ಬ್ರೇಕಿಂಗ್ ನ್ಯೂಸ್
09-06-21 02:37 pm Headline Karnataka News Network ಸ್ಪೆಷಲ್ ಕೆಫೆ
ಕೇಪ್ ಟೌನ್, ಜೂನ್ 9: ಭಾರತದ ಮಹಿಳೆಯರು ಒಂದು ಮಗುವನ್ನು ಹೆರುವುದೇ ಕಷ್ಟ ಎನ್ನುತ್ತಾರೆ. ಆದರೆ, ಇಲ್ಲೊಬ್ಬ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಏಕಕಾಲದಲ್ಲಿ ಹತ್ತು ಮಕ್ಕಳಿಗೆ ಜನ್ಮವಿತ್ತಿದ್ದು ಜಗತ್ತಿನ ಗಮನ ಸೆಳೆದಿದ್ದಾರೆ. ಅಲ್ಲದೆ, ಗಿನ್ನೆಲ್ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ನೂತನ ವಿಶ್ವದಾಖಲೆಯನ್ನೂ ನಿರ್ಮಿಸಿದ್ದಾಳೆ.
37 ವರ್ಷದ ಗೊಸಿಯಾಮೆ ತಮಾರೋ ಸಿತೋಲ್ ಎಂಬ ಮಹಿಳೆ ಹೊಸ ರೀತಿಯ ದಾಖಲೆಯ ಪಟ್ಟಿಗೆ ಸೇರಿದ ಮಹಿಳೆ. ಜೂನ್ 7ರಂದು ಈಕೆ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಏಳು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ.


ಇದಕ್ಕೂ ಮುನ್ನ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಗೊಸಿಯಾಮೆ, ಈ ಬಾರಿ ಆರು ಮಕ್ಕಳನ್ನು ಹೆರುವ ನಿರೀಕ್ಷೆಯಲ್ಲಿದ್ದಳು. ಆದರೆ, ಏಳು ತಿಂಗಳು ಪೂರ್ತಿಯಾಗಿದ್ದ ಮಹಿಳೆಯನ್ನು ವೈದ್ಯರ ಸೂಚನೆಯಂತೆ ಸಿಸೇರಿಯನ್ ಮಾಡಲಾಗಿತ್ತು.

ಗೊಸಿಯಾಮೆ ಗರ್ಭಿಣಿಯಾದ ಬಳಿಕ ತೀವ್ರ ಕಾಲು ನೋವು ಮತ್ತು ಹೃದಯದ ಬೇನೆ ಅನುಭವಿಸಿದ್ದರು. ಒಂದು ಹಂತದಲ್ಲಿ ಡಾಕ್ಟರ್, ಹೊಟ್ಟೆಯಲ್ಲಿ ಆರು ಮಕ್ಕಳಿದ್ದಾರೆಂದು ಹೇಳಿದಾಗ, ಈ ಮಕ್ಕಳು ಉಳಿಯಲ್ಲ ಎಂದುಕೊಂಡಿದ್ದರು. ಆದರೆ, ಈಗ ಹೆರಿಗೆಯ ಬಳಿಕ ಮಕ್ಕಳು ಸುರಕ್ಷಿತವಾಗಿದ್ದು, ಕೆಲವು ತಿಂಗಳ ಕಾಲ ಇನ್ ಕ್ಯುಬೇಟರಿನಲ್ಲಿ ಇಡಬೇಕಾಗುತ್ತೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಮಾಲಿ ದೇಶದ ಹಲಿಮಾ ಸಿಸ್ಸಿ ಎನ್ನುವ ಮಹಿಳೆ 9 ಮಕ್ಕಳಿಗೆ ಜನ್ಮವಿತ್ತು ಗಿನ್ನೆಸ್ ದಾಖಲೆ ಸೇರ್ಪಡೆಯಾಗಿದ್ದಳು. ಅದು ದೊಡ್ಡ ಅಚ್ಚರಿಗೆ ಕಾರಣವಾಗಿತ್ತಲ್ಲದೆ, ಎಲ್ಲ ಮಕ್ಕಳು ಕೂಡ ಬದುಕುಳಿದಿದ್ದರು. ಅದಕ್ಕೂ ಮುನ್ನ 2009ರಲ್ಲಿ ಅಮೆರಿಕದ ಮಹಿಳೆಯೊಬ್ಬಳು ಎಂಟು ಮಕ್ಕಳನ್ನು ಹೆತ್ತು ದಾಖಲೆ ಸೇರಿದ್ದಳು. ಆಕೆಯ ಮಕ್ಕಳೂ ಸುರಕ್ಷಿತವಾಗಿ ಬದುಕಿದ್ದರು.
ಇದೀಗ ನೀಗ್ರೋ ಮಹಿಳೆಯೊಬ್ಬಳು ಒಂದೇ ಬಾರಿಗೆ ಹತ್ತು ಮಕ್ಕಳನ್ನು ಹೆರುವ ಮೂಲಕ ವೈದ್ಯ ಜಗತ್ತಿಗೇ ಅಚ್ಚರಿ ಮೂಡಿಸಿದ್ದಾಳೆ.
Gossamer Thamara Sithole eventually conceived 10 children. This has set a new Guinness Book Record. The record was previously held by Halima Cisse of Mali.
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
23-12-25 03:28 pm
HK News Desk
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
23-12-25 10:51 pm
Mangalore Correspondent
Sansad Khel Mahotsav Mangalore: ಮಂಗಳೂರಿನಲ್ಲಿ...
23-12-25 10:40 pm
Ullal, UT Khader, Mudipu KSRTC: ನಾಲೇಜ್ ಕಾರಿಡಾ...
23-12-25 10:23 pm
Mangalore Murder, Crime, Court: ಕೊಲೆ ಮಾಡಿದ್ದು...
23-12-25 10:12 pm
DGP Alok Kumar, Mangalore Jail: ಮಂಗಳೂರು ಜೈಲಿಗ...
23-12-25 10:02 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm