ಬ್ರೇಕಿಂಗ್ ನ್ಯೂಸ್
14-08-21 05:53 pm Mangaluru Correspondent ಸ್ಪೆಷಲ್ ಕೆಫೆ
ಮಂಗಳೂರು, ಆಗಸ್ಟ್ 14: ಕಳೆದ ಬಾರಿ ಲಾಕ್ಡೌನ್ ಆದಾಗ ಹಲವಾರು ಮಂದಿ ಇದ್ದ ಕೆಲಸವೂ ಹೋಯ್ತು. ಇನ್ನು ಜೀವನ ಹೇಗೆ ಎಂದು ಹಲುಬಿದ್ದರು. ಆದರೆ ಇಲ್ಲೊಬ್ಬರು ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಮನೆಯ ತಾರಸಿಯಲ್ಲಿ ಮಲ್ಲಿಗೆ ಬೆಳೆದು ಕೈತುಂಬಾ ಸಂಪಾದಿಸಿದ್ದಾರೆ.
ಮಂಗಳೂರಿನ ಕೊಂಚಾಡಿಯಲ್ಲಿ ಮನೆಯನ್ನು ಹೊಂದಿರುವ ಕಿರಣ ಎಂಬ ಈ ಮಹಿಳೆಗೂ ಕಳೆದ ಬಾರಿ ಲಾಕ್ಡೌನ್ ಆಗಿ ಎಲ್ಲವೂ ಬಂದ್ ಆದಾಗ ಅದೇ ಸ್ಥಿತಿ ಎದುರಾಗಿತ್ತು. ಮೊದಲಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಕಿರಣ, ಸೂಕ್ತ ಜಾಗ ಇಲ್ಲದೆ ನಗರ ಪ್ರದೇಶದಲ್ಲಿ ಕೃಷಿ ಮಾಡೋದು ಹೇಗೆ ಎಂದು ಅಂದ್ಕೊಂಡಿದ್ದರು. ಆದರೆ, ಲಾಕ್ಡೌನ್ ಸಮಯದಲ್ಲಿ ತಾರಸಿಯಲ್ಲೇ ಹೇಗೆ ಮಲ್ಲಿಗೆ ಕೃಷಿ ಮಾಡಬಾರದೆಂದು ಯೋಚಿಸಿ ಹಲವರ ಹೀಗಳಿಕೆಯ ಮಧ್ಯೆಯೇ ಮುಂದಡಿ ಇಟ್ಟಿದ್ದಾರೆ.
ಮೊದಲಿಗೆ ಒಂದಷ್ಟು ಹೂ ಕುಂಡಗಳನ್ನು ಖರೀದಿಸಿ, ಮಲ್ಲಿಗೆ ಗಿಡಗಳನ್ನು ನೆಟ್ಟಿದ್ದರು. ಕಳೆದ ಬಾರಿ 40 ಸಾವಿರ ರೂಪಾಯಿ ಆದಾಯ ಬಂದಿತ್ತು. ಈ ಬಾರಿ ಉತ್ತಮ ಇಳುವರಿ ಬಂದಿದೆ. ಈಗ ಹೂ ಕುಂಡಗಳನ್ನೂ ಹೆಚ್ಚಿಸಿದ್ದೇನೆ. 90ಕ್ಕೂ ಹೆಚ್ಚು ಗಿಡಗಳಿವೆ. ಇದರಿಂದ ತಿಂಗಳಿಗೆ ಕನಿಷ್ಠ 15 ಸಾವಿರ ರೂ. ಆದಾಯ ಬರ್ತಿದೆ ಎನ್ನುತ್ತಾರೆ, ಕಿರಣ.
ಮೊದಲಿಗೆ ಮನೆಯವರೆಲ್ಲ ಮಲ್ಲಿಗೆಯಿಂದ ಏನೂ ಲಾಭವಿಲ್ಲ, ಬೇಡ ಎಂದಿದ್ದರಂತೆ. ಆದರೆ, ಯಾರ ಮಾತಿಗೂ ಕಿವಿಗೊಡದೆ ಮಲ್ಲಿಗೆ ಬೆಳೆದಿದ್ದ ಕಿರಣ ಅದರಲ್ಲಿ ಯಶಸ್ವಿಯಾಗಿದ್ದಾರೆ. ತಂಗಿಯ ಮಲ್ಲಿಗೆ ಕೃಷಿಯ ಕೆಲಸಕ್ಕೆ ಅಕ್ಕನೂ ಕೈ ಜೋಡಿಸಿದ್ದಾರೆ. ಬೆಳಗ್ಗೆ ಬೇಗ ಎದ್ದು ದಿನವೂ ಮಲ್ಲಿಗೆ ಕೊಯ್ದು ಮಾರುಕಟ್ಟೆಗೆ ಕಳಿಸಿಕೊಡುವುದೇ ಕೆಲಸ. ಆದಾಯ ನಿಶ್ಚಿತ ಎನ್ನುವ ಕಿರಣ, ಮಂಗಳೂರಿನಂಥ ಜಾಗದಲ್ಲಿ ಮಲ್ಲಿಗೆ ಕೃಷಿಗೆ ಹೇಳಿ ಮಾಡಿಸಿದ ವಾತಾವರಣ ಇದೆ. ಬೆಳಗ್ಗೆ ಮತ್ತು ಸಂಜೆ ಗಂಡ ದಿನಾ ನೀರು ಹಾಕುತ್ತಾರೆ. ಉಳಿದಿದ್ದನ್ನು ನಾವೇ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ.
Video:
Kirana, a professional advocate in Mangalore’s Konchady grows jasmine flowers on her terrace. She came up with this idea during last year’s lockdown period. Kirana sells the flowers in the market and earns around Rs 15,000 in a month.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am