ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ರಸ್ತೆ ತಡೆ

25-09-20 12:22 pm       Mangalore Correspondent   ಕರಾವಳಿ

ರೈತರ ವಿರೋಧ ಲೆಕ್ಕಿಸದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಸೇರಿ ರಸ್ತೆ ತಡೆ, ಪ್ರತಿಭಟನೆ ನಡೆಸಿವೆ.

ಮಂಗಳೂರು, ಸೆಪ್ಟಂಬರ್ 25: ರೈತರ ವಿರೋಧ ಲೆಕ್ಕಿಸದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಸೇರಿ ರಸ್ತೆ ತಡೆ, ಪ್ರತಿಭಟನೆ ನಡೆಸಿವೆ. 

ನಂತೂರು ವೃತ್ತದ ಬಳಿ ಬಿಜೆಪಿಯೇತರ ಪಕ್ಷಗಳು ಹಾಗೂ ವಿವಿಧ ರೈತ ಸಂಘಟನೆಗಳ ಪ್ರಮುಖರು ಸೇರಿ ವಾಹನಗಳನ್ನು ತಡೆದು ಸಾಂಕೇತಿಕ ರಸ್ತೆ ತಡೆ ನಡೆಸಿದ್ದಾರೆ. ಬಳಿಕ ಅದೇ ಜಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಮಾಜಿ ಶಾಸಕ ಜೆ.ಆರ್.ಲೋಬೊ, ಡಿವೈಎಫ್ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ವಿವಿಧ ರಾಜಕೀಯ ಪಕ್ಷಗಳ-ಸಂಘಟನೆಗಳ ಮುಖಂಡರಾದ ಸದಾಶಿವ ಉಳ್ಳಾಲ, ಎ.ಸಿ.ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜ, ಅನಿಲ್ ಕುಮಾರ್, ಸುನೀಲ್ ಕುಮಾರ್ ಬಜಾಲ್, ಪಿ.ವಿ. ಮೋಹನ್, ಬಿ.ಕೆ.ಇಮ್ತಿಯಾಝ್, ಕೃಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಸಿಪ್ರಿಯಾನ್, ವಾಸುದೇವ ಉಚ್ಚಿಲ್, ಸದಾಶಿವ ಉಳ್ಳಾಲ, ಯು.ಬಿ.ಲೋಕಯ್ಯ, ವಿ.ಕುಕ್ಯಾನ್ ಎಚ್. ವಿ.ರಾವ್, ಸೀತಾರಾಮ ಬೇರಿಂಜ, ಎಂ.ದೇವದಾಸ್, ರಘು ಎಕ್ಕಾರು, ಜಗದೀಶ್, ಸಂತೋಷ್ ಕುಮಾರ್ ಬಜಾಲ್, ಭಾರತಿ ಶೆಟ್ಟಿ, ಜಯಂತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Join our WhatsApp group for latest news updates (2)