ಮೊದಲ ಪಂದ್ಯದ ಗೆಲುವಿನ ಬಳಿಕ ಆರ್​ಸಿಬಿಗೆ ಬಿಗ್​ ಶಾಕ್​, ಅಭಿಮಾನಿಗಳಿಗೆ ಹೆಚ್ಚಾಯ್ತು ಟೆನ್ಶನ್​!

03-04-23 01:14 pm       Source: news18   ಕ್ರೀಡೆ

ಇದೀಗ RCB ಪಾಲಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ್ದ ಈ ಆಟಗಾರ ಐಪಿಎಲ್​ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ತಂಡಗಳು ಸೆಣಸಾಡಿದವು. ಐಪಿಎಲ್​ 16ನೇ ಆವೃತ್ತಿಯ ಮೊದಲ ಪಂದ್ಯವನ್ನೇ ಬೆಂಗಳೂರು ತಂಡ ಗೆದ್ದು ಬೀಗಿದೆ. ಟಾಸ್ ಗೆದ್ದ ಫೀಲ್ಡಿಂಗ್ ಮಾಡಿದ RCB, ಭರ್ಜರಿ ಬೌಲಿಂಗ್​ ಮಾಡಿತು. ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿತು. ಈ ಟಾರ್ಗೆಟ್​ ಬೆನ್ನಟ್ಟಿದ ಆರ್​ಸಿಬಿ ತಂಡ 16.2 ಓವರ್​ಗೆ 2 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸುವ ಮೂಲಕ ಬರೋಬ್ಬರಿ 8 ವಿಕೆಟ್​ಗಳ ಜಯ ದಾಖಲಿಸಿತು.

ಇದೀಗ RCB ಪಾಲಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ್ದ ಈ ಆಟಗಾರ ಐಪಿಎಲ್​ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ವೇಗದ ಬೌಲರ್ ರೀಸ್ ಟೋಪ್ಲೆ ಗಾಯದ ಕಾರಣ ಇಡೀ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಮುಂಬರುವ ಪಂದ್ಯಗಳಲ್ಲಿ ಅವರು ಆಡೋದು ಡೌಟ್​ ಅಂತ ಹೇಳಲಾಗುತ್ತಿದೆ.

 ಫೀಲ್ಡಿಂಗ್ ವೇಳೆ ಟೋಪ್ಲಿ ಗಾಯಗೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಭುಜದ ಗಾಯದಿಂದ ಅವರು ಇನ್ನು ಮುಂದೆ ಪಂದ್ಯದ ಭಾಗವಾಗಿರಲು ಸಾಧ್ಯವಾಗುವುದಿಲ್ಲ.

 ಹೀಗಿರುವಾಗ ಈ ಪಂದ್ಯದ ದೃಷ್ಟಿಯಿಂದ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಟೋಪ್ಲಿ 2 ಓವರ್ ಬೌಲ್ ಮಾಡಿ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ಫೀಲ್ಡಿಂಗ್ ವೇಳೆ ಟೋಪ್ಲಿ ಗಾಯಗೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಭುಜದ ಗಾಯದಿಂದ ಅವರು ಇನ್ನು ಮುಂದೆ ಪಂದ್ಯದ ಭಾಗವಾಗಿರಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಈ ಪಂದ್ಯದ ದೃಷ್ಟಿಯಿಂದ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಟೋಪ್ಲಿ 2 ಓವರ್ ಬೌಲ್ ಮಾಡಿ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು.

 ಒಂದು ವೇಳೆ ಈ ಬೌಲರ್​ ಏನಾದ್ರೂ ಮುಂದಿನ ಪಂದ್ಯಗಳಿಗೆ ಅಲಭ್ಯರಾದ್ರೆ, ಆರ್​ಸಿಬಿ ಬೌಲಿಂಗ್​ಗೆ ದೊಡ್ಡ ಹೊಡೆತ ಬೀಳುತ್ತೆ ಅಂದ ಕ್ರಿಕೆಟ್​ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

 ಇನ್ನೂ ಮೊದಲ ಪಂದ್ಯದಲ್ಲಿ ಆರ್​ಸಿಬಿ ಅದ್ಭುತ ಪ್ರರ್ದಶನ ನೀಡಿದ್ದು, ಈ ಸಲ ಕಪ್​ ಕನ್ಫರ್ಮ್​ ನಮ್ದೇ ಅಂತಿದ್ದಾರೆ ಅಭಿಮಾನಿಗಳು. ಈ ಬಾರಿ ತಂಡ ಒಳ್ಳೆ ಕಮ್​ಬ್ಯಾಕ್ ಮಾಡಿದ್ದಾರೆ. ಇದು ಹೀಗೆ ಮುಂದುವರೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಒಂದು ವೇಳೆ ಈ ಬೌಲರ್​ ಏನಾದ್ರೂ ಮುಂದಿನ ಪಂದ್ಯಗಳಿಗೆ ಅಲಭ್ಯರಾದ್ರೆ, ಆರ್​ಸಿಬಿ ಬೌಲಿಂಗ್​ಗೆ ದೊಡ್ಡ ಹೊಡೆತ ಬೀಳುತ್ತೆ ಅಂದ ಕ್ರಿಕೆಟ್​ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಇನ್ನೂ ಮೊದಲ ಪಂದ್ಯದಲ್ಲಿ ಆರ್​ಸಿಬಿ ಅದ್ಭುತ ಪ್ರರ್ದಶನ ನೀಡಿದ್ದು, ಈ ಸಲ ಕಪ್​ ಕನ್ಫರ್ಮ್​ ನಮ್ದೇ ಅಂತಿದ್ದಾರೆ ಅಭಿಮಾನಿಗಳು. ಈ ಬಾರಿ ತಂಡ ಒಳ್ಳೆ ಕಮ್​ಬ್ಯಾಕ್ ಮಾಡಿದ್ದಾರೆ. ಇದು ಹೀಗೆ ಮುಂದುವರೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. 

IPL 2023 reece topley suffers shoulder injury out of the tournament.