ಆಸ್ಟ್ರೇಲಿಯಾ ಆಲೌಟ್​, ಟೀಂ ಇಂಡಿಯಾ ಭರ್ಜರಿ ಬೌಲಿಂಗ್​ ದಾಳಿ

02-03-23 01:46 pm       Source: news18   ಕ್ರೀಡೆ

ಇಂದೋರ್ ಟೆಸ್ಟ್‌ನ ಎರಡನೇ ದಿನದಂದು ಭಾರತ (IND vs AUS) ಅದ್ಭುತ ಪುನರಾಗಮನವನ್ನು ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು 197 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಮತ್ತೆ ಭಾರತ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಉಮೇಶ್ ಯಾದವ್ (Umesh Yadav) ಮತ್ತು ಆರ್.

ಇನ್ನು, ಎರಡನೇ ದಿನದ ಊಟದ ವಿರಾಮದ ವೇಳೆಗೆ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ. ಶುಭಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಕ್ರೀಸ್‌ನಲ್ಲಿದ್ದಾರೆ. 

ಟೀಂ ಇಂಡಿಯಾ ಭರ್ಜರಿ ಕಂಬ್ಯಾಕ್​:

ಇನ್ನು, ಭಾರತ ತಂಡ 3ನೇ ಟೆಸ್ಟ್​​ನ 2ನೇ ದಿನದಾಟದ ಆರಂಭದಲ್ಲಿಯೇ ಭರ್ಜರಿ ಕಂಬ್ಯಾಕ್​ ಮಾಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 197 ರನ್​ಗಳಿಗೆ ಆಲೌಟ್​ ಆಗುವ ಮೂಲಕ 88 ರನ್​ಗಳ ಮುನ್ನಡೆ ಸಾಧಿಸಿದೆ. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್​ ಮತ್ತು ಉಮೇಶ್ ಯಾವದ್​ ಹಾಗೂ ರವಿಚಂದ್ರನ್​ ಅಶ್ವೀನ್​ ತಲಾ 3 ವಿಕೆಟ್​ ಪಡೆದರು.

India vs Aus, 3rd Test: Australia all out for 197, lead by 88 runs | Deccan  Herald

ಇನ್ನು, 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿತು. ಆದರೆ, ಭಾರತೀಯ ಬೌಲರ್​ಗಳ ದಾಳಿಗೆ ತತ್ತರಿಸಿದ ಆಸೀಸ್​ ಭೋಜನ ವಿರಾಮದ ವೇಳೆಗೆ 197 ರನ್​ಗಳಿಗೆ ಆಲೌಟ್​ ಆಗುವ ಮೂಲಕ 88 ರನ್​ಗಳ ಮುನ್ನಡೆ ಸಾಧಿಸಿತು. ಆಸೀಸ್​ ಪರ ಟ್ರಾವಿಸ್ ಹೆಡ್ 9 ರನ್, ಉಸ್ಮಾನ್ ಖವಾಜಾ 60 ರನ್, ಮಾರ್ನಸ್ ಲ್ಯಾಬುಸ್ಚಾಗ್ನೆ 31 ರನ್, ಸ್ಟೀವ್ ಸ್ಮಿತ್ 26 ರನ್, ಪೀಟರ್ ಹ್ಯಾಂಡ್ಸ್‌ಕಾಂಬ್ 19 ರನ್, ಕ್ಯಾಮೆರಾನ್ ಗ್ರೀನ್ 21 ರನ್, ಅಲೆಕ್ಸ್ ಕ್ಯಾರಿ 3 ರನ್, ಮಿಚೆಲ್ ಸ್ಟಾರ್ಕ್ 1 ರನ್, ಟಾಡ್ ಮರ್ಫಿ 0 ರನ್, ನಾಥನ್ ಲಿಯಾನ್ 5 ರನ್, ಮ್ಯಾಥ್ಯೂ ಕುನ್ಹೆಮನ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

IND vs AUS, 3rd Test: Indian Bundle Out Australia for 197 Before Lunch on  Day 2

ಟೀಂ ಇಂಡಿಯಾ ಪ್ಲೇಯಿಂಗ್​ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.

ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುನ್ಹೆಮನ್.

IND vs AUS 3rd test Australia are all out for 197 runs.