ಬ್ರೇಕಿಂಗ್ ನ್ಯೂಸ್
16-05-22 06:30 pm Udupi Correspondent ಕರಾವಳಿ
ಉಡುಪಿ, ಮೇ 16 : ಯಾವುದೋ ಕಾರಣಕ್ಕೆ ಯಾವುದೋ ಕಾಲದಲ್ಲಿ ಧಾರ್ಮಿಕ ಕೇಂದ್ರಗಳು ಮಸೀದಿಗಳಾಗಿ ಪರಿವರ್ತನೆ ಆಗಿರುತ್ತದೆ. ಯಾವುದೋ ದೇವಾಲಯವನ್ನು ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ. ಯಾವುದೇ ಪೂಜಾಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು ಖರೀದಿಸಿ ಮಾರ್ಪಾಟು ಮಾಡಿದ್ದರೆ ಸಮಸ್ಯೆ ಇರಲ್ಲ. ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈಗ ಆಗುತ್ತಿರುವ ಸಮಾಜ ಪರಿವರ್ತನೆಯ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ. ಈಗ ಇದೊಂದು ರೀತಿಯ ಕಾಲಘಟ್ಟ. ಗ್ಯಾನವಾಪಿ ಮಸೀದಿ ಬಗ್ಗೆ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪರಿಪಾಲಿಸಬೇಕು. ಹಿಂದೆ ಆಗಿಹೋದ ಬಗ್ಗೆ ಕೋರ್ಟ್ ತೀರ್ಮಾನ ಕೊಟ್ಟಿದ್ದಾದರೆ ಯಾರೂ ಇದನ್ನು ಹಿನ್ನಡೆ ಎಂದು ಭಾವಿಸಬಾರದು. ಹಿಂದೂಗಳ ಪೂಜಾ ಮಂದಿರಗಳನ್ನು ಹಿಂದುಗಳಿಗೆ ಬಿಟ್ಟುಕೊಡಿ. ಮುಸಲ್ಮಾನರ ದರ್ಗಾ ಆಗಿದ್ದರೂ ಅವನ್ನು ಮುಸಲ್ಮಾನರಿಗೇ ಬಿಟ್ಟುಕೊಡಬೇಕು. ಯಾವುದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡುವ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ.
ತಪ್ಪು ಆಗಿದ್ದರೆ ಅದು ತಪ್ಪೇ. ಯಾರು ಯಾವುದನ್ನು ಸಮರ್ಥನೆ ಮಾಡುವುದು ಸೂಕ್ತ ಅಲ್ಲ. ಸಂಘರ್ಷಕ್ಕೆ ಇಳಿಯದೆ ಸೌಹಾರ್ದದಿಂದ ಬಿಟ್ಟುಕೊಡಬೇಕು. ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆ ಬಗ್ಗೆ ಮಾರ್ಗದರ್ಶನ ಮಾಡಿದೆ. ಕೋರ್ಟ್ ವಿಧಿಸಿದ ನಿಯಮವನ್ನು ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಡುತ್ತೇನೆ. ವಿಶೇಷ ದಿನಗಳು, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ ಎಂದು ಹೇಳಿದರು.
Temples been converted as Mosques is not good we don't accept it says Vishwaprasanna Tirtha of Pejawar Mutt.
10-12-25 12:58 pm
Bangalore Correspondent
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಅ...
08-12-25 10:39 pm
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
09-12-25 07:30 pm
HK News Desk
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟ...
09-12-25 11:55 am
ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್ ; ವ...
08-12-25 10:11 pm
Mangalore, Puttur, Mahesh Shetty Timarodi: ಪ್...
08-12-25 04:52 pm
09-12-25 04:33 pm
Mangalore Correspondent
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm