ಬ್ರೇಕಿಂಗ್ ನ್ಯೂಸ್
11-04-23 12:26 pm Source: news18 ಕ್ರೀಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್‌ನ ಅಗ್ರ ತಂಡಗಳಲ್ಲಿ ಒಂದಾಗಿದೆ. ವಿರಾಟ್ ಕೊಹ್ಲಿ (VIrat Kohli) ಸೇರಿದಂತೆ ಅನೇಕ ದಿಗ್ಗಜ ಆಟಗಾರರು ಈ ತಂಡದ ಪರ ಆಡಿದ್ದಾರೆ. ಆದರೆ ವಿಚಿತ್ರವೆಂದರೆ ಆರ್‌ಸಿಬಿ ಒಮ್ಮೆಯೂ ಐಪಿಎಲ್ ಚಾಂಪಿಯನ್ ಆಗಿಲ್ಲ. 2009 ಮತ್ತು 2016ರ ಸೀಸನ್‌ಗಳಲ್ಲಿ ಫೈನಲ್ ತಲುಪಿದ್ದರೂ, ಅಂತಿಮ ಹಂತದಲ್ಲಿ ಎಡವಿತ್ತು. ‘ಈ ಸಲ ಕಪ್ ನಮ್ದೆ’ ಎಂದು ಪ್ರತಿ ವರ್ಷ ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿದ್ದಾರೆ.
ಐಪಿಎಲ್ 16ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡಗಲ್ಲಿ ಒಂದಾಗಿದ್ದು, ಅದಕ್ಕೆ ತಕ್ಕಂತೆ ಆಟವಾಡುತ್ತಿದೆ. ಇದುವರೆಗೂ ಕಪ್ ಗೆಲ್ಲದಿದ್ದರೂ ಆರ್‌ಸಿಬಿಗೆ ಅಪಾರ ಅಭಿಮಾನಿ ಬಳಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೆ ಮೈದಾನ ಕಿಕ್ಕಿರಿದು ತುಂಬಿರುತ್ತದೆ. ಇತ್ತೀಚೆಗೆ, ಅಭಿಮಾನಿಯೊಬ್ಬರ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೆಲವು ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡ ಟ್ರೋಫಿ ಗೆಲ್ಲುವವರೆಗೆ ಮದುವೆಯಾಗುವುದಿಲ್ಲ ಎಂಬ ಫಲಕಗಳೊಂದಿಗೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಹಲವರು ಮುಂದಿನ ಜನ್ಮದಲ್ಲಿ ಮದುವೆ ಆಗಬೇಕು ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಕಳೆದ ವರ್ಷವೂ ಆರ್‌ಸಿಬಿ ಕಪ್ ಗೆಲ್ಲುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಮಹಿಳಾ ಅಭಿಮಾನಿಯೊಬ್ಬರು ಮೈದಾನದಲ್ಲಿ ಪೋಸ್ಟರ್ ಪ್ರದರ್ಶಿಸಿದ್ದರು. ಆ ವೇಳೆ ಅದು ದೊಡ್ಡ ವೈರಲ್ ಆಗಿತ್ತು.
ಇತ್ತೀಚಿನವರೆಗೂ ವಿರಾಟ್ ಕೊಹ್ಲಿ 71ನೇ ಶತಕ ಸಿಡಿಸುವವರೆಗೂ ಮದುವೆಯಾಗುವುದಿಲ್ಲ ಎಂದು ಅಭಿಮಾನಿಯೊಬ್ಬರು ಪೋಸ್ಟರ್ ಪ್ರದರ್ಶಿಸಿದ್ದರು. ಈಗಲಾದರೂ ಆರ್‌ಸಿಬಿಗೆ ಐಪಿಎಲ್ ಪ್ರಶಸ್ತಿ ನೀಡಿ ಪರೋಕ್ಷವಾಗಿ ಕೆಲವರ ಮದುವೆಗೆ ಕಾರಣರಾಗುತ್ತಾರೋ ಅಥವಾ ಅವರ ಮದುವೆಯನ್ನು ಇನ್ನೂ ಕೆಲವು ವರ್ಷಗಳ ಕಾಲ ಮುಂದೂಡುತ್ತಾರೋ ಕಾದು ನೋಡಬೇಕಿದೆ.
RCB vs ISG match crazy fan poster goes viral on social media.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm