ಬ್ರೇಕಿಂಗ್ ನ್ಯೂಸ್
11-02-23 01:38 pm Source: news18 ಕ್ರೀಡೆ
ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಮೂರನೇ ದಿನದಾಟ ವೇಳೆಗೆ ಭಾರತ 400 ರನ್ಗೆ ಆಲ್ಔಟ್ ಆಗಿದೆ. ಮೇಲ್ನೋಟಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದಂತಿದೆ.
ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿ 144 ರನ್ಗಳ ಮುನ್ನಡೆಯಲ್ಲಿತ್ತು. ರೋಹಿತ್ ಶರ್ಮಾ (Rohit Sharma) ಶತಕ ತಂಡದ ಮೊತ್ತ ಹೆಚ್ಚಲು ಸಹಾಯ ಮಾಡಿತ್ತು ಆದರೆ, ಇದಕ್ಕೂ ಮುನ್ನ ಹಿಟ್ಮ್ಯಾನ್ ಔಟ್ ಆಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ (Virat Kohli). ಇದೀಗ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಸಾರಿ ಕೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
48ನೇ ಓವರ್ನ ನೇಥನ್ ಲ್ಯಾನ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್ ಸ್ಟ್ರೈಕರ್ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಒಂದು ರನ್ ಕಲೆಹಾಕಲೂ ಅಲ್ಲಿ ಸಮಯವಿರಲಿಲ್ಲ. ಅತ್ತ ಕೊಹ್ಲಿ ಮಾತಿನಂತೆ ರೋಹಿತ್ ಅರ್ಧದ ವರೆಗೆ ಓಡಿ ಬಂದರು. ಚೆಂಡು ಅಲ್ಲೆ ಸರ್ಕಲ್ನಲ್ಲಿ ಇದ್ದಿರುವುದನ್ನು ಗಮನಿಸಿದ ಕೊಹ್ಲಿ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿ ನೋ ಎಂದು ಕಿರುಚಿದರು.
ವಿಕೆಟ್ ಬಿಟ್ಟು ರನ್ಗೆಂದು ಅರ್ಧ ದಾರಿಯ ವರೆಗೆ ಬಂದಿದ್ದ ರೋಹಿತ್ ಕೂಡಲೇ ಹಿಂತಿರುಗಿ ನಾನ್ ಸ್ಟ್ರೈಕರ್ ಕಡೆ ತಿರುಗಿ ಓಡಿದರು. ರೋಹಿತ್ ಶರ್ಮಾ ಡೈವ್ ಹೊಡೆದು ಸ್ಕ್ರೀಜ್ ಮುಟ್ಟಿದರು. ಕೊಹ್ಲಿ ತಕ್ಷಣವೇ ರೋಹಿತ್ ಬಳಿ ಕೈಸನ್ನೆ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ. (ಸಾಂದರ್ಬಿಕ ಚಿತ್ರ)
Cricket india vs Australia Virat Kohli says Sorry after Mixup with Rohit Sharma.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm