ಕರಾವಳಿಯಲ್ಲಿ ಸಿಡಿಲು ಸಹಿತ ಮಳೆ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮೇ 18ಕ್ಕೆ ರೆಡ್ ಅಲರ್ಟ್

16-05-22 07:17 pm       Mangalore Correspondent   ಕರಾವಳಿ

ಹವಾಮಾನ ಇಲಾಖೆಯ ಮುನ್ಸೂಚನೆ ನಡುವೆಯೇ ಕರಾವಳಿಯಲ್ಲಿ ಭಾರೀ ಸಿಡಿಲು ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗಿನಿಂದಲೇ ಭಾರೀ ಮೋಡ ಕವಿದಿತ್ತು. ಸಂಜೆಯಾಗುತ್ತಲೇ ಗುಡುಗು, ಮಿಂಚಿನ ಸಹಿತ ಮಳೆಯಾಗತೊಡಗಿದೆ. 

ಮಂಗಳೂರು, ಮೇ 16 : ಹವಾಮಾನ ಇಲಾಖೆಯ ಮುನ್ಸೂಚನೆ ನಡುವೆಯೇ ಕರಾವಳಿಯಲ್ಲಿ ಭಾರೀ ಸಿಡಿಲು ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗಿನಿಂದಲೇ ಭಾರೀ ಮೋಡ ಕವಿದಿತ್ತು. ಸಂಜೆಯಾಗುತ್ತಲೇ ಗುಡುಗು, ಮಿಂಚಿನ ಸಹಿತ ಮಳೆಯಾಗತೊಡಗಿದೆ. 

ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಸೋಮವಾರ ಸಂಜೆ ಮಳೆಯಾಗಿದೆ. ಇದೇ ವೇಳೆ, ಉಡುಪಿ ಜಿಲ್ಲಾಡಳಿತ ಮಳೆಯ ಬಗ್ಗೆ ಎಲರ್ಟ್ ಘೋಷಣೆ ಮಾಡಿದೆ. ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿದೆ. 

Why Does Rain Smell?

ಮೇ 17 ಮತ್ತು 19 ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಎಲರ್ಟ್ ಹಾಗೂ 18 ರಂದು ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ನದಿ, ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ದುಬೈ ಮಾರ್ಕೆಟ್ ಗೆ ನುಗ್ಗಿದ ನೀರು 

ಹಠಾತ್ ಮಳೆಯಿಂದಾಗಿ ಮಂಗಳೂರು ನಗರದ ಕೆಲವು ಕಡೆ ಅಂಗಡಿಗಳಿಗೆ ನೀರು ನುಗ್ಗಿದೆ. ಹಂಪನಕಟ್ಟೆಯ ದುಬೈ ಮಾರ್ಕೆಟ್ ನಲ್ಲಿ ನೀರು ನುಗ್ಗಿದ ಕಾರಣ ವ್ಯಾಪಾರಸ್ಥರು ಗಲಿಬಿಲಿಗೆ ಒಳಗಾದರು. ಹೊರಗೆ ಇರಿಸಿದ್ದ ಸರಕು ವಸ್ತುಗಳನ್ನು ನೀರಿನಲ್ಲಿ ಒದ್ದೆಯಾಗದಂತೆ ಒಳಗೊಯ್ದರು. ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆ, ಎಂಜಿ ರೋಡ್ ಸೇರಿದಂತೆ ಕೆಲವು ರಸ್ತೆಗಳಲ್ಲಿ ಮೊದಲ ಮಳೆಗೇ ನೀರು ನಿಂತು ವಾಹನ ಸವಾರರು ಪರದಾಟ ಅನುಭವಿಸಿದರು.

Deputy commissioner (DC) of Dakshina Kannada Dr Rajendra K V and Udupi DC M Kurma Rao on Monday May 16, warned of a heavy rainfall that has been forecast for the coastal districts during the next five days. In a press release, the district disaster management authority has issued a red alert on May 18 while an orange alert has been sounded out on May 17 and 19 in Dakshina Kannada and Udupi district.