ಬ್ರೇಕಿಂಗ್ ನ್ಯೂಸ್
20-05-22 08:52 pm Mangalore Correspondent ಕರಾವಳಿ
ಮಂಗಳೂರು, ಮೇ 20 : ನಾರಾಯಣ ಗುರು ಹೆಸರಲ್ಲಿ ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದೆ. ಹತ್ತನೇ ತರಗತಿ ಪಠ್ಯ ಇನ್ನೂ ಮುದ್ರಿತವಾಗಿ ಹೊರಗೆ ಬಂದಿಲ್ಲ. ಪಠ್ಯದ ಪಿಡಿಎಫ್ ಪ್ರತಿಯನ್ನು ಮುಂದಿಟ್ಟು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಬಾರದು. ಪುಸ್ತಕ ಮುದ್ರಣಗೊಂಡು ಹೊರಬರಲಿ. ಆಬಳಿಕ ಪುಸ್ತಕ ನೋಡಿಕೊಂಡು ಮಾತನಾಡಲಿ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹಿಂದೆ ಬರಗೂರು ರಾಮಚಂದ್ರಪ್ಪ ಇದ್ದಾಗ ನಮ್ಮ ಗೋವಿಂದ ಪೈ ಹೆಸರನ್ನು ಪಠ್ಯದಿಂದ ಕೈಬಿಟ್ಟಿದ್ದರು. ಯಾರೂ ಮಾತನಾಡಿಲ್ಲ. ನಾವು ಅವರನ್ನು ಪಠ್ಯಕ್ಕೆ ಸೇರಿಸಿದ್ದೇವೆ. ಕೆ.ಟಿ ಗಟ್ಟಿ, ಪಂಜೆ ಮಂಗೇಶರಾಯರು, ಶಿವಾನಂದ ಕಳವೆ ಅವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿದ್ದೇವೆ. ಪ್ರಧಾನಿ ಮೋದಿಯವರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮಕ್ಕಳ ಬೆಳವಣಿಗೆಗೆ ಪೂರಕವಾದ ನೈಜ ಇತಿಹಾಸ ಹೇಳುತ್ತೇವೆ. ನಾಡು ಬೆಳಗಿದ ಮಹನೀಯರ ಬಗ್ಗೆ ಪಠ್ಯ ಕೊಟ್ಟಿದ್ದೇವೆ.
ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತ ಅನ್ನುವುದು ಗುಲಾಮಗಿರಿಯ ಸಂಕೇತ ಎನ್ನುವಂತೆ ಪಠ್ಯದಲ್ಲಿ ತೋರಿಸಿದ್ದರು. ನೈಜ ಇತಿಹಾಸವನ್ನು ಮರೆಮಾಚಿ ಮೊಘಲರನ್ನು ವೈಭವೀಕರಿಸಿದ್ದು ನೋಡಿದ್ದೇವೆ. ಅಂತಹ ತಪ್ಪುಗಳನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತಿದ್ದೇವೆ.
ಏಳನೇ ಮತ್ತು ಹತ್ತನೇ ತರಗತಿ ಪಠ್ಯದಲ್ಲಿ ನಾರಾಯಣ ಗುರುಗಳ ಬಗ್ಗೆ ಪಠ್ಯ ಇರಲಿದೆ. ಪುಸ್ತಕ ಇನ್ನೂ ಮುದ್ರಣಗೊಂಡು ಬಂದಿಲ್ಲ. ಅದಕ್ಕೂ ಮೊದಲೇ ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕಳೆದ ಬಾರಿ ಟ್ಯಾಬ್ಲೋ ವಿಚಾರದಲ್ಲೂ ನಾರಾಯಣ ಗುರುಗಳನ್ನು ಬೀದಿಗೆ ತಂದು ನಿಲ್ಲಿಸಿದ್ದರು. ನಾರಾಯಣ ಗುರುಗಳ ಬಗ್ಗೆ ಗೌರವ ಕೊಡುವುದನ್ನು ಕಾಂಗ್ರೆಸಿನಿಂದ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಸಿಗುವ ಮೊದಲೇ ಆರೆಸ್ಸೆಸ್ 1925 ರಲ್ಲಿ ಸ್ಥಾಪನೆಗೊಂಡಾಗಲೇ ನಾರಾಯಣ ಗುರುಗಳನ್ನು ದಿನವೂ ಸ್ಮರಿಸುವ ಕೆಲಸ ಮಾಡುತ್ತಾ ಬಂದಿದೆ. ಪ್ರಧಾನಿ ಮೋದಿಯವರೇ ಗುರುಗಳಿಗೆ ವಿಶೇಷ ಗೌರವ ಕೊಟ್ಟಿದ್ದಾರೆ. ಕಾಂಗ್ರೆಸಿಗರು ಹತಾಶ ಭಾವದಿಂದ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸುದರ್ಶನ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜಗದೀಶ ಶೇಣವ, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ರಣದೀಪ ಕಾಂಚನ್ ಇದ್ದರು.
"As Congress is facing an identity crisis in the state withouy any issues, Congress is unnecessarily dragging the name of Narayana Guru claiming that the government has failed to include Narayana Guru's name in 10th textbook," said BJP district president Sudarshan Moodabidre. He was addressing a press meet at Atal Seva Kendra here on Friday, May 20.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm