ಬ್ರೇಕಿಂಗ್ ನ್ಯೂಸ್
22-05-22 04:23 pm Udupi Correspondent ಕರಾವಳಿ
ಉಡುಪಿ, ಮೇ 22: ಬೆಂಗಳೂರಿನ ಯುವ ಜೋಡಿ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಾವಿಗೆ ಶರಣಾಗುವುದಕ್ಕೂ ಮೊದಲು ಮಂಗಳೂರಿನಲ್ಲಿ ಬಾಡಿಗೆ ಮನೆಯನ್ನೂ ಪಡೆದಿದ್ದಲ್ಲದೆ, ಎರಡು ದಿನಗಳಿಂದ ಎರಡೂ ಜಿಲ್ಲೆಗಳಲ್ಲಿ ಸುತ್ತಾಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆಯೇ ಮನೆ ಬಾಡಿಗೆ ಪಡೆದ ಬಳಿಕ ಯಶವಂತ ಯಾದವ್ ಮತ್ತು ಜ್ಯೋತಿ ಜೋಡಿ ಕಾರನ್ನು ಬಾಡಿಗೆ ಪಡೆದಿದ್ದರು. ಕಾರನ್ನು ಸೆಲ್ಫ್ ಡ್ರೈವ್ ಮಾಡಿ ತಿರುಗಾಡುವುದಕ್ಕಾಗಿ 5000 ರೂ. ಮುಂಗಡ ಪಾವತಿಸಿ, ವಿಳಾಸಕ್ಕೆ ಆಧಾರ್ ಕಾರ್ಡ್ ಕೊಟ್ಟಿದ್ದರು. ಆನ್ ಲೈನ್ ಮೂಲಕ ಕಾರನ್ನು ಬುಕ್ ಮಾಡಿದ್ದ ಜೋಡಿ, ಕಾರು ಪಡೆದು ಮೂರು ದಿನಗಳಿಂದ ಕರಾವಳಿಯ ಪ್ರಮುಖ ತಾಣಗಳಲ್ಲಿ ತಿರುಗಾಡಿದೆ. ಕಾರು ಬಾಡಿಗೆ ನೀಡಿದ್ದ ಬಗ್ಗೆ ಮಾಲೀಕ ಹುಸೇನ್ ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ತಿರುಗಾಡಿದ ಬಳಿಕ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆಗೆ ತೆರಳಿದ್ದು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ತಾವಿರುವ ಜಾಗದ ಬಗ್ಗೆ ಯಶವಂತ್ ತನ್ನ ಮನೆಯವರಿಗೆ ಲೊಕೇಶನ್ ಕಳುಹಿಸಿದ್ದ. ತನಗೆ ಬದುಕಲು ಸಾಧ್ಯವಿಲ್ಲ. ನಾವು ಮನೆಯವರನ್ನು ಬಿಟ್ಟು ಬಂದು ಇರಲು ಆಗಲ್ಲ. ನಾವು ಉಳಿಯುವುದಿಲ್ಲ. ಬದುಕು ಮುಗಿಸಲು ನಿರ್ಧರಿಸಿದ್ದೇವೆ ಎಂದು ನಸುಕಿನ ಮೂರು ಗಂಟೆಗೆ ಲೊಕೇಶನ್ ಹಾಕಿದ್ದ. ಇದರಿಂದಾಗಿ ಮನೆಯವರಿಗೆ ಯಶವಂತ್ ಸಾವಿನ ಬಗ್ಗೆ ಬೆಳಗ್ಗೆಯೇ ಶಂಕೆ ಮೂಡಿತ್ತು. ಮುಖ್ಯರಸ್ತೆಯಿಂದ ಎರಡು ಕಿಲೋಮೀಟರ್ ದೂರದ ಒಳದಾರಿಗೆ ಹೋಗಿ ಗುಡ್ಡ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಜೋಡಿಗಳು ಅಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂಬದಿ ಡೋರ್ ನಿಂದ ಮೃತದೇಹ ಹೊರಗೆ ಬಿದ್ದಿದ್ದು ಇದಕ್ಕೆ ಪುಷ್ಟಿ ನೀಡುತ್ತಿದೆ. ಒಬ್ಬರಿಗೊಬ್ಬರು ತಬ್ಬಿಕೊಂಡ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಾಡಿಗೆ ಮನೆಯನ್ನು ಪಡೆದು ಹೊಸ ಬದುಕು ಕಟ್ಟಲು ಹೊರಟವರು ದುರಂತ ಅಂತ್ಯ ಕಂಡುಕೊಂಡಿದ್ದು ಯಾಕೆಂಬ ಪ್ರಶ್ನೆ ಎದುರಾಗಿದೆ.

ಲೊಕೇಶನ್ ಆಧರಿಸಿ ಘಟನಾ ಸ್ಥಳಕ್ಕೆ ಕುಟುಂಬದ ಓರ್ವ ಸದಸ್ಯ ಆಗಮಿಸಿದ್ದು ಬ್ರಹ್ಮಾವರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಉಡುಪಿ ; ಕಾರಿನಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಬೆಂಗಳೂರಿನ ಜೋಡಿ ಆತ್ಮಹತ್ಯೆಗೆ ಶರಣು
Bangalore Couple commit suicide inside car by fire in Udupi, share location to parents. Couple had taken a house for rent in Mangalore and a rented car online to move around. The deceased were identified as Yashwanth (23) and Jyothi (23). Police sources said that the couple had sent messages to their families that ‘they were ending their lives’. However, the police are verifying this and will ascertain the exact cause of the death.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm