ಬ್ರೇಕಿಂಗ್ ನ್ಯೂಸ್
20-05-22 05:09 pm Mangalore Correspondent ಕರಾವಳಿ
ಬಂಟ್ವಾಳ, ಮೇ 20 : ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ಕೊಟ್ಟು ಬಂಧನಕ್ಕೊಳಗಾಗಿದ್ದ ಎಸ್ ವಿಎಸ್ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈಯನ್ನು ಹುದ್ದೆಯಿಂದ ತೆಗೆದು ಹಾಕಬೇಕು. ಆತನಿಗೆ ಬೆಂಬಲ ನೀಡುತ್ತಿರುವ ಕಾಲೇಜಿನ ಪ್ರಾಂಶುಪಾಲರನ್ನೂ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಬಂಟ್ವಾಳದ ಎಸ್ ವಿಎಸ್ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಅವ್ಯವಸ್ಥೆ ಹಾಗೂ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಇತ್ತೀಚೆಗೆ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಬಿಡುಗಡೆಯಾಗಿರುವ ಆ ವ್ಯಕ್ತಿ ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಕರೆದು ಪ್ರಾಂಶುಪಾಲರು ಬೆದರಿಸುತ್ತಿದ್ದಾರೆ. ಪೊಲೀಸ್ ದೂರು ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ದೂರಿದ್ದಾರೆ.
ಎಫ್.ಐ.ಆರ್ ದಾಖಲಾಗಿರುವ ಕಾಲೇಜು ಸಂಚಾಲಕ ಪ್ರಕಾಶ್ ಶೆಣೈ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಎಫ್.ಐ.ಆರ್. ದಾಖಲಾಗಿರುವ ಇಬ್ಬರು ಶಿಕ್ಷಕರನ್ನು ತಕ್ಷಣ ವಜಾ ಮಾಡಬೇಕು. ಈ ಬಗ್ಗೆ ಸ್ಟೂಡೆಂಟ್ ಯೂನಿಯನ್ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದರೆ, ಬೆದರಿಸಲು ಯತ್ನಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಸುಳ್ಳು ಹೇಳಿ ಬೆದರಿಸುತ್ತಿದ್ದಾರೆ.
ಕಾಲೇಜಿನಲ್ಲಿ ಓದುವ ಮಕ್ಕಳಿಗೆ ರಕ್ಷಣೆ ಇಲ್ಲ. ಮಹಿಳಾ ಉಪನ್ಯಾಸಕರಿಗೆ ಈ ಬಗ್ಗೆ ಆಕ್ರೋಶ ಹೊಂದಿದ್ದರೂ ಮಾತನಾಡಲು ಧೈರ್ಯ ತೋರುತ್ತಿಲ್ಲ. ಹೀಗಾಗಿ ತಾರತಮ್ಯ ತೋರುವ ಪ್ರಾಂಶುಪಾಲರು ನಮಗೆ ಬೇಡ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಬಂಟ್ವಾಳ ಶಾಸಕರು ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬವರ ಬಗ್ಗೆ ಕೆಟ್ಟದಾಗಿ ಬರೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಎಸ್ ವಿಎಸ್ ಕಾಲೇಜಿನ ಸಂಚಾಲಕ ಮತ್ತು ಇಬ್ಬರು ಉಪನ್ಯಾಸಕರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದರೂ, ಕಾಲೇಜಿನಲ್ಲಿ ಉಳಿದುಕೊಂಡು ವಿರೋಧ ಮಾಡುವ ವಿದ್ಯಾರ್ಥಿಗಳ ಬಗ್ಗೆ ಕಿರುಕುಳ ನೀಡುತ್ತಿದ್ದಾರೆ. ವಿರೋಧ ಮಾಡಿದರೆ ಟಿಸಿ ಕೊಟ್ಟು ಕಳಿಸ್ತೇವೆಂದು ಬೆದರಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ತಿಳಿಸಿದ್ದಾರೆ.
Bantwal SVS college students in Mangalore protest demanding suspension of college principal. Police had arrested three persons in a harassment case where a woman teacher was being harassed since a year, by posting derogatory comments and posting pamphlets abusing her as a prostitute etc. The students protested demanding suspension of the principal for supporting the accused teachers.
07-11-24 06:49 pm
Bangalore Correspondent
Waqf bill, Hubballi, Farmers: ವಕ್ಫ್ ವಿವಾದಕ್ಕೆ...
07-11-24 06:17 pm
Karkala, Naxals: ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್...
07-11-24 04:24 pm
Salman Khan, Haveri arrest, Death threat: ನಟ...
06-11-24 10:51 pm
BMTC bus conductor heart attack, video viral:...
06-11-24 09:31 pm
06-11-24 03:35 pm
HK News Desk
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ತನ್ನದೆಂದ ವಕ್ಫ್...
05-11-24 03:30 pm
Edneer Math Swamiji, Attack, Kasaragod: ಎಡನೀರ...
05-11-24 11:41 am
ಹೊಟ್ಟೆ ನೋವೆಂದು ಬಂದಿದ್ದ 15 ವರ್ಷದ ಬಾಲಕನ ಹೊಟ್ಟೆಯ...
04-11-24 03:28 pm
ನೀಲೇಶ್ವರ ಕಳಿಯಾಟ ಉತ್ಸವದಲ್ಲಿ ಸುಡುಮದ್ದು ಸ್ಫೋಟ ;...
04-11-24 12:55 pm
07-11-24 11:06 pm
Mangalore Correspondent
Mangalore Padil Road, Impact: ಗುಂಡಿ ಬಿದ್ದ ಪಡೀ...
07-11-24 10:30 pm
Mangalore Marathon, Road Diversion: ನ.10ರಂದು...
07-11-24 07:46 pm
Ivan Dsouza Congress, Mangalore: ಮುಖ್ಯಮಂತ್ರಿ...
07-11-24 07:41 pm
Mangalore Ullal Press club, Deepavali: ಉಳ್ಳಾಲ...
07-11-24 07:27 pm
06-11-24 09:11 pm
HK News Desk
Bangalore crime, Jayadeva Hospital: ಪ್ರತಿಷ್ಠಿ...
06-11-24 11:50 am
Lakshmi Hebbalkar, Somu, Belagavi Suicide; ಸಚ...
05-11-24 10:22 pm
Hassan Murder, police constable: ಹಾಸನ ; ಹಸೆಮಣ...
05-11-24 05:05 pm
Bantwal temple robbery, Mangalore crime; ಬಂಟ್...
05-11-24 12:50 pm