ಬ್ರೇಕಿಂಗ್ ನ್ಯೂಸ್
11-05-22 09:11 pm Mangalore Correspondent ಕರಾವಳಿ
ಮಂಗಳೂರು, ಮೇ 11 : ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಫಿಸಿಯೋಥೆರಪಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ.
ಕಣ್ಣೂರಿನ ಆಝಿಕ್ಕೋಡ್ ನಿವಾಸಿ ಸಾಂದ್ರಾ ಪಿ.ಪಿ. (21) ಮೃತ ಯುವತಿ. ಬುಧವಾರ ಬೆಳಗ್ಗೆ 10 ರಿಂದ 12 ರ ನಡುವೆ ಲೇಡಿಸ್ ಹಾಸ್ಟೆಲ್ ಕೊಠಡಿಯಲ್ಲಿ ಕೃತ್ಯ ನಡೆದಿದೆ. ಸಾವಿಗೇನು ಕಾರಣ ಅನ್ನೋದು ತಿಳಿದುಬಂದಿಲ್ಲ. ಆಕೆ ಒಂದು ವರ್ಷದಿಂದ ಖಿನ್ನತೆಗೆ ಒಳಗಾಗಿದ್ದು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು. ಅದೇ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಬಿಬಿಎಸ್ ವಿದ್ಯಾರ್ಥಿಗೆ ಹಾರ್ಟ್ ಅಟ್ಯಾಕ್ !
ಎರಡು ದಿನಗಳ ಹಿಂದೆ ಇದೇ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೊಠಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೇರಳ ಮೂಲದ ರೋಶನ್ (23) ಎಂಬಾತ ಮೃತ ಯುವಕನಾಗಿದ್ದು ಹೆತ್ತವರು ಫೋನ್ ಸ್ವೀಕರಿಸಿಲ್ಲ ಎಂದು ಕಾಲೇಜು ಆಡಳಿತಕ್ಕೆ ಮಾಹಿತಿ ಕೇಳಿದ್ದರು. ಬಳಿಕ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಯುವಕನ ಶವ ಇತ್ತು. ಆತನಿಗೆ ಅಸ್ತಮಾ ತೊಂದರೆಯೂ ಇತ್ತು ಎನ್ನಲಾಗಿದ್ದು ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದರು. ಇದೀಗ ಅದೇ ಕಾಲೇಜಿನ ಮತ್ತೊಬ್ಬ ಹುಡುಗಿ ನಿಗೂಢವಾಗಿ ಸಾವಿಗೆ ಶರಣಾಗಿದ್ದಾಳೆ.
Mangalore Mbbs students dies of heart attack. The deceased had been identified as Roshan from Kerala. A Physiotherapy student commits suicide at father Muller's hostel. The deceased has been identified as Sandra from Kannur.
17-05-22 09:10 pm
Bangalore Correspondent
ಬೆಂಗಳೂರು 35ನೇ ಪೊಲೀಸ್ ಕಮಿಷನರ್ ಆಗಿ ಪ್ರತಾಪ ರೆಡ್ಡ...
17-05-22 05:19 pm
ದಪ್ಪಗಿದ್ದೇನೆಂದು ಬೊಜ್ಜು ಕರಗಿಸಲು ಫ್ಯಾಟ್ ಸರ್ಜರಿ...
17-05-22 02:42 pm
ಬೆಂಗಳೂರಿನ ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣಕ್ಕೆ...
17-05-22 10:52 am
ಜಾಮಿಯಾ ಮಸೀದಿಗಾಗಿ ಹೈಕೋರ್ಟ್ ಮೆಟ್ಟಿಲೇರಲು ಭಜರಂಗ ಸ...
16-05-22 02:32 pm
16-05-22 05:20 pm
HK Desk News
ಜಗತ್ತಿನ ಸಿರಿವಂತ ಅದಾನಿ ಪತ್ನಿ ರಾಜ್ಯಸಭೆ ಪ್ರವೇಶಕ್...
16-05-22 11:32 am
ಚೀನಾದ ಜಿನ್ ಪಿಂಗ್ ಕೆಳಕ್ಕಿಳಿದರೆ, "ಇನ್ನಿಬ್ಬರು" ಕ...
16-05-22 11:25 am
ನೆರೆ ರಾಷ್ಟ್ರಗಳಲ್ಲಿ ಆಹಾರ ವಸ್ತುಗಳ ಕೊರತೆ ಹಿನ್ನೆ...
14-05-22 09:51 pm
ತಾಜ್ ಮಹಲಿನ ಮುಚ್ಚಿದ ಕೋಣೆಗಳಲ್ಲಿ ಹಿಂದು ವಿಗ್ರಹಗಳಿ...
14-05-22 07:24 pm
17-05-22 07:03 pm
Mangalore Correspondent
ರೈಫಲ್ ತರಬೇತಿ ಕೊಡಿಸಲು ಬಿಹಾರ, ಯುಪಿ ಅಂದ್ಕೊಂಡ್ರಾ....
17-05-22 04:01 pm
ಮೊದಲ ಮಳೆಗೇ ನೆಲಕ್ಕುರುಳಿದ ಶಾಲಾ ಕಟ್ಟಡ ; ಶಿಥಿಲ ಕಟ...
17-05-22 02:18 pm
ಕರಾವಳಿಯಲ್ಲಿ ಸಿಡಿಲು ಸಹಿತ ಮಳೆ ; ದಕ್ಷಿಣ ಕನ್ನಡ, ಉ...
16-05-22 07:17 pm
ಯಾವುದೇ ದೇವಸ್ಥಾನ ಆಕ್ರಮಿಸಿಕೊಂಡಿದ್ದರೆ ಪರಿವರ್ತನೆ...
16-05-22 06:30 pm
17-05-22 03:27 pm
Bangalore Correspondent
ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ, ಮಗ ಕಾರ್ತಿ ಮನೆ,...
17-05-22 01:28 pm
ದೊಣ್ಣೆಯಿಂದ ಹೊಡೆದು ಪತ್ನಿಯ ಕೊಲೆ ! ಆತಹತ್ಯೆಯೆಂದು...
15-05-22 07:07 pm
ಪುಂಜಾಲಕಟ್ಟೆ ; ಅಕ್ರಮ ಗೋಸಾಗಣೆ ಬೆನ್ನಟ್ಟಿ ಹಿಡಿದ ಪ...
15-05-22 06:09 pm
ಕಿಟಕಿ ಗ್ರಿಲ್ಸ್ ನಲ್ಲಿ ಸಾವು ಕಂಡ ಕಾಸರಗೋಡು ಮೂಲದ ಮ...
14-05-22 09:07 pm