ಬ್ರೇಕಿಂಗ್ ನ್ಯೂಸ್
17-05-22 04:01 pm Mangalore Correspondent ಕರಾವಳಿ
ಮಂಗಳೂರು, ಮೇ 17: ಕೊಡಗಿನಲ್ಲಿ ಬಜರಂಗದಳ ರೈಫಲ್ ತರಬೇತಿ ನೀಡಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಕೈಗೆ ರೈಫಲ್ ಕೊಟ್ಟು ತರಬೇತಿ ನಡೆಸೋದಕ್ಕೆ ಇದೇನು ಉತ್ತರ ಪ್ರದೇಶ ಅಥವಾ ಬಿಹಾರ ಅಂದುಕೊಂಡಿದ್ದಾರೆಯೇ.. ರೈಫಲ್ ತರಬೇತಿ ನೀಡಲು ಯಾವ ಕಾನೂನಿನಲ್ಲಿ ಅವಕಾಶ ಇದೆ. ಅದಕ್ಕೇನು ಸಿಸ್ಟಮ್ ಇಲ್ಲವೇ. ಈ ಬಗ್ಗೆ ಗೃಹ ಸಚಿವರು ಉತ್ತರ ಕೊಡಬೇಕು ಎಂದು ಸವಾಲು ಹಾಕಿದ್ದಾರೆ.
ಹಾಗೊಂದ್ವೇಳೆ ಶಾಲೆಯಲ್ಲಿ ತರಬೇತಿ ನೀಡುವುದಿದ್ದರೆ ಎಲ್ಲರಿಗೂ ಶಸ್ತ್ರಾಸ್ತ್ರ ತರಬೇತಿ ಕೊಡಲಿ. ಕೆಲವರಿಗೆ ಮಾತ್ರ ರೈಫಲ್ ಯಾಕೆ ಬೇಕು. ಆತ್ಮರಕ್ಷಣೆಗೆ ತರಬೇತಿ ಅಂದಾದ್ರೆ, ಕೈಯಲ್ಲಿ ರೈಫಲ್ ಕೊಡುವುದಾ. ಯಾವ ಆಧಾರದಲ್ಲಿ ಇಂತಹ ತರಬೇತಿ ನೀಡುತ್ತಿದ್ದಾರೆ. ಗೃಹ ಸಚಿವರು, ಶಿಕ್ಷಣ ಸಚಿವರಿಗೆ ರಾಜ್ಯದ ವ್ಯವಸ್ಥೆಯ ಬಗ್ಗೆ ಕಂಟ್ರೋಲ್ ಇಲ್ಲ. ಇದರಿಂದಾಗಿ ಸರಕಾರಿ ಶಾಲೆಗಳಲ್ಲಿ ಇಂತಹದ್ದೆಲ್ಲ ಆಗ್ತಾ ಇದೆ. ಒಂದ್ವೇಳೆ ಕಾಂಗ್ರೆಸಿನ ಸೇವಾದಳ, ದಲಿತ ಸೇನೆ ಅಥವಾ ಇನ್ಯಾವುದೇ ಹಿಂದುಳಿದ ವರ್ಗದವರು ಹೀಗೆ ಮಾಡುತ್ತಿದ್ದರೆ ಏನಾಗುತ್ತಿತ್ತು. ಇವರ ಪ್ರತಿಕ್ರಿಯೆ ಹೇಗಿರುತ್ತಿತ್ತು. ಭಯೋತ್ಪಾದನೆಗೆ ಹೋಲಿಸುತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಎಂಡೋ ಸಂತ್ರಸ್ತರು ಓಟ್ ಹಾಕ್ತಾರೆಯೇ ?
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಸ್ಲಿಮರ ಮತ ತನಗೆ ಬೇಡ ಎಂದಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಅದೆಲ್ಲ ಚೀಪ್ ಪಾಲಿಟಿಕ್ಸ್. ಅದಕ್ಕೆ ಬೆಳ್ತಂಗಡಿಯ ಜನರೇ ಉತ್ತರ ಕೊಡಲಿದ್ದಾರೆ. ಯಾರು ವೋಟ್ ಕೊಟ್ಟಿದ್ದಾರೆಯೋ ಅವರಿಗಾದ್ರೂ ಇವರು ಏನಾದ್ರೂ ಮಾಡಿದ್ದಾರೆಯೇ.. ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನ್ಯಾಯ ಕೊಡಿಸ್ತೇನೆಂದು ಹೇಳಿ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಒಯ್ದು ಬಿಸಿಲಿಗೆ ನಿಲ್ಲಿಸಿದ್ರು. ಇದುವರೆಗೂ ಅವರಿಗೆ ಏನಾದ್ರೂ ಚಿಕ್ಕಾಸಿನ ಪರಿಹಾರ ದೊರಕಿಸಲು ಇವರಿಗೆ ಆಗಿದ್ಯಾ.. ಸಿದ್ದರಾಮಯ್ಯ ಸರಕಾರ ಇದ್ದಾಗ ಏನು ಕೊಟ್ಟಿದ್ದರೋ, ಅದಷ್ಟೇ ಸಿಕ್ಕಿದ್ದಲ್ವಾ.. ಬ್ಯಾರಿಗಳ ಓಟು ಬೇಡ ಎನ್ನುವ ಇವರಿಗೆ ಎಂಡೋಸಲ್ಫಾನ್ ಸಂತ್ರಸ್ತರ ಓಟು ಸಿಗಬಹುದೇ.. ಅವರಿಗೆ ಮೋಸ ಮಾಡಿಲ್ಲವೇ ಎಂದು ಟಾಂಗ್ ಕೊಟ್ಟಿದ್ದಾರೆ.
ಪಠ್ಯಪುಸ್ತಕವೇ ಇಲ್ಲ, ಶಾಲೆ ಆರಂಭಿಸಿದ್ದಾರೆ
ಯಾವುದೇ ದೂರದೃಷ್ಟಿ ಇಲ್ಲದೆ ಬಿಜೆಪಿ ಸರಕಾರ 15 ದಿನ ಮೊದಲೇ ಶಾಲೆ ಆರಂಭಿಸಿದೆ. ಶಾಲೆಯಲ್ಲಿ ಏನು ಮಾಡಿಸಬೇಕೆಂದು ತಿಳಿಯದೆ ಮಕ್ಕಳು ಶಾಲೆಗೆ ಹೋಗಿ ಆಟವಾಡುತ್ತಿದ್ದಾರೆ. ಶಾಲೆಗೆ ಪಠ್ಯಪುಸ್ತಕ ಬಂದಿಲ್ಲ, ಬೆಂಚು ಡೆಸ್ಕ್ ಇಲ್ಲ. ಪಠ್ಯಪುಸ್ತಕ ಯಾವಾಗ ಬರುತ್ತೆ ಅಂತಲೇ ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ಎರಡು ವರ್ಷ ಪಾಠ ಮೊಟಕಾಗಿದೆ ಎಂದು ಹೇಳಿ 15 ದಿನ ಮೊದಲು ಶಾಲೆ ಆರಂಭಿಸಿ ಏನು ಲಾಭ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳು ಕಷ್ಟಪಡುತ್ತಿದ್ದಾರೆ. ಕೆಲವು ಕಡೆ ಶಾಲಾ ಕಟ್ಟಡ, ಬೆಂಚು ಡೆಸ್ಕು ಇಲ್ಲದೆ ಯಾರ್ಯಾರಲ್ಲಿ ಬೇಡುವ ಸ್ಥಿತಿ ಶಿಕ್ಷಕರಿಗೆ ಬಂದಿದೆ.
ಕುಚ್ಚಲಕ್ಕಿಗೆ ಮನವಿ ಕೊಟ್ಟಿದ್ದು ಮಾತ್ರ !
ಕರಾವಳಿಯಲ್ಲಿ ಮಕ್ಕಳಿಗೆ ಹಿಂದಿನಿಂದಲೂ ಬಿಸಿಯೂಟಕ್ಕೆ ಕುಚ್ಚಲಕ್ಕಿ ನೀಡಲಾಗುತ್ತಿತ್ತು. ಈಗ ಮಕ್ಕಳಿಗೂ ಬಿಳಿ ಅಕ್ಕಿಯನ್ನು ನೀಡುತ್ತಿದ್ದಾರೆ. ಮನೆಯಲ್ಲಿ ಕುಚ್ಚಲಕ್ಕಿ ಉಣ್ಣುವವರಿಗೆ ವೈಟ್ ರೈಸ್ ಊಟ ಮಾಡಲು ಆಗುತ್ತದೆಯೇ.. ಇವರಿಗೆ ಒಂಚೂರಾದ್ರೂ ಮಕ್ಕಳ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ ಖಾದರ್, ಕಳೆದ ಬಾರಿ ಕೊರೊನಾ ಬಂದಾಗ ಕರಾವಳಿಯ ಜನರಿಗೆ ಕುಚ್ಚಲಕ್ಕಿಯನ್ನೇ ಪಡಿತರದಲ್ಲಿ ನೀಡುತ್ತೇವೆಂದು ಇಲ್ಲಿನ ಶಾಸಕರು, ಉಸ್ತುವಾರಿ ಸಚಿವರು ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದರು. ಇವರು ಮನವಿ ಕೊಟ್ಟು ಪ್ರಚಾರ ಗಿಟ್ಟಿಸಿದ್ದೇ ಬಂತು. ಈವರೆಗೂ ಕುಚ್ಚಲಕ್ಕಿ ದೊರಕಿಸಲು ಆಗಿಲ್ಲ. ಆಹಾರ ಸಚಿವರಿಗೆ ಹೇಳಿ ಕೆಲಸ ಮಾಡಿಸುವುದು ಬಿಟ್ಟು ಇವರು ಮನವಿ ಕೊಟ್ಟರೇನು ಬರುತ್ತದೆ ಎಂದು ಕಟಕಿಯಾಡಿದರು.
Forget about Muslim votes think if Endosulfan Victims will vote you first slams U T Khader in Mangalore. During a press meet held at congress office in Mangalore Khader Slammed BJP MLA Harish Poonja for his controversial statement stating that he doesn't require Muslim Votes.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm