ಬ್ರೇಕಿಂಗ್ ನ್ಯೂಸ್
20-05-22 12:05 pm Mangalore Correspondent ಕರಾವಳಿ
ಮಂಗಳೂರು, ಮೇ 20 : ನಾರಾಯಣ ಗುರುಗಳಂತಹ ದಾರ್ಶನಿಕರ ಬಗೆಗಿನ ಪಠ್ಯವನ್ನು ತೆಗೆದು ಹಾಕಿದ್ದು ಘೋರ ಅಪರಾಧ. ತೆಗೆದು ಹಾಕಿದ ಪಠ್ಯವನ್ನು ಮತ್ತೆ ಸೇರಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಈ ಪ್ರಮಾದಕ್ಕಾಗಿ ನಾರಾಯಣ ಗುರುಗಳನ್ನು ಕುಲಗುರುಗಳೆಂದು ಹೇಳಿಕೊಳ್ಳುವ ಸಮುದಾಯಕ್ಕೆ ಸೇರಿದ ಕರಾವಳಿಯ ಇಬ್ಬರು ನಾಯಕರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಸಮುದಾಯದ ಪರವಾಗಿ ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರು, ನಾಯಕರಿಗೆ ಬೇರೆ ಬೇರೆಯದೇ ಆದ ವ್ಯಕ್ತಿಗಳು ಆದರ್ಶರಾಗಿರಬಹುದು. ಗೋಡ್ಸೆ, ಗಾಂಧಿ ಅಭಿಮಾನಿಗಳು ಇರಬಹುದು. ಒಂದು ಸಂಘಟನೆಯ ಮುಖ್ಯಸ್ಥ ಹೆಡಗೇವಾರ್ ಬಗ್ಗೆ ಅಭಿಮಾನ ಇರಬಹುದು. ಯಾರು ಬೇಕಾದರೂ ಪ್ರಚಾರ ಸಭೆಯಲ್ಲಿ ಗೋಡ್ಸೆ, ಹೆಡಗೇವಾರ್ ಆದರ್ಶ ಎಂದು ಹೇಳಿಕೊಳ್ಳಬಹುದು. ಅದಕ್ಕೆ ನಮ್ಮ ಆಕ್ಷೇಪವಿಲ್ಲ.
ಆದರೆ ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿತವಾಗಿರುವ ಕರ್ನಾಟಕದಲ್ಲಿ ಒಬ್ಬ ದಾರ್ಶನಿಕ ವ್ಯಕ್ತಿಗೆ ಅಪಮಾನ ಆಗುವುದು ಆಗಬಾರದಿತ್ತು. ದಾರ್ಶನಿಕ ವ್ಯಕ್ತಿಗಳಿಗೆ ಅಪಮಾನ ಮಾಡುವುದು ಘೋರ ಅಪರಾಧ. ಇದರ ಹಿಂದಿನ ದುರುದ್ದೇಶ ಏನೆನ್ನುವುದು ತಿಳಿಯುತ್ತದೆ. ಇದು ಒಂದು ರೀತಿಯ ರಾಜಕೀಯ ಗಿಮಿಕ್. ಪಿಟ್ಟಿ ಪಾಲಿಟಿಕ್ಸ್ ಅಂತ ಹೇಳಬೇಕಷ್ಟೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಒಪ್ಪುವುದಾದರೆ ಮಂಗಳೂರಿನ ರೈಲು ನಿಲ್ದಾಣ ಅಥವಾ ಏರ್ಪೋರ್ಟ್ ಗೆ ಅವರ ಹೆಸರು ಇಡಬೇಕಿತ್ತು. ಚುನಾವಣೆ ನೆಪದಲ್ಲಿ ಏನೋ ಹೆಸರು ಬದಲಾವಣೆ ಮಾಡಬಹುದು. ಆದರೆ ಇದರ ಹಿಂದಿನ ನೀತಿ ಏನು ಎನ್ನುವುದು ತಿಳಿಯ ಬೇಕಾಗುತ್ತದೆ. ನಾರಾಯಣ ಗುರುಗಳ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಒಬ್ಬ ಮಂತ್ರಿ ಹೇಳುತ್ತಾರೆ. ಆದರೆ ಈ ವಿಚಾರವನ್ನು ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಲ್ಲ. ಪ್ರತಿಷ್ಠಿತ ಪತ್ರಿಕೆಗಳು, ಚಿಂತಕರು ಪ್ರಶ್ನೆ ಎತ್ತಿರುವುದು. ಹಾಗಾಗಿ ಉತ್ತರ ಕೊಡಬೇಕಾಗುತ್ತದೆ ಎಂದು ರೈ ಹೇಳಿದರು.
ಪಠ್ಯ ಪುಸ್ತಕ ಮರು ಪರಿಷ್ಕರಣಾ ಸಮಿತಿಯ ಬಗ್ಗೆಯೇ ಆಕ್ಷೇಪ ಇದೆ. ದಾರ್ಶನಿಕ ವ್ಯಕ್ತಿಗಳ ಹೆಸರು, ಅವರ ವಿಚಾರಗಳನ್ನು ಪಠ್ಯದಿಂದ ತೆಗೆದು ಹಾಕುವುದರ ಹಿಂದಿನ ಅಜೆಂಡಾ ಅರ್ಥ ಮಾಡಬೇಕಾಗುತ್ತದೆ. ಏನೇ ರಾಜಕೀಯ ಇರಲಿ, ಬಿಲ್ಲವ, ಈಡಿಗರ ಪಾಲಿನ ಗುರುಗಳಿಗಾದ ಅವಮಾನಕ್ಕಾಗಿ ಅವರನ್ನು ಪ್ರತಿನಿಧಿಸುವ ನಾಯಕರು ರಾಜಿನಾಮೆ ನೀಡಬೇಕು ಎಂದು ಪರೋಕ್ಷವಾಗಿ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಹೆಸರೇಳದೆ ರಮಾನಾಥ ರೈ ರಾಜಿನಾಮೆಗೆ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್ ಮತ್ತಿತರರಿದ್ದರು.
Mangalore Text on Narayana Guru, Periyar removed from class 10 Ramanath Rai slams BJP.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
11-07-26 08:40 pm
HK News Staffer
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm