ಶತಕದ ಬರ ಕೊನೆಗೊಳಿಸಿದ ರೋಹಿತ್​, ಆಸೀಸ್​ ವಿರುದ್ಧ ಹಿಟ್​ಮ್ಯಾನ್​ ಭರ್ಜರಿ ಸೆಂಚುರಿ

10-02-23 01:28 pm       Source: news18   ಕ್ರೀಡೆ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಕೆಲ ದಿನಗಳ ಶತಕದ ಬರವನ್ನು ಕೊನೆಗೊಳಿಸಿದ್ದಾರೆ.

ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs AUS) ಅದ್ಭುತ ಶತಕ ಬಾರಿಸುವ ಮೂಲಕ ಭಾರತ ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ನೆರವಾಗಿದ್ದಾರೆ. ರೋಹಿತ್ ನಾಯಕನಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡುತ್ತಿದ್ದು, ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನದ 9ನೇ ಶತಕ ಸಿಡಿಸಿದ್ದಾರೆ. ಸುದೀರ್ಘ ಅವಧಿಯ ಬಳಿಕ ರೋಹಿತ್‌ ಶತಕ ಸಿಡಿಸಿದ್ದಾರೆ.

ರೋಹಿತ್ ಈ ಹಿಂದೆ 2021ರ ಸೆಪ್ಟೆಂಬರ್‌ನಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಶತಕ ದಾಖಲಿಸಿದ್ದರು. ರೋಹಿತ್ 171 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ತಮ್ಮ ಶತಕದಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇನ್ನು, ರೋಹಿತ್ ಮೊದಲ ವಿಕೆಟ್‌ಗೆ ಕೆಎಲ್ ರಾಹುಲ್ ಜೊತೆ 76 ರನ್ ಜೊತೆಯಾಟ ನಡೆಸಿದರು. ಬಳಿಕ ಆರ್ ಅಶ್ವಿನ್ ಜೊತೆ ಎರಡನೇ ವಿಕೆಟ್ ಗೆ 42 ರನ್ ಸೇರಿಸಿದರು.

 ರೋಹಿತ್ ನಾಯಕನಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡುತ್ತಿದ್ದು, ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನದ 9ನೇ ಶತಕ ಸಿಡಿಸಿದ್ದಾರೆ. ಸುದೀರ್ಘ ಅವಧಿಯ ಬಳಿಕ ರೋಹಿತ್‌ ಶತಕ ಸಿಡಿಸಿದ್ದಾರೆ.

 ರೋಹಿತ್ ಈ ಹಿಂದೆ 2021ರ ಸೆಪ್ಟೆಂಬರ್‌ನಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಶತಕ ದಾಖಲಿಸಿದ್ದರು. ರೋಹಿತ್ 171 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ತಮ್ಮ ಶತಕದಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.

ಕೆಎಲ್ ರಾಹುಲ್ 71 ಎಸೆತಗಳಲ್ಲಿ 20 ರನ್ ಗಳಿಸಿದರೆ, ಆರ್ ಅಶ್ವಿನ್ 23 ರನ್ ಗಳಿಸಿ ಔಟಾದರು. ಚೇತೇಶ್ವರ ಪೂಜಾರ ಸಹ ಕೇವಲ 7 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ವಿರಾಟ್ ಕೊಹ್ಲಿ ಕೂಡ ನಿರಾಸೆ ಮೂಡಿಸಿದ್ದಾರೆ. ಕೊಹ್ಲಿ 26 ಎಸೆತಗಳಲ್ಲಿ 12 ರನ್ ಕೊಡುಗೆ ನೀಡಿದರು. ರೋಹಿತ್ ಶರ್ಮಾ ಟೆಸ್ಟ್ ಮಾದರಿಯಲ್ಲಿ ಕಳೇದ ಕೆಲ ವರ್ಷಗಳಿಂದ ಶತಕ ಗಳಿಸಲು ಪರದಾಡುತ್ತಿದ್ದರು. ಹೀಗಾಗಿ ಆಸೀಸ್​ ವಿರುದ್ಧದ ಸರಣಿಯಲ್ಲಿ ಅವರ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟಿದ್ದರು. ಅದರಂತೆ ಇಂದು ಭರ್ಜರಿ ಶತಕ ಸಿಡಿಸಿ ಮಿಂಚಿದರು.

 ಇನ್ನು, ರೋಹಿತ್ ಮೊದಲ ವಿಕೆಟ್‌ಗೆ ಕೆಎಲ್ ರಾಹುಲ್ ಜೊತೆ 76 ರನ್ ಜೊತೆಯಾಟ ನಡೆಸಿದರು. ಬಳಿಕ ಆರ್ ಅಶ್ವಿನ್ ಜೊತೆ ಎರಡನೇ ವಿಕೆಟ್ ಗೆ 42 ರನ್ ಸೇರಿಸಿದರು.

 ,[object Object], ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್​.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್​.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

IND vs AUS 1st 2nd Day Rohit Sharma hits 9th Test Century against Australia Nagpur Test.