ಬ್ರೇಕಿಂಗ್ ನ್ಯೂಸ್
11-12-20 05:49 pm Mangalore Correspondent ಸ್ಪೆಷಲ್ ಕೆಫೆ
ಮಂಗಳೂರು, ಡಿ.11: ಸಾಧಾರಣವಾಗಿ ರಸ್ತೆ ಬದಿಯೋ, ಬಸ್ ನಿಲ್ದಾಣದಲ್ಲೋ ಭಿಕ್ಷುಕರು, ನಿರ್ಗತಿಕರು ಕಂಡುಬಂದರೆ ಅವರಿಂದ ಜನ ದೂರ ನಿಲ್ಲುತ್ತಾರೆ. ಅವರೂ ನಮ್ಮಂತೇ ಮನುಷ್ಯರು, ಏನೋ ಕಾರಣದಿಂದ ಅವರಿಗೆ ಈ ಸ್ಥಿತಿ ಬಂದಿದೆ ಅನ್ನುವುದನ್ನು ಜನ ಮರೆಯುತ್ತಾರೆ. ಅವರಲ್ಲೂ ಮನುಷ್ಯತ್ವ ಇದೆಯೆಂದು ಗುರುತಿಸುವ ನಿಸ್ವಾರ್ಥ ಭಾವ ನಮ್ಮಲ್ಲಿ ಇಲ್ಲವಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಕಿರುಚಿತ್ರ ಹೆಣೆದಿದ್ದಾರೆ ಪುತ್ತೂರಿನ ಕಲಾವಿದರು.
ಪುತ್ತೂರಿನ ಜ್ಞಾನ ಕ್ರಿಯೇಶನ್ಸ್ ಎನ್ನುವ ಲಾಂಛನದಡಿ 12 ನಿಮಿಷಗಳ ಕಿರುಚಿತ್ರ ತಯಾರಿಸಲಾಗಿದ್ದು, ಇತ್ತೀಚೆಗೆ ಉಪ್ಪಿನಂಗಡಿಯ ಸಭಾಂಗಣ ಒಂದರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. 4ನೇ ಕ್ಲಾಸ್ ಓದುತ್ತಿರುವ ಜ್ಞಾನ ರೈ ಎಂಬ ಹೆಣ್ಮಗಳನ್ನು ಮುಖ್ಯವಾಗಿಟ್ಟು ಹೆಣೆದಿರುವ ಕಥಾನಕದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಇದೆ. ಜನರ ಭಾವನೆಯನ್ನು ಕೆದಕುವ ಥಿಯರಿ ಇದೆ. ಶಾಲೆಗೆ ಹೋಗುವ ಬಾಲಕಿಯೊಬ್ಬಳು ನಿರ್ಗತಿಕನಲ್ಲಿ ಮನುಷ್ಯತ್ವ ಗುರುತಿಸಿ, ಸಂತೈಸುವುದೇ ಚಿತ್ರದ ಥೀಮ್.

ಮಾತಿಲ್ಲ. ಸಂಭಾಷಣೆ ಇಲ್ಲ. ಬರೀಯ ಅಭಿನಯ ಮತ್ತು ಹಿನ್ನೆಲೆ ಸಂಗೀತ ಮಾತ್ರ. ಆದರೆ, 12 ನಿಮಿಷಗಳ ಚಿತ್ರವನ್ನು ಅದೇ ನೋಡುವಂತೆ ಮಾಡುತ್ತದೆ. ಪ್ರೇಮರಾಜ್ ಆರ್ಲಪದವು ನಿರ್ದೇಶನ ಮತ್ತು ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಒಳ್ಳೆದಾಗಿ ಮೂಡಿಬಂದಿದೆ. ಮಂಗಳೂರಿನ ಹುಡುಗಿ ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಹಾಡಿದ್ದಾರೆ. ಬೇಬಿ ಜ್ಞಾನ ರೈ ಕುರಿಯ, ಭರತ್ ಆಳ್ವ ಸೂರಂಬೈಲ್, ಪ್ರದೀಪ್ ನಾಯರ್, ಜ್ಯೋತಿ ಕೆದಿಲ, ವಸಂತ ಲಕ್ಷ್ಮಿ ಪುತ್ತೂರು ಪಾತ್ರವರ್ಗದಲ್ಲಿದ್ದಾರೆ.
Most Anticipated Short Movie acted by Jnana Rai having a great social message "Nishvarta" has now been released under the banner of Jnana Creations, Puttur.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 07:07 pm
HK News Staffer
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
05-10-26 10:49 am
HK News Staffer
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am
ಕಾಲೇಜು ಕ್ಯಾಂಟೀನ್ ಬಳಿ ಬಿಸಿಎ ವಿದ್ಯಾರ್ಥಿಗೆ ಚೂರಿ...
04-10-26 12:51 pm
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm