ಮೈದಾನದಲ್ಲಿಯೇ ​ಜಡೇಜಾ ಕಿರಿಕ್! ಕೂಲ್​ ಆಗಿ ಹ್ಯಾಂಡಲ್​ ಮಾಡಿದ ಧೋನಿ

22-04-23 01:40 pm       Source: news18   ಕ್ರೀಡೆ

ಹೈದರಾಬಾದ್​ ಪಂದ್ಯದಲ್ಲಿ ಚೆನ್ನೈ ಪ್ಲೇಯರ್​ ರವೀಂದ್ರ ಜಡೇಜಾ ಹಾಗೂ SRH ಬ್ಯಾಟರ್ ಕ್ಲಾಸೆನ್ ಪರಸ್ಪರ ವಾಗ್ವಾದ ನಡೆಸಿದ ಘಟನೆ ನಡೆದಿದೆ.

ಐಪಿಎಲ್ 2023ರ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಮುಖಾಮುಖಿ ಆದವು. ಈ ಪಂದ್ಯದಲ್ಲಿ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ ಚೆನ್ನೈ ತಂಡಕ್ಕೆ​ 135 ರನ್ ಟಾರ್ಗೆಟ್​ ನೀಡಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್​ಗಳಿಗೆ 3 ವಿಕೆಟ್ ನಷ್ಟಕ್ಕೆ 138 ರನ್​ ಗಳಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು. ಆದರೆ, ಹೈದರಾಬಾದ್​ ಪಂದ್ಯದಲ್ಲಿ ಚೆನ್ನೈ ಪ್ಲೇಯರ್​ ರವೀಂದ್ರ ಜಡೇಜಾ ಹಾಗೂ SRH ಬ್ಯಾಟರ್ ಕ್ಲಾಸೆನ್ ಪರಸ್ಪರ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಇಬ್ಬರು ಆಟಗಾರರ ಜಗಳವನ್ನು ಬಿಡಿಸಲು ಅಂತಿಮವಾಗಿ ಕೂಲ್ ಕ್ಯಾಪ್ಟನ್ ಧೋನಿ​ ಬರಬೇಕಾಯಿತು.

 ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ, 13ನೇ ಓವರ್​ ಬೌಲ್ ಮಾಡಿದ ಜಡೇಜಾಗೆ ವಿಕೆಟ್ ಪಡೆಯುವ ಅವಕಾಶವಿತ್ತು. ಓವರ್‌ನ ಮೊದಲ ಎಸೆತವನ್ನು ಮಯಾಂಕ್ ಅಗರ್ವಾಲ್ ನೆರ ಶಾಟ್ ಹೊಡೆದರು. ಬಾಲ್​ ನೇರವಾಗಿ ಜಡೇಜಾ ಕೈಸರುವುದರಲ್ಲಿತ್ತು.

 ಆದರೆ ನಾನ್-ಸ್ಟ್ರೈಕರ್​ನಲ್ಲಿ ನಿಂತಿದ್ದ ಹೈದರಾಬಾದ್​ ಆಟಗಾರ ಹೆನ್ರಿಚ್ ಕ್ಲಾಸೆನ್ ಇದಕ್ಕೆ ಅಡ್ಡಿಯಾದರು. ಇಲ್ಲಿ ಬಾಲ್​ ನಾನ್-ಸ್ಟ್ರೈಕರ್​ ತುದಿಯೇ ನೇರವಾಗಿ ಬಂದಿತ್ತು.ಇದನ್ನು ಜಡೇಜಾ ಕ್ಯಾಚ್ ಪಡೆಯಲು ಯತ್ನಿಸಿದರು. ಆದರೆ, ಕ್ಲಾಸೆನ್​ಗೆ ಡಿಕ್ಕಿ ಹೊಡೆದು ಜಡ್ಡು ಕ್ಯಾಚ್​ ಮಿಸ್​ ಮಾಡಿಕೊಂಡರು.

ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ, 13ನೇ ಓವರ್​ ಬೌಲ್ ಮಾಡಿದ ಜಡೇಜಾಗೆ ವಿಕೆಟ್ ಪಡೆಯುವ ಅವಕಾಶವಿತ್ತು. ಓವರ್‌ನ ಮೊದಲ ಎಸೆತವನ್ನು ಮಯಾಂಕ್ ಅಗರ್ವಾಲ್ ನೆರ ಶಾಟ್ ಹೊಡೆದರು. ಬಾಲ್​ ನೇರವಾಗಿ ಜಡೇಜಾ ಕೈಸರುವುದರಲ್ಲಿತ್ತು. ಆದರೆ ನಾನ್-ಸ್ಟ್ರೈಕರ್​ನಲ್ಲಿ ನಿಂತಿದ್ದ ಹೈದರಾಬಾದ್​ ಆಟಗಾರ ಹೆನ್ರಿಚ್ ಕ್ಲಾಸೆನ್ ಇದಕ್ಕೆ ಅಡ್ಡಿಯಾದರು. ಇಲ್ಲಿ ಬಾಲ್​ ನಾನ್-ಸ್ಟ್ರೈಕರ್​ ತುದಿಯೇ ನೇರವಾಗಿ ಬಂದಿತ್ತು.ಇದನ್ನು ಜಡೇಜಾ ಕ್ಯಾಚ್ ಪಡೆಯಲು ಯತ್ನಿಸಿದರು. ಆದರೆ, ಕ್ಲಾಸೆನ್​ಗೆ ಡಿಕ್ಕಿ ಹೊಡೆದು ಜಡ್ಡು ಕ್ಯಾಚ್​ ಮಿಸ್​ ಮಾಡಿಕೊಂಡರು.

 ಇದರಿಂದ ಕ್ಲಾನಿಸ್​ ಮೇಲೆ ಸಿಟ್ಟಾದ ಜಡ್ಡು, ಮೊದಲಿಗೆ ಕೈ ಸನ್ನೆಯ ಮೂಲಕ ಸಿಟ್ಟನ್ನು ವ್ಯಕ್ತಪಡಿಸಿದರು. ಅಲ್ಲದೇ ಆ ಓವರ್​ನ 4ನೇ ಎಸತದವರೆಗೂ ಜಡೇಜಾ ಕ್ಲಾಸಿನ್​ ಅವರನ್ನು ಗುರಾಯಿಸಿದ ಘಟನೆ ನಡೆಯಿತು.

ಇದರಿಂದ ಕ್ಲಾನಿಸ್​ ಮೇಲೆ ಸಿಟ್ಟಾದ ಜಡ್ಡು, ಮೊದಲಿಗೆ ಕೈ ಸನ್ನೆಯ ಮೂಲಕ ಸಿಟ್ಟನ್ನು ವ್ಯಕ್ತಪಡಿಸಿದರು. ಅಲ್ಲದೇ ಆ ಓವರ್​ನ 4ನೇ ಎಸತದವರೆಗೂ ಜಡೇಜಾ ಕ್ಲಾಸಿನ್​ ಅವರನ್ನು ಗುರಾಯಿಸಿದ ಘಟನೆ ನಡೆಯಿತು. ಆದರೆ, ಈ ಓವರ್​ನ 5ನೇ ಎಸೆತದಲ್ಲಿ ಮಾಯಾಂಕ್​ ಅರ್ಗವಾಲ್​ ಅವರನ್ನು ಧೋನಿ ಸ್ಟಂಪ್ ಔಟ್​ ಮಾಡಿದರು. ಈ ವೇಳೆ ಜಡ್ಡು ವಿಕೆಟ್​ ಪಡೆದ ಬಳಿಕ ಜಡೇಜಾ ಅವರು ಕ್ಲಾಸಿನ್​ ಬಳಿ ತಿರುಗಿ ಮತ್ತೊಮ್ಮೆ ಗುರಾಯಿಸುತ್ತಾ ತಮ್ಮ ಕೋಪವನ್ನು ವ್ಯಕ್ತಪಡಿಸಿದರು.

 ಆದರೆ, ಅಷ್ಟರಲ್ಲಿ ಜಡ್ಡು ಬಳಿ ಬಂದ ನಾಯಕ ಧೋನಿ ಇಬ್ಬರ ನಡುವಿನ ದೃಷ್ಟಿ ಯುದ್ದಕ್ಕೆ ಅಂತ್ಯ ಹಾಡಿದರು. ಅಲ್ಲದೇ ರವೀಂದ್ರ ಜಡೇಜಾ ತಮ್ಮ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಮ್ಯಾಚ್​ ವಿನ್ನಿಂಗ್​ ಇನ್ನಿಂಗ್ಸ್​ ಆಡಿದ್ದಾರೆ.

 ಐಪಿಎಲ್ 2023ರ ಅಂಕಪಟ್ಟಿ ನೋಡುವುದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ಪಂದ್ಯದಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತಿದ್ದು, 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ 6 ಪಂದ್ಯದಲ್ಲಿ 2ರಲ್ಲಿ ಗೆದ್ದು, 4ರಲ್ಲಿ ಸೋತಿದ್ದು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಆದರೆ, ಅಷ್ಟರಲ್ಲಿ ಜಡ್ಡು ಬಳಿ ಬಂದ ನಾಯಕ ಧೋನಿ ಇಬ್ಬರ ನಡುವಿನ ದೃಷ್ಟಿ ಯುದ್ದಕ್ಕೆ ಅಂತ್ಯ ಹಾಡಿದರು. ಅಲ್ಲದೇ ರವೀಂದ್ರ ಜಡೇಜಾ ತಮ್ಮ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಮ್ಯಾಚ್​ ವಿನ್ನಿಂಗ್​ ಇನ್ನಿಂಗ್ಸ್​ ಆಡಿದ್ದಾರೆ. ಐಪಿಎಲ್ 2023ರ ಅಂಕಪಟ್ಟಿ ನೋಡುವುದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ಪಂದ್ಯದಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತಿದ್ದು, 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ 6 ಪಂದ್ಯದಲ್ಲಿ 2ರಲ್ಲಿ ಗೆದ್ದು, 4ರಲ್ಲಿ ಸೋತಿದ್ದು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ipl 2023 jadeja clashes with srh batsman henrich klaasen.