ಬ್ರೇಕಿಂಗ್ ನ್ಯೂಸ್
28-02-21 09:58 pm Mangaluru correspondent ಸ್ಪೆಷಲ್ ಕೆಫೆ
ಕೊಲ್ಕತ್ತಾ, ಫೆ 28: ಚಹಾಕ್ಕೆ ಸಾಮಾನ್ಯವಾಗಿ ದರ ಎಷ್ಟಿರಬಹುದು ಎಂಬುದನ್ನು ಒಮ್ಮೆ ಯೋಚಿಸಿದರೆ, 10 ರೂಪಾಯಿಯೋ ಅಥವಾ 12 ರೂಪಾಯಿಯೋ.. ಹೆಚ್ಚೆಂದರೂ 20 ರೂಪಾಯಿಯ ಒಳಗೆ ಚಹ ಕೊಳ್ಳಬಹುದು. ಆದರೆ ಕೊಲ್ಕತ್ತಾದ ಹೋಟೆಲ್ ಒಂದರಲ್ಲಿ ಚಹ ಕೊಂಡರೆ ಒಂದು ಕಪ್ ಚಹಾಕ್ಕೆ 1,000 ರೂಪಾಯಿ ಖರ್ಚಾಗುತ್ತದೆ. ನಂಬಿಕೆ ಬರುತ್ತಿಲ್ಲ ಅಲ್ವೇ? ಆದರೂ ಇದು ಸತ್ಯ. ಹಾಗಿದ್ದಲ್ಲಿ ಈ ಚಹದ ಅಂಗಡಿ ಎಲ್ಲಿರಬಹುದು..
ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದ ಬಂಗಾಳದ ಪಾರ್ಥಾ ಗಂಗೂಲಿ ಸ್ನೇಹಿತರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. ಸ್ನೇಹಿತರ ಸಲಹೆಯ ಮೇರೆಗೆ ವಿವಿಧ ರೀತಿಯ ಚಹಾವನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. 2014 ರಲ್ಲಿ ಮುಕುಂದಾಪುರದ ಎರಡು ಖಾಸಗಿ ಆಸ್ಪತ್ರೆಗಳ ಬಳಿ ಚಹಾ ಅಂಗಡಿಯೊಂದನ್ನು ಇವರು ಆರಂಭಿಸಿದ್ದರು.
ಜನರಿಗೆ ಆರೋಗ್ಯಕರವಾದ ಚಹಾ ನೀಡುವುದು ನನ್ನ ಗುರಿ. ಸ್ಥಳೀಯರು ಮಾತ್ರವಲ್ಲದೇ ವಿವಿಧ ರಾಜ್ಯಗಳ ಜನರು ಇಲ್ಲಿ ತಯಾರಿಸಿದ ಚಹಾದ ರುಚಿ ಸವಿಯಲು ಬರುತ್ತಾರೆ ಎಂದು ಗಂಗೂಲಿ ಹೇಳುತ್ತಾರೆ.

ಚಹ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗಂಗೂಲಿ ನಂಬಿದ್ದಾರೆ. ಮುಂದಿನ ದಿನಗಳಲ್ಲಿ ಹೊಸದಾದ ಪ್ರಯೋಗ ಮಾಡಲಿದ್ದು, ಚಿಕಿತ್ಸೆಯನ್ನು ಪ್ರಾರಂಭಿಸುತ್ತಿದ್ದಾರೆ. ಈ ಕುರಿತಂತೆ ಶ್ರೀಘ್ರದಲ್ಲೇ ಪ್ರಯತ್ನಗಳು ನಡೆಯುತ್ತಿದೆ. ಪಾರ್ಥಾ ಗಂಗೂಲಿಯವರ ಚಹಾದ ಅಂಗಡಿಯಲ್ಲಿ ಹಸಿರು ಚಹ, ಶುಂಠಿ ಚಹಾ, ಏಲಕ್ಕಿ ಚಹ ಮತ್ತು ಲವಂಗದಿಂದ ತಯಾರಿಸಿದ ಚಹಾ ಸಿಗುತ್ತದೆ. ಒಂದು ಕಪ್ ಚಹವನ್ನು 12 ರೂಪಾಯಿಯಿಂದ 1,000 ರೂಪಾಯಿವರೆಗೆ ಮಾರಾಟ ಮಾಡುತ್ತಾರೆ ಎಂಬುದೇ ವಿಶೇಷ. ಇವುಗಳಲ್ಲಿ ಮಸ್ಕಟೆಲ್ ಎಂಬ ಚಹಾದ ವಿಧ ವಿಶ್ವದ ಜನಪ್ರಿಯ ಚಹಾಗಳಲ್ಲಿ ಒಂದಾಗಿದೆ. ಮಸ್ಕಟೆಲ್ ಚಹ ಸವಿಯಲೆಂದೇ ನಾನಾ ಕಡೆಗಳಿಂದ ಜನರು ಬರುತ್ತಾರೆ.

ಏನಿದು ಮಸ್ಕಟೆಲ್ ಟೀ?
ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಬೆಳೆದ ಚಹಾಗಳನ್ನು ಭಾರತದಲ್ಲಿ ಡಾರ್ಜಿಲಿಂಗ್ ಎಂದು ಕರೆಯಲಾಗುತ್ತದೆ. ಟಿಬೆಟಿಯನ್ ಪದವಾದ ಡೋರ್ಜೆ (ಸಿಡಿಲು ಎಂಬ ಅರ್ಥ) ಮತ್ತು ಲಿಂಗ್ ಅಂದರೆ, ಸಂಸ್ಕೃತ ಪದವಾದ ಭೂಮಿ ಎಂಬುದಾಗಿ ಹುಟ್ಟಿಕೊಂಡಿದೆ. ಚಳಿಗಾಲದ ಸಮಯದಲ್ಲಿ ಈ ಪ್ರದೇಶದಲ್ಲಿ ಕಂಡು ಬರುವ ಹಸಿರು ನೊಣಗಳು ಚಹಾ ಎಲೆಗಳನ್ನು ಹಾಗೂ ಎಲೆಗಳ ಒಳಗಿನ ರಸವನ್ನು ಹೀರುತ್ತವೆ. ಇದರ ಪರಿಣಾಮವಾಗಿ ಹಸಿರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಪ್ರಕ್ರಿಯೆಯಲ್ಲಿ, ಟರ್ಪಿನ್ ಎಂಬ ಪರಿಮಳದ ಪದಾರ್ಥವನ್ನು ಉತ್ಪಾದಿಸುತ್ತದೆ. ಈ ಟರ್ಪಿನ್ ಹುಳಿಬಂದ ನಂತರ ಮಸ್ಕಟೆಲ್ ಅಥವಾ ಜೇನುತುಪ್ಪದ ಪರಿಮಳವನ್ನು ಪಡೆಯುತ್ತದೆ. ಈ ರೀತಿಯಾಗಿ ಮಸ್ಕೆಟೆಲ್ ಚಹಾದ ಸಸ್ಯಗಳು ಪರಿಮಳವನ್ನು ಬೀರುವುದರಿಂದ ಮಸ್ಕಟೆಲ್ ಚಹ ಎಲ್ಲಡೆ ಪ್ರಸಿದ್ಧಿ ಪಡೆದಿದೆ.
Did you know that the only beverage touching the hearts and minds of people from the lowest income strata of the society to the absolute elites would cost thousands at this roadside tea stall in West Bengal.
Indeed, the chaiwala with a difference, Parthapratim Ganguly’s one cup of tea sells at Rs 1,000.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm