ಶ್ರೀಲಂಕಾದಲ್ಲಿ ಹೆಚ್ಚಿದ ಆಂತರಿಕ ಕಲಹ ; ಸಮುದ್ರ ಮಾರ್ಗದಲ್ಲಿ ಲಂಕನ್ನರು ಭಾರತಕ್ಕೆ ಒಳನುಸುಳುವ ಸಾಧ್ಯತೆ, ಅಪರಿಚಿತರ ಬಗ್ಗೆ ನಿಗಾ ವಹಿಸಲು ಪೊಲೀಸರ ಸೂಚನೆ 

12-05-22 12:59 pm       Mangalore Correspondent   ಕರಾವಳಿ

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಆಂತರಿಕ ಕಲಹದ ಕಾರಣ ಆಹಾರ ಕೊರತೆ ಉಂಟಾಗಿರುವುದರಿಂದ ಅಲ್ಲಿನ ಜನರು ಸಮುದ್ರ ಮಾರ್ಗದ ಮೂಲಕ ಭಾರತದತ್ತ ಬರುವ ಸಾಧ್ಯತೆಗಳಿದ್ದು ಕರಾವಳಿ ತೀರ ಪ್ರದೇಶದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕರಾವಳಿ ಕಾವಲು ಪೊಲೀಸ್ ಪಡೆಯವರು ಸೂಚನೆ ನೀಡಿದ್ದಾರೆ. 

ಮಂಗಳೂರು, ಮೇ 12 : ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಆಂತರಿಕ ಕಲಹದ ಕಾರಣ ಆಹಾರ ಕೊರತೆ ಉಂಟಾಗಿರುವುದರಿಂದ ಅಲ್ಲಿನ ಜನರು ಸಮುದ್ರ ಮಾರ್ಗದ ಮೂಲಕ ಭಾರತದತ್ತ ಬರುವ ಸಾಧ್ಯತೆಗಳಿದ್ದು ಕರಾವಳಿ ತೀರ ಪ್ರದೇಶದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕರಾವಳಿ ಕಾವಲು ಪೊಲೀಸ್ ಪಡೆಯವರು ಸೂಚನೆ ನೀಡಿದ್ದಾರೆ. 

ಶ್ರೀಲಂಕಾದಲ್ಲಿ ಆಂತರಿಕ ಕಲಹ, ದೊಂಬಿಯ ಕಾರಣದಿಂದಾಗಿ ಜನರು ತತ್ತರಿಸಿದ್ದು ಸಮುದ್ರ ಮಾರ್ಗ ಅಥವಾ ಇನ್ನಿತರ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸಿ, ಇಲ್ಲಿನ ಕರಾವಳಿ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ಪೂರ್ವಾಪರ ವಿಚಾರಿಸಬೇಕು. ಸೂಕ್ತ ದಾಖಲಾತಿಗಳನ್ನು ಪಡೆದು ಪರಿಶೀಲನೆ ನಡೆಸಬೇಕು. ಯಾವುದೇ ವ್ಯಕ್ತಿಗಳ ಬಗ್ಗೆ ಸಂಶಯ ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಲಂಕನ್ನರು ಅಕ್ರಮವಾಗಿ ಒಳನುಸುಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದಾಗಿ ಕರಾವಳಿ ಕಾವಲು ಪೊಲೀಸ್ ಪಡೆಯ ವತಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ. 

Sri Lanka Economic Crisis Highlights: Troops ordered to shoot at those  damaging public property as protestors gather outside airport, naval base |  World News,The Indian Express

ಕರಾವಳಿಯಲ್ಲಿ ಹೆಚ್ಚಾಗಿ ನೆಲೆಸಿರುವ ಮೀನುಗಾರರಿಗೆ, ಮೀನುಗಾರಿಕಾ ಸಂಘಗಳಿಗೆ, ಹೊಟೇಲು, ಲಾಡ್ಜ್ ಗಳಿಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ರವಾನಿಸಲಾಗಿದೆ. ಒಂದು ವರ್ಷದ ಹಿಂದೆ ತಮಿಳುನಾಡು ಮೂಲಕ ಒಳನುಸುಳಿದ್ದ ಲಂಕಾ ಮೂಲದ 38 ಮಂದಿ ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಮುಂಜಾಗ್ರತೆ ವಹಿಸಲು ಸಾರ್ವಜನಿಕರಿಗೆ ಕೋರಿದ್ದಾರೆ.

Mangalore Sri Lanka Economic Crisis, the possibility of Lankans entering India via sea, police warn house owners to be careful if strangers are found asking house for rent. The police department has asked to check the documents.