ಬ್ರೇಕಿಂಗ್ ನ್ಯೂಸ್
21-05-22 04:51 pm Mangalore Correspondent ಕರಾವಳಿ
ಉಳ್ಳಾಲ, ಮೇ 21 : ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಹರೇಕಳ ಪಾವೂರು ಗ್ರಾಮದ ಉಳಿಯ ಕುದ್ರು (ದ್ವೀಪ) ನಿವಾಸಿಗಳು ತಮ್ಮದೇ ಖರ್ಚಲ್ಲಿ ನಿರ್ಮಿಸಿಕೊಂಡಿದ್ದ ಕಾಲು ಸೇತುವೆ ನೀರುಪಾಲಾಗಿದೆ.
ಮಂಗಳೂರಿನ ಅಡ್ಯಾರಿನಿಂದ ಪಾವೂರು ಉಳಿಯ ಕುದುರು ದ್ವೀಪದ ಸಂಪರ್ಕಕ್ಕಾಗಿ ದಾನಿಗಳು ಮತ್ತು ಸ್ವಂತ ಖರ್ಚಿನಿಂದ ಕುದ್ರು ನಿವಾಸಿಗಳು ಸುಮಾರು 18 ಲಕ್ಷ ರೂಪಾಯಿ ಖರ್ಚಲ್ಲಿ 250 ಮೀಟರ್ ಉದ್ದದ ಸೇತುವೆಯನ್ನ ನಿರ್ಮಿಸಿದ್ದರು. ಕಬ್ಬಿಣದ ಸಲಾಕೆ ಮತ್ತು ಮರದ ಹಲಗೆಯ ಈ ತಾತ್ಕಾಲಿಕ ಕಾಲು ಸೇತುವೆಯನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಈ ಸೇತುವೆ ನಾಶವಾಗಿದೆ.
ಪಾವೂರು-ಉಳಿಯ ದ್ವೀಪದಲ್ಲಿ ಕಳೆದ ಅನೇಕ ವರುಷಗಳಿಂದ ಸುಮಾರು 60 ಕುಟುಂಬಗಳು ವಾಸವಾಗಿವೆ. ಈ ಪ್ರದೇಶದಲ್ಲಿ ಒಂದು ಚರ್ಚ್ ಕೂಡ ಇದೆ. ಕುದುರು ಸಂಪರ್ಕಕ್ಕೆ ಶಾಶ್ವತ ಸೇತುವೆ ನಿರ್ಮಿಸುವಂತೆ ಶಾಸಕ ಯು.ಟಿ ಖಾದರ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಲ್ಲಿನ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಫಲ ಕಂಡಿಲ್ಲ.
ನಿರಂತರವಾಗಿ ಮಳೆ ಸುರಿದರೆ ದ್ವೀಪ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ನದಿಯು ಉಕ್ಕಿ ಹರಿದರೆ ಜನರು ಕೆಲಸಕ್ಕೂ ತೆರಳುವಂತಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸಂಚಾರ ಸಾಧ್ಯವಾಗದೆ, ಇಲ್ಲಿನ ನಿವಾಸಿಗಳು ಆಹಾರ ಸಾಮಾಗ್ರಿಗಳನ್ನ ಮೊದಲೇ ಶೇಖರಿಸಿಡುವ ಅನಿವಾರ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ 75 ರ ಅಡ್ಯಾರ್ ಬಳಿಯ ನೇತ್ರಾವತಿ ನದಿಯ ಮಧ್ಯದಲ್ಲಿ ಈ ದ್ವೀಪವಿದ್ದು ಮಂಗಳೂರು ನಗರಕ್ಕೆ ಹತ್ತಿರವಾಗಿದೆ. ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಇಲ್ಲಿನ ನಿವಾಸಿಗಳು ಶಾಶ್ವತ ಸೇತುವೆಗಾಗಿ ಶಾಸಕರು, ಸಂಸದರಿಗೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಸರಕಾರವು ಕುದುರು ನಿವಾಸಿಗಳ ಮನವಿಯನ್ನು ಇಷ್ಟರವರೆಗೂ ಪರಿಗಣಿಸಿಲ್ಲ. ಚುನಾವಣೆ ಸಮೀಪಿಸಿದಾಗ ಮಾತ್ರ ಜನಪ್ರತಿನಿಧಿಗಳು ಭರವಸೆಗಳ ಮೂಲಕ ದ್ವೀಪದ ನಿವಾಸಿಗಳನ್ನು ಸಮಾಧಾನಪಡಿಸುತ್ತಾರೆ.
ಅಡ್ಯಾರು ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆಯೂ ಅವ್ಯಾಹತವಾಗಿರುವುದರಿಂದ ಇಲ್ಲಿ ತಾತ್ಕಾಲಿಕವಾದ ಎಷ್ಟು ಸೇತುವೆಗಳನ್ನು ಕಟ್ಟಿದರೂ ಪ್ರತಿಬಾರಿ ನದಿ ಒಡಲು ಸೇರುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
With heavy rains lashing the district during the last two days, a footbridge connecting Pavoor-Uliya Kudru (isle) was washed away on May 20. The bridge was constructed on the Nethravathi River. This 250-meter bridge was constructed by the residents with the help of donors. This temporary bridge with iron structure and wooden planks was constructed at a cost of Rs 18 lac a few years ago. This bridge has supporting pillars installed below the river base. Wooden planks provide the base for pedestrians. Unfortunately, the heavy rain which lashed for two days has destroyed this bridge.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
01-10-25 05:32 pm
HK News Desk
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
01-10-25 04:45 pm
Mangalore Correspondent
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm