ಜಡೇಜಾಗೆ ಸಿಕ್ತು ಬಂಪರ್, ರಾಹುಲ್​ಗೆ ಹಿಂಬಡ್ತಿ! ಕಾಂಟ್ರ್ಯಾಕ್ಟ್​ನಿಂದಲೇ ಹೊರಬಿದ್ದ ಸ್ಟಾರ್​ ಕ್ರಿಕೆಟಿಗರು

28-03-23 02:22 pm       Source: news18   ಕ್ರೀಡೆ

ಈಗಂತೂ ಕ್ರಿಕೆಟ್ ಆಟಗಾರರು (Cricket Players) ಗಳಿಸುವಷ್ಟು ಹಣವನ್ನು ಬೇರೆ ಯಾವ ಕ್ರೀಡೆಯ (Sports) ಆಟಗಾರರು ಸಂಪಾದಿಸುತ್ತಿಲ್ಲ ಎಂದು ಭಾವಿಸಿದರೆ ಬಹುಶಃ ತಪ್ಪಾಗುವುದಿಲ್ಲ ನೋಡಿ.

ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎಂದರೆ ಬಿಸಿಸಿಐ ಮುಂಬರುವ 2023-24ರ ಋತುವಿಗಾಗಿ ವಾರ್ಷಿಕ ಆಟಗಾರರ ಒಪ್ಪಂದವನ್ನು ಭಾನುವಾರ ಪ್ರಕಟಿಸಿದ್ದು, ಟೀಮ್ ಇಂಡಿಯಾದ ಕೇಂದ್ರ ಗುತ್ತಿಗೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ. 

Ravindra Jadeja Promoted, Kl Rahul Demoted As BCCI Announce Central Contract  For 2022-23 Season

ರವೀಂದ್ರ ಜಡೇಜಾಗೆ ಸಿಕ್ತು ಬಂಪರ್ 

ವಿಶ್ವದ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜಾ ಮತ್ತು ಉದಯೋನ್ಮುಖ ಪ್ರತಿಭೆ ಅಕ್ಷರ್ ಪಟೇಲ್ ಅವರಿಗೆ ಈ ಬಾರಿಯ  ಗುತ್ತಿಗೆಯಲ್ಲಿ ಬಿಸಿಸಿಐ ಬಡ್ತಿ ನೀಡಿದೆ. ಜಡೇಜಾ ಎ ನಿಂದ ಎ+ ಪಡೆದರೆ, ಪಟೇಲ್​  ಸಿ  ಗ್ರೇಡ್​ನಿಂದ ಎ ಗ್ರೇಡ್​ಗೆ ಬಡ್ತಿ ಪಡೆದುಕೊಂಡಿದ್ದಾರೆ. ಟಿ20 ತಂಡದ ಭವಿಷ್ಯದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಬಿ ಗ್ರೇಡ್​ನಿಂದ ಎ ಗ್ರೇಡ್​ಗೆ ಪ್ರಮೋಟ್ ಆಗಿದ್ದಾರೆ. ಒಟ್ಟು 26 ಕ್ರಿಕೆಟಿಗರು ಬಿಸಿಸಿಐ  ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.

I was out for 2 months but team hasn't forgotten what I have done for 2  years: KL Rahul | Sports News,The Indian Express

ಕೆಎಲ್​ ರಾಹುಲ್​​ಗೆ ಶಾಕ್ 

ಭಾರತ ತಂಡದ ಉಪನಾಯಕ ಕೆಎಲ್​ ರಾಹುಲ್​ ಇತ್ತೀಚಿಗೆ ಮೂರು ಮಾದರಿಯಲ್ಲೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಈ ಕಾರಣದಿಂದ ಅವರೂ ಎ ಗ್ರೇಡ್​ನಿಂದ ಬಿ ಗ್ರೇಡ್​ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಅವರು ಕಳೆದ ವರ್ಷದ ಒಪ್ಪಂದದಲ್ಲಿ ಎ ಗ್ರೇಡ್​ನಲ್ಲಿದ್ದರು.

BCCI announce annual player retainership 2022-23 | Cricket News

ಗುತ್ತಿಗೆ ಆಧಾರದಲ್ಲಿ ಆಟಗಾರರು ಪಡೆಯುವ ಹಣವೆಷ್ಟು?

ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯನ್ನು ಪ್ರಮುಖವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ.    ಎ+  ಕೆಟಗರಿಯಲ್ಲಿ ಬರುವ ಕ್ರಿಕೆಟಿಗರಿಗೆ 7 ಕೋಟಿ ರೂಪಾಯಿ,  ಎ ಕೆಟಗರಿಯಲ್ಲಿ ಬರುವವರಿಗೆ 5 ಕೋಟಿ ರೂಪಾಯಿ,  ಬಿ ಕೆಟಗರಿಯವರಿಗೆ 3 ಕೋಟಿ ರೂಪಾಯಿ ಮತ್ತು  ಸಿ ಕೆಟಗರಿಯ ಆಟಗಾರರಿಗೆ 1 ಕೋಟಿ ರೂಪಾಯಿ ಸಿಗಲಿದೆ.

ಎಲೈಟ್ ಎ+ ವಿಭಾಗದಲ್ಲಿ ಏಕದಿನ, ಟೆಸ್ಟ್​ ಹಾಗೂ ಟಿ20 ಮೂರು ಸ್ವರೂಪಗಳಲ್ಲಿಯೂ ಖಾಯಂ ಸ್ಥಾನ ಗಿಟ್ಟಿಸುವ ಆಟಗಾರರಿರುತ್ತಾರೆ.   ಎ  ಕೆಟಗರಿಯಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆಯುವ ಕ್ರಿಕೆಟಿಗರನ್ನು ಒಳಗೊಂಡಿದೆ.

ಸೀಮಿತ ಓವರ್​ಗಳ ತಂಡಕ್ಕೆ ಅಥವಾ ಕೇವಲ ಟೆಸ್ಟ್​ ಪಂದ್ಯಗಳಿಗೆ ಪರಿಗಣಿಸಲಾದ ಆಟಗಾರರು  ಬಿ  ಗುಂಪಿನಲ್ಲಿರುತ್ತಾರೆ.   ಇನ್ನೂ  ಸಿ ಗುಂಪಿನಲ್ಲಿರುವ ಆಟಗಾರರನ್ನು ಸಾಮಾನ್ಯವಾಗಿ ಮೂರು ಸ್ವರೂಪಗಳಲ್ಲಿ ಒಂದಕ್ಕೆ ನಿಮಿಯತವಾಗಿ ಪರಿಗಣಿಸಲಾಗುತ್ತದೆ.

ಎ+ನಲ್ಲಿ ಇರುವ ಆಟಗಾರರು

ಆಲ್​ರೌಂಡರ್​  ರವೀಂದ್ರ ಜಡೇಜಾ ಅವರನ್ನು ಗ್ರೇಡ್ ಎ ಯಿಂದ ಗ್ರೇಡ್ ಎ+ ಗೆ ಬಡ್ತಿ ನೀಡಲಾಗಿದ್ದು, ಅಗ್ರ ವರ್ಗದ ಆಟಗಾರರ ಸಂಖ್ಯೆ ಈಗ ಮೂರರಿಂದ ನಾಲ್ಕಕ್ಕೆ ಏರಿಸಲಾಗಿದೆ. ಈ ಮೊದಲು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ  ಈ ವಿಭಾಗದಲ್ಲಿ ಇದ್ದರು. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರನ್ನು ಕ್ರಮವಾಗಿ ಗ್ರೇಡ್ ಬಿ ಮತ್ತು ಗ್ರೇಡ್ ಸಿ ಯಿಂದ ಎ ಗ್ರೇಡ್​ಗೆ ಬಡ್ತಿ ನೀಡಲಾಗಿದೆ.

ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಸಿ ಗ್ರೇಡ್​ನಿಂದ ಬಿ ವಿಭಾಗಕ್ಕೆ ಬಡ್ತಿ ಪಡೆದಿದ್ದಾರೆ. ಆದರೆ ಶಾರ್ದೂಲ್ ಠಾಕೂರ್​ ಬಿ ಇಂದ ಸಿ ಗ್ರೇಡ್​ ಹಿಂಬಡ್ತಿ ಪಡೆದಿದ್ದಾರೆ.  ಕಳೆದ ವರ್ಷ ಗುತ್ತಿಗೆಯಿಂದ ಹೊರ ಬಿದ್ದಿದ್ದ ಸ್ಪಿನ್​ ಬೌಲರ್​ ಕುಲ್ದೀಪ್ ಯಾದವ್​ ಈ ಬಾರಿ ಕೇಂದ್ರ ಗುತ್ತಿಗೆಗೆ ಮರಳಿದ್ದು, ಸಿ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್ ಕೆಎಸ್​ ಭರತ್​ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಪಡೆದ ಏಕೈಕ ಆಟಗಾರನಾಗಿದ್ದಾರೆ.

ಗುತ್ತಿಗೆಯಿಂದ ಹೊರ ಬಿದ್ದ ಆಟಗಾರರು

ಆಶ್ಚರ್ಯಕರ ಸಂಗತಿ ಎಂದರೆ ಹಿರಿಯ ಕ್ರಿಕೆಟಿಗರಾದ​ ಭುವನೇಶ್ವರ್ ಕುಮಾರ್,   ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ, ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ ಮತ್ತು ದೀಪಕ್ ಚಹರ್ 2023-24ರ ಬಿಸಿಸಿಐ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ. ಇಶಾಂತ್ ಮತ್ತು ರಹಾನೆ ಕಳೆದ ಋತುವಿನಲ್ಲಿ ‘ಬಿ’ ಕೆಟಗರಿಯಲ್ಲಿದ್ದರು, ಉಳಿದವರು ‘ಸಿ’ ಕೆಟಗರಿಯಲ್ಲಿದ್ದರು.

Cricket bcci announces central contract ravindra jadeja promoted kl rahul demote full details here.