ಇಂದು ಚೆನ್ನೈ-ಗುಜರಾತ್​ ಪಂದ್ಯ; ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11, ಹೆಡ್​ ಟು ಹೆಡ್​

31-03-23 01:18 pm       Source: news18   ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ (IPl2023) ವೇದಿಕೆ ಸಿದ್ಧವಾಗಿದೆ. ಇಂದಿನಿಂದ ಐಪಿಎಲ್ 16ನೇ ಸೀಸನ್ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಂಡವನ್ನು ಎದುರಿಸಲಿದೆ.

ಈ ವರ್ಷ 52 ದಿನಗಳ ಅವಧಿಯಲ್ಲಿ 12 ಸ್ಥಳಗಳಲ್ಲಿ ಒಟ್ಟು 70 ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಐಪಿಎಲ್ 2023 ರ ವೇಳಾಪಟ್ಟಿಯಂತೆ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಕ್ರಮವಾಗಿ 7 ಹೋಮ್ ಪಂದ್ಯಗಳನ್ನು ಮತ್ತು 7 ಬೇರೆಡೆ ಪಂದ್ಯಗಳನ್ನು ಆಡುತ್ತವೆ.

ಐಪಿಎಲ್ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಗುಜರಾತ್​ ಟೈಟನ್ಸ್ ತಂಡಗಳು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, 7 ಗಂಟೆಗೆ ಟಾಸ್​ ಆಗಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾದಲ್ಲಿ ಡಿಜಿಟಲ್‌ನಲ್ಲಿ ನೇರ ಪ್ರಸಾರ ಆಗಲಿದೆ.

ಪಿಚ್​ ರಿಪೋರ್ಟ್​:

ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಚೆಂಡು ಚೆನ್ನಾಗಿ ಬ್ಯಾಟ್‌ಗೆ ಬರುತ್ತದೆ. ಬ್ಯಾಟರ್‌ಗಳು ತಮ್ಮ ಇನ್ನಿಂಗ್ಸ್‌ನ ಆರಂಭದಿಂದಲೇ ತಮ್ಮ ಸಾಮರ್ಥ್ಯ ತೋರಿಸಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದ ನಾಯಕ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಅಹಮದಾಬಾದ್​ನಲ್ಲಿ ತಾಪಮಾನವು 22 ಮತ್ತು 33 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.

GT vs CSK Dream11 Prediction, IPL 2023 Fantasy Cricket Tips: Dream11 Team, Weather  Report, Pitch Report, Injury Updates and Team News, Gujarat Titans vs  Chennai Super Kings, Match 1

CSK vs GT ಹೆಡ್ ಟು ಹೆಡ್:

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಎರಡನೇ ಯಶಸ್ವಿ ಫ್ರಾಂಚೈಸಿ ಆಗಿದೆ. ಗುಜರಾತ್ ಟೈಟಾನ್ಸ್ ಕಳೆದ ವರ್ಷ ಪಾದಾರ್ಪಣೆ ಮಾಡಿದರೂ ಚೊಚ್ಚಲ ಆವೃತ್ತಿಯಲ್ಲಿಯೇ ಪ್ರಶಸ್ತಿ ಜಯಸಿತು. ಕಳೆದ ಋತುವಿನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡೂ ಬಾರಿಯೂ ಚೆನ್ನೈ ತಂಡವನ್ನು ಗುಜರಾತ್​ ವಿರುದ್ಧ ಸೋತಿತ್ತು. ಜಿಟಿ ಮೊದಲ ಪಂದ್ಯವನ್ನು ಮೂರು ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ 14 ಪಂದ್ಯ ಆಡಿದ್ದು, 10ರಲ್ಲಿ ಗೆಲುವು ಸಾಧಿಸಿತ್ತು. CSK 14ರಲ್ಲಿ 4 ಪಂದ್ಯ ಗೆದ್ದಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ 11: ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ದೀಪಕ್ ಚಾಹರ್, ಡ್ವೇನ್ ಪ್ರಿಟೋರಿಯಸ್, ಸಿಮ್ರಾನ್ ಜೀತ್

ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್​ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಸಹಾ, ಕೇನ್ ವಿಲಿಯಮ್ಸನ್, ವೇಡ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಯಶ್ ದಯಾಳ್, ಜೋಸೆಫ್, ಶಮಿ.

csk vs gt ipl 2023 playing 11 pitch report and weather forecast.