ಉಡುಪಿಯಲ್ಲಿ ಯಾವುದೇ ಟೊಮೆಟೊ ಫ್ಲೂ ಪತ್ತೆಯಾಗಿಲ್ಲ ; ಜಿಲ್ಲಾಧಿಕಾರಿ ಕೂರ್ಮಾ ರಾವ್ ಸ್ಪಷ್ಟನೆ 

16-05-22 02:00 pm       Udupi Correspondent   ಕರಾವಳಿ

ಉಡುಪಿಯಲ್ಲಿ ಟೊಮೇಟೊ ಫ್ಲೂ ಪತ್ತೆಯಾಗಿದೆ ಎಂಬ ವದಂತಿ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಪಷ್ಟನೆ ನೀಡಿದ್ದು ಅಂತಹ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಆ ರೀತಿಯ ಪ್ರಕರಣ ಪತ್ತೆಯಾದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ. 

 ಉಡುಪಿ, ಮೇ 16 : ಉಡುಪಿಯಲ್ಲಿ ಟೊಮೇಟೊ ಫ್ಲೂ ಪತ್ತೆಯಾಗಿದೆ ಎಂಬ ವದಂತಿ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಪಷ್ಟನೆ ನೀಡಿದ್ದು ಅಂತಹ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಆ ರೀತಿಯ ಪ್ರಕರಣ ಪತ್ತೆಯಾದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ. 

ಮಕ್ಕಳಲ್ಲಿ ಜ್ವರ ಕಂಡು ಬಂದಾಗ ತಾಂತ್ರಿಕವಾಗಿ ಪರೀಕ್ಷೆ ನಡೆಸಲಾಗುತ್ತೆ. ಟೊಮೆಟೊ ಫ್ಲೂಗೆ ಹೋಲುವಂತಹ ಒಂದು ಪ್ರಕರಣ ಪತ್ತೆಯಾಗಿತ್ತು. ಮೂರು ತಿಂಗಳ ಹಿಂದೆ ಪ್ರಕರಣ ಪತ್ತೆಯಾಗಿತ್ತು. ಫೂಟ್ ಆಂಡ್ ಹ್ಯಾಂಡ್ ಎನ್ನುವ ಸೋಂಕಿನ ಲಕ್ಷಣಗಳಿರುವ ಪ್ರಕರಣ ಅದಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಗೆ ನಾವು ವರದಿ ಮಾಡಿದ್ದೇವೆ. 

What is Tomato flu Karnataka sounds high alert over Tomato Fever Symptoms  Cause Treatment and Precautions in hindi - Tomato Fever: केरल में बच्चों  में तेजी से फैल रहा है 'Tomato Flu',

ಟೊಮೇಟೋ ಫ್ಲೂ ಮತ್ತು ಈ ಪ್ರಕರಣಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಇತ್ತೀಚಿಗೆ ಯಾವುದಾದರೂ ಹೊಸ ಪ್ರಕರಣ ಬಂದಿದೆಯೇ ಎಂದು ಮಾಹಿತಿ ಸಂಗ್ರಹಿಸುತ್ತೇವೆ. ಖಾಸಗಿ ಕ್ಲಿನಿಕ್ ಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಎಲ್ಲಾ ಮಕ್ಕಳ ತಜ್ಞರಿಗೂ ಅಲರ್ಟ್ ಇರಲು ಸೂಚಿಸಿದ್ದೇವೆ.‌

ಕೇರಳದಲ್ಲಿ ಪ್ರಕರಣ ಪತ್ತೆಯಾದ ನಂತರ ಮಕ್ಕಳ ತಜ್ಞರಿಗೆ ಸೂಚನೆಗಳನ್ನು ಕೊಟ್ಟಿದ್ದೇವೆ. ಟೊಮೆಟೊ ಫ್ಲೂ ಹೋಲುವಂತಹ ಜ್ವರ ಬಂದರೂ ತಿಳಿಸಲು ಹೇಳಿದ್ದೇವೆ.‌ ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ‌.‌ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ.‌ ಮಕ್ಕಳಲ್ಲಿ ಬೇರೆ ಬೇರೆ ತರದ ಫ್ಲೂಗಳು ಕಾಣಿಸಿಕೊಳ್ಳುತ್ತವೆ. ಈ ಕುರಿತು ನಿರಂತರ ಸರ್ವೇಕ್ಷಣೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.

No tomato flue in Udupi says DC. There are some rumours that a case of Tomato flue has been dedicated in Udupi don't give ear to such fake news said Udupi DC Kurma Rao