Danish Kaneria Suggestion to Pakistan to learn from Countries like India.
">ಬ್ರೇಕಿಂಗ್ ನ್ಯೂಸ್
23-01-23 01:20 pm Source: Hindustantimes ಕ್ರೀಡೆ
ರೋಹಿತ್ ಶರ್ಮಾ ನೇತೃತ್ವದ ಭಾರತವು, ತವರಿನಲ್ಲಿ ನ್ಯೂಜಿಲೆಂಡ್ ಮಣಿಸಿ ಸರಣಿ ಜಯ ಸಾಧಿಸಿದೆ. ಇತ್ತ ಭಾರತ ಕಿವೀಸ್ ವಿರುದ್ಧ ಗೆದ್ದರೆ, ಅತ್ತ ಪಾಕಿಸ್ತಾನ ಉರಿದು ಬೀಳುತ್ತಿದೆ. ಕೀವೀಸ್ ವಿರುದ್ಧ ತನ್ನ ತವರಿನಲ್ಲಿ ಭಾರತಕ್ಕೆ ಗೆಲ್ಲಲು ಸಾಧ್ಯವಾಗುತ್ತಿದೆ. ಆದರೆ, ಪಾಕ್‌ಗೆ ಇದು ಸಾಧ್ಯವಾಗುತ್ತಿಲ್ಲವಲ್ಲ ಎಂದು ಪಾಕಿಸ್ತಾನದದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಕಿವೀಸ್ ವಿರುದ್ಧ ಪಾಕ್ ನೆಲದಲ್ಲಿ ನೀರಸ ಪ್ರದರ್ಶನ ನೀಡದ ಬಾಬರ್ ಅಜಮ್ ಬಳಗದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿದೆ. ನಾಳೆ ನಡೆಯಲಿರುವ ಮೂರನೇ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವತ್ತ ಗಮನಹರಿಸಿದೆ. ಅಲ್ಲದೆ ನಾಳಿನ ಪಂದ್ಯ ಗೆದ್ದರೆ, ಭಾರತ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ನೆಗೆಯಲಿದೆ. ಇತ್ತ ಭಾರತ ವಿರುದ್ಧದ ಸರಣಿಯಲ್ಲಿ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದ ನ್ಯೂಜಿಲೆಂಡ್ ವಿರುದ್ಧ, ಪಾಕಿಸ್ತಾನವು ತನ್ನ ತವರಿನಲ್ಲಿ ಹೀನಾಯ ಸೋಲನುಭವಿಸಿತ್ತು.
ಗ್ರೀನ್ ಆರ್ಮಿಯು ತಮ್ಮ ತವರಿನಲ್ಲಿ ನಡೆದ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಬೃಹತ್ ಮೊತ್ತವನ್ನು ದಾಖಲಿಸಲು ಹೆಣಗಾಡಿತ್ತು. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಕನೇರಿಯಾ, ನ್ಯೂಜಿಲೆಂಡ್ ವಿರುದ್ಧ ಬಾಬರ್ ನೇತೃತ್ವದ ತಂಡದ ಬ್ಯಾಟಿಂಗ್ ಪ್ರದರ್ಶನವನ್ನು ಟೀಕಿಸಿದ್ದಾರೆ. ಬಾಬರ್ ನೇತೃತ್ವದ ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 300 ರನ್ ಗಡಿ ತಲುಪಲು ವಿಫಲವಾಗಿದೆ. 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವು 182 ರನ್‌ಗಳ ಅಲ್ಪ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ನ್ಯೂಜಿಲೆಂಡ್ ಪಂದ್ಯವನ್ನು 79 ರನ್‌ಗಳಿಂದ ಗೆದ್ದಿತು.
“ಪಾಕಿಸ್ತಾನವು ಬಾಬರ್ ಅಜಮ್ ಅವರಿಂದ ಟಿ20 ನಾಯಕತ್ವವನ್ನು ಕಿತ್ತುಕೊಂಡರೆ, ಅದನ್ನು ಬೇರೆ ಯಾರಿಗೆ ನೀಡಬೇಕೆಂದು ಯೋಚಿಸಬೇಕು. ನಾವು ಏಕದಿನಗಳಲ್ಲಿ ಏನಾದರೂ ದೊಡ್ಡ ಸ್ಕೋರ್ ಮಾಡಿದ್ದೇವೆಯೇ? ಯಾರಾದರೂ ದ್ವಿಶತಕ ಗಳಿಸಿದ್ದೀರಾ? ಯಾವುದಾದರೂ ಪ್ರಬಲ ಪ್ರದರ್ಶನವಿದೆಯೇ? ಇಲ್ಲ. ಇದೆಲ್ಲವನ್ನೂ ನಾವು ಅರಿತುಕೊಳ್ಳಬೇಕು. ತಮ್ಮ ದೇಶದ ಪರಿಸ್ಥಿತಿಗಳನ್ನು ಸದುಪಯೋಗಪಡಿಸಿಕೊಳ್ಳುವ ಭಾರತದಂತಹ ಇತರ ದೇಶಗಳಿಂದ ನಮ್ಮ ಆಟಗಾರರು ಕಲಿಯಬೇಕು. ಆದರೆ, ಇಲ್ಲಿ ನಾವು ನಮ್ಮ ನೆಲದಲ್ಲೇ ಆಡಲು ಹೆದರುತ್ತೇವೆ,” ಎಂದು ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ತಮ್ಮ ತವರಿನ ಪರಿಸ್ಥಿತಿಗಳನ್ನು ಉತ್ತಮವಾಗಿ ಬಳಸಿಕೊಂಡ ಟೀಮ್ ಇಂಡಿಯಾಕ್ಕೆ ಕನೇರಿಯಾ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದೇ ವೇಳೆ ತವರಿನಲ್ಲಿ ಉತ್ತಮ ಫಲಿತಾಂಶ ತರದೇ ಇರುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಈಗ ಭಾರತವು ತಮ್ಮ ಮೂರನೇ ಏಕದಿನ ಪಂದ್ಯದಲ್ಲಿ ತಮ್ಮ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ಹೊಸ ಆಟಗಾರರಿಗೆ ಅವಕಾಶ ನೀಡಲು ಸಾಧ್ಯವಿದೆ. ಆದರೆ ಪಾಕಿಸ್ತಾನದಲ್ಲಿ ನೀವು ನಿಮ್ಮ ಬಗ್ಗೆ ಯೋಚಿಸುವುದೇ ಆಯ್ತು. ಬಾಬರ್ ಅಜಮ್ ತಮ್ಮ ಖಾತೆಗೆ 50ರಿಂದ 60 ರನ್ ಗಳಿಸುವುದನ್ನು ಮುಂದುವರೆಸಿದ್ದಾರೆ. ಆದರೆ ಇದರಿಂದ ತಂಡಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಪಾಕಿಸ್ತಾನ ಸೋಲುತ್ತಲೇ ಇದೆ,” ಎಂದು ಕನೇರಿಯಾ ಹೇಳಿದ್ದಾರೆ.
Danish Kaneria Suggestion to Pakistan to learn from Countries like India.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am