ಗಾಯಕ್ವಾಡ್ ಅಬ್ಬರ, ಮೊಯೀನ್ ಮೊನಚಿನ ದಾಳಿ! ಲಕ್ನೋ ವಿರುದ್ಧ ಸಿಎಸ್‌ಕೆಗೆ 12 ರನ್​ಗಳ ರೋಚಕ ಜಯ

04-04-23 01:42 pm       Source: news18   ಕ್ರೀಡೆ

ಐಪಿಎಲ್ (IPL) ಉದ್ಘಾಟನಾ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ( Lucknow Super Giants ) ವಿರುದ್ಧ ಆಲ್​ರೌಂಡ್​ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

218ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ನಾಯಕ ರಾಹುಲ್ ಮತ್ತು ಕೈಲ್ ಮೇಯರ್ಸ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಈ ಜೋಡಿ​ ಮೊದಲ ವಿಕೆಟ್​ 5.3 ಓವರ್​ಗಳಲ್ಲಿ 79 ರನ್​ ಜೊತೆಯಾಟ ನೀಡಿದರು. 22 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಸಿದ್ದ ಮೇಯರ್ಸ್ 53 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇವರು ಮೊದಲ ಪಂದ್ಯದಲ್ಲೂ 73 ರನ್​ಗಳಿಸಿದ್ದರು.

ಮೇಯರ್ಸ್ ವಿಕೆಟ್ ಬೀಳುತ್ತಿದ್ದಂತೆ  ಲಕ್ನೋ ದಿಢೀರ್ ಕುಸಿತ ಕಂಡಿತು. 3ನೇ ಕ್ರಮಾಂಕದಲ್ಲಿ ಬಂದ ದೀಪಕ್ ಹೂಡ ಕೇವಲ 2 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. 3 ಎಸೆತಗಳ ಅಂತರದಲ್ಲಿ ನಾಯಕ ಕೆಎಲ್ ರಾಹುಲ್(20) ಕೂಡ ಮೊಯೀನ್​ ಅಲಿಗೆ ವಿಕೆಟ್​ ಒಪ್ಪಿಸಿದರು. ಆಲ್​ರೌಂಡರ್ ಕೃನಾಲ್ ಪಾಂಡ್ಯ  9 ರನ್​ಗಳಿಸಿ ನಿರಾಸೆ ಮೂಡಿಸಿದರು.

CSK vs LSG: MS Dhoni's Chennai Super Kings secure maiden win of IPL 2023, beat  Lucknow by 12 runs | IPL 2023

ಗೆಲುವಿನ ಭರವಸೆ ಮೂಡಿಸಿದ್ದ ಪೂರನ್​

105ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದಿದ್ದ ನಿಕೋಲಸ್ ಪೂರನ್​  18 ಎಸೆತಗಳಲ್ಲಿ 32 ರನ್​ಗಳಿಸಿ ಲಕ್ನೋ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ತುಷಾರ್​ ದೇಶಪಾಂಡೆ ಬೌಲಿಂಗ್​ನಲ್ಲಿ ಸ್ಟೋಕ್ಸ್​ಗೆ ಕ್ಯಾಚ್​ ನೀಡಿ ಔಟಾದರು.  ಕೊನೆಯಲ್ಲಿ ಕನ್ನಡಿಗ ಕೆ. ಗೌತಮ್​ 11 ಎಸೆತಗಳಲ್ಲಿ 17, ಬದೋನಿ 18 ಎಸೆತಗಳಲ್ಲಿ 23 ಹಾಗೂ ಮಾರ್ಕ್​ವುಡ್​ 3 ಎಸೆತಗಳಲ್ಲಿ 10 ರನ್​ಗಳಿಸಿ ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದರಾದರೂ, ಇವರ ಆಟ ಕೇವಲ ಗೆಲುವಿನ ಅಂತರವನ್ನ ತಗ್ಗಿಸಲಷ್ಟೇ ಶಕ್ತವಾಯಿತು.

ಸಿಎಸ್​ಕೆ ಪರ ಮೊಯೀನ್ ಅಲಿ 4 ವಿಕೆಟ್ 26ಕ್ಕೆ 4, ತುಷಾರ್ ದೇಶಪಾಂಡೆ 45ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Chennai Super Kings vs Lucknow Super Giants IPL 2023 Highlights: CSK beat  LSG by 12 runs for first win - The Times of India

ಗಾಯಕ್ವಾಡ್​-ಕಾನ್ವೆ ಉತ್ತಮ ಆರಂಭ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಭರ್ಜರಿ  ಆರಂಭ ಒದಗಿಸಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 110 ರನ್‌ಗಳ ಬೃಹತ್​  ಜೊತೆಯಾಟ ನೀಡಿದರು. ಋತುರಾಜ್ ಗಾಯಕ್ವಾಡ್ 31 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 57 ರನ್ ಬಾರಿಸಿ ರವಿ ಬಿಷ್ಣೋಯಿ ಅವರಿಗೆ ವಿಕೆಟ್ ನೀಡಿದರು.

ಗಾಯಕ್ವಾಡ್​ ವಿಕೆಟ್​ ಒಪ್ಪಿಸಿದ 8 ರನ್​ಗಳ ಅಂತರದಲ್ಲಿ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 47 ರನ್ ಗಳಿಸಿದ್ದ ಡೆವೊನ್ ಕಾನ್ವೆ ಕೂಡ  ಔಟಾದರು. ನಂತರ ಬಂದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡಿ 16 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 27 ರನ್ ಬಾರಿಸಿದರೆ. ಮೊಯಿನ್ ಅಲಿ ಕೂಡ 13 ಎಸೆತಗಳಲ್ಲಿ 19 ರನ್ ಗಳಿಸಿದರು. ಆದರೆ ಸ್ಟಾರ್ ಬ್ಯಾಟರ್​ ಬೆನ್ ಸ್ಟೋಕ್ಸ್ 8 ಎಸೆತಗಳಲ್ಲಿ 8 ರನ್ ಗಳಿಸಿ ಇಂದಿನ ಪಂದ್ಯದಲ್ಲೂ ನಿರಾಸೆ ಮೂಡಿಸಿದರು.

ಕೊನೆಯಲ್ಲಿ ಆರ್ಭಟಿಸಿದ ಅಂಬಟಿ ರಾಯುಡು 14 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ ಅಜೇಯ 27 ರನ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ 3 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 12 ರನ್ ಗಳಿಸಿದರು. ರವೀಂದ್ರ ಜಡೇಜಾ 3 ರನ್ ಮತ್ತು ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿದರು.

IPL 2023 chennai super kings beat lucknow super giants by 12 runs.