ಬ್ರೇಕಿಂಗ್ ನ್ಯೂಸ್
16-05-22 10:27 am Mangalore Correspondent ಕರಾವಳಿ
ಮಂಗಳೂರು, ಮೇ 16 : ರಾಜ್ಯ ಸರಕಾರ ಎಂದಿಗಿಂತ ಮೊದಲೇ ಶಾಲೆ ಆರಂಭಿಸಲು ಸೂಚನೆ ನೀಡಿರುವುದರಿಂದ ಈ ಬಾರಿ ಮೇ 16ರಿಂದಲೇ ಎಲ್ಲ ಕಡೆ ಚಿಣ್ಣರ ಕಲರವ ಕೇಳಿಬಂದಿದೆ. ಅತ್ತ ಬೇಸಿಗೆ ಮುಗಿಯದಿದ್ದರೂ, ಅಷ್ಟಿಷ್ಟು ಮಳೆಯೂ ಶುರುವಾಗಿದ್ದರಿಂದ ಮಕ್ಕಳು ನಿಧಾನಕ್ಕೆ ಶಾಲೆಯ ಮೆಟ್ಟಿಲು ಹತ್ತಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಶಾಲೆ ವಿಳಂಬವಾಗಿದ್ದರಿಂದ ಅದನ್ನು ಸರಿತೂಗಿಸಲು ಮತ್ತು 15 ದಿನ ಮೊದಲೇ ಶಾಲೆ ತೆರೆದು ಮಕ್ಕಳು ಹಿಂದಿನದನ್ನು ಪುನರ್ಮನನ ಮಾಡಿಕೊಳ್ಳುವ ಉದ್ದೇಶದಿಂದ ಅವಧಿಗೆ ಮೊದಲೇ ಶಾಲೆ ಆರಂಭಿಸುವುದೆಂಬುದು ಸಮಜಾಯಿಷಿ. ಆದರೆ ಇನ್ನೂ ಬೇಸಗೆಯ ಬಿಸಿಲ ಬೇಗೆ ಕರಗಿಲ್ಲ. ಮಳೆಯೂ ಶುರುವಾಗಿಲ್ಲ. ಮಕ್ಕಳು ರಜೆಯಲ್ಲಿ ಅಜ್ಜಿ ಮನೆಯಲ್ಲೋ ಇನ್ನೆಲ್ಲೋ ರಜೆಯ ಗುಂಗಿನಲ್ಲಿ ಇರುತ್ತಾರೆ. ಅಂಥ ಸಂದರ್ಭದಲ್ಲಿ 15 ದಿನಗಳ ಮೊದಲೇ ಶಾಲೆ ಆರಂಭಿಸಿದ್ದು ಬಹಳಷ್ಟು ಮಕ್ಕಳಿಗೆ ಮತ್ತು ಹೆತ್ತವರಿಗೆ ಅಸಮಾಧಾನ ಮೂಡಿಸಿತ್ತು. ಹಾಗಾಗಿ ಹೆಚ್ಚಿನ ಶಾಲೆಗಳಲ್ಲಿ ಮೊದಲ ದಿನ ಹಾಜರಾತಿ ಕಡಿಮೆ ಇತ್ತು.
ರಾಜ್ಯ ಸರಕಾರ ಅವಧಿಗೆ ಮೊದಲೇ ಶಾಲೆ ಆರಂಭಿಸುವುದಕ್ಕೆ ಬಹಳಷ್ಟು ಆಕ್ಷೇಪವೂ ಕೇಳಿಬಂದಿತ್ತು. ಆದರೆ ಖಾಸಗಿ ಶಾಲಾಡಳಿತಗಳು ಬೇಗನೆ ಶಾಲೆ ತೆರೆಯಲು ಹೆಚ್ಚು ಹುಮ್ಮಸ್ಸು ತೋರಿದ್ದವು. ರುಪ್ಸಾ ವತಿಯಿಂದ ರಾಜ್ಯ ಸರಕಾರಕ್ಕೆ ಒತ್ತಡವನ್ನು ಹೇರಿದ್ದವು. ಸರಕಾರಿ ನೌಕರರು ಅವಧಿಗೆ ಮೊದಲೇ ಶಾಲೆ ಬೇಡ ಎನ್ನುತ್ತಿದ್ದರೂ, ಶಿಕ್ಷಣ ಸಚಿವ ನಾಗೇಶ್ ಶಾಲೆ ಬೇಗ ಆರಂಭಿಸುವುದರ ಪರವಾಗಿಯೇ ಇದ್ದರು. ಹೀಗಾಗಿ ಮೇ 16 ರಿಂದ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ತರಗತಿ ಆರಂಭಗೊಂಡಿದ್ದು ಭಾರದ ಹೆಜ್ಜೆಗಳನ್ನಿಡುತ್ತಾ ಮಕ್ಕಳು ಹೆತ್ತವರ ಜೊತೆಗೆ ಶಾಲೆಯತ್ತ ಆಗಮಿಸಿದ್ದಾರೆ.
Mangalore After 35 days of summer vacation, students in Karnataka will be heading back to classes as all schools — State and Central boards — reopen for the academic year 2022-23 on Monday. It is going to be a festive atmosphere in many schools. As per the instructions of the Department of Public Instruction (DPI), all government and aided schools are planning to welcome the students with midday meals, sweets, and even cultural events. The schools will be decorated with flowers and rangoli.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm