದ ಮೈಕ್ ಅಳವಡಿಸಿಕೊಂಡು ಆಜಾನ್ ಕೂಗುತ್ತಾ ಬಂದಿರುವುದರಿಂದ ಅದನ್ನು ತೆರವು ಮಾಡಲು ಸ್ವಲ್ಪ ಸಮಯ ಹಿಡಿಯುತ್ತದೆ. ಅವರನ್ನು ಮನವೊಲಿಸಿ ಮೈಕ್ ತೆರವು ಮಾಡಬೇಕಾಗುತ್ತದೆ. ಈಗಾಗಲೇ ಬಹಳ ಕಡೆ ಸಮಸ್ಯೆ ಬಗೆಹರಿದಿದೆ. ಶಬ್ದ ಕಡಿಮೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಎಲ್ಲ ಧರ್ಮದವರಿಗೂ ಅನ್ವಯವಾಗುತ್ತದೆ. ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಬೇಕು, ಇಂತಿಷ್ಟೇ ಡೆಸಿಬಲ್ ಶಬ್ದ ಇರಬೇಕು ಎಂಬ ನಿಮಯ ಇದ್ದು ಆದೇಶವನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.

MLA Raghupathi Bhatt has criticized Srirama Sena's struggle for calling for Azan's cry. Worship in front of mosques against Azan is not right. While bhajans are good, eating in front of mosques can lead to conflict, Raghupati Bhat said.