ರಾಜಸ್ಥಾನ್​ ರಾಯಲ್ಸ್ ವಿರುದ್ಧ ಚೆನ್ನೈ ತಂಡಕ್ಕೆ ಸೋಲು, ಅಗ್ರಸ್ಥಾನಕ್ಕೇರಿದ ಸ್ಯಾಮ್ಸನ್​​ ಪಡೆ

28-04-23 01:19 pm       Source: news18   ಕ್ರೀಡೆ

ಜೈಪುರ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR vs CSK) ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿತು. ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು.

ಇನ್ನು, ರಾಜಸ್ಥಾನ್ ನೀಡಿದ ಬೃಹತ್​ ಮೊತ್ತದ ಟಾರ್ಗೆಟ್​ ಬೆನ್ನಟ್ಟಿದ ಚೆನ್ನೈ ತಂಡ ಇಂದು ಆರಂಭದಲ್ಲಿಯೇ ಮುಗ್ಗರಿಸಿತು, ಈ ಮೂಲಕ ಸಿಎಸ್​ಕೆ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 170 ರನ್ ಗಳಿಸಿತು. ಚೆನ್ನೈ ಪರ, ರುತುರಾಜ್​ ಗಾಯಕ್ವಾಡ 29 ಎಸೆತದಲ್ಲಿ 5 ಪೋರ್​ ಮತ್ತು 1 ಸಿಕ್ಸ್ ಮೂಲಕ 47 ರನ್ ಗಳಿಸಿದರು. ಉಳದಂತೆ ಡ್ವೈನ್​ ಕಾನ್ವೆ 8 ರನ್, ಅಜಿಂಕ್ಯಾ ರಹಾನೆ 15 ರನ್, ಅಂಬಾಟಿ ರಾಯಡು ಶೂನ್ಯ, ಮೋಯಿನ್ ಅಲಿ 23 ರನ್, ಶಿವಂ ದುಬೆ 33 ಎಸೆತದಲ್ಲಿ 4 ಸಿಕ್ಸ್ ಮತ್ತು 2 ಫೊರ್​ ಮೂಲಕ ಆಕರ್ಷಕ 52 ರನ್ ಹಾಗೂ ರವೀಂದ್ರ ಜಡೇಜಾ 23 ರನ್ ಗಳಿಸಿದರು.

ರಾಜಸ್ಥಾನ್​ ಪರ ಯಶಸ್ವಿ ಜೈಸ್ವಾಲ್ (43 ಎಸೆತಗಳಲ್ಲಿ 77 ರನ್; 8 ಬೌಂಡರಿ, 4 ಸಿಕ್ಸರ್) ಮತ್ತು ಜೋಸ್ ಬಟ್ಲರ್ (21 ಎಸೆತಗಳಲ್ಲಿ 27; 4 ಬೌಂಡರಿ) ಮಿಂಚಿದರು. ಕೊನೆಯಲ್ಲಿ ಧ್ರುವ್ ಜುರೈಲ್ (15 ಎಸೆತಗಳಲ್ಲಿ 34 ರನ್; 3 ಬೌಂಡರಿ, 2 ಸಿಕ್ಸರ್) ಮತ್ತು ದೇವದತ್ ಪಡಿಕ್ಕಲ್ (13 ಎಸೆತಗಳಲ್ಲಿ ಔಟಾಗದೆ 27 ರನ್) ಮಿಂಚಿದರು. ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳ ಪೈಕಿ ತುಷಾರ್ ದೇಶ್ ಪಾಂಡೆ ಎರಡು ವಿಕೆಟ್ ಪಡೆದರು. ಜಡೇಜಾ ಮತ್ತು ತೀಕ್ಷಣ್ ತಲಾ ಒಂದು ವಿಕೆಟ್ ಪಡೆದರು.

RR vs CSK, IPL 2023 Highlights & Top Moments: Chennai Super Kings falter in  chase, lose to Rajasthan Royals by 32 runs

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭಿಕರಿಂದ ಉತ್ತಮ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ 86 ರನ್‌ಗಳ ಜೊತೆಯಾಟವಾಡಿದರು. ಯಶಸ್ವಿ ಅರ್ಧಶತಕ ಪೂರೈಸಿದರು. ಆದರೆ, ಈ ಅಪಾಯಕಾರಿ ಜೋಡಿಯ ಆವೇಗಕ್ಕೆ ಜಡೇಜಾ ಬ್ರೇಕ್ ಹಾಕಿದರು. 21 ಎಸೆತಗಳಲ್ಲಿ 27 ರನ್ ಗಳಿಸಿದ್ದ ಬಟ್ಲರ್ ಜಡೇಜಾ ಬೌಲಿಂಗ್ ನಲ್ಲಿ ಶಿವಂ ದುಬೆಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ 86 ರನ್ ಗಳ ಜೊತೆಯಾಟ ಅಂತ್ಯಗೊಂಡಿತು. ಕೊನೆಯಲ್ಲಿ ಧ್ರುವ್ ಜುರೈಲ್ ಮತ್ತು ದೇವದತ್ ಪಡಿಕ್ಕಲ್ ಮಿಂಚಿದರು. ಅದರಲ್ಲೂ ಧ್ರುವ್ ಜುರೈಲ್ ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ಸ್ಕೋರ್ ಬೋರ್ಡ್ ಹೆಚ್ಚಿಸಿದರು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ಬೃಹತ್ ಸ್ಕೋರ್ ದಾಖಲಿಸಿತು.

Rajasthan Royals ने Chennai Super Kings को 32 रन से हराया ipl news

ಐಪಿಎಲ್​ 2023 ಅಂಕಪಟ್ಟಿ:

ಐಪಿಎಲ್​ 2023ರ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಬದಲಾವಣೆ ಆಗಿದ್ದು, ಮೊದಲ ಸ್ಥಾನದಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್ ಇದೀಗ ಕುಸಿತಕಂಡಿದೆ. ಭರ್ಜರಿ ಗೆಲುವಿನ ಮೂಲಕ ರಾಜಸ್ಥಾನ್​ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಉಳಿದಂತೆ ಕ್ರಮವಾಗಿ ಚೆನ್ನೈ ಸೂಪರ್​ ಕಿಂಗ್ಸ್, ಗುಜರಾತ್ ಟೈಟನ್ಸ್, ಲಕ್ನೋ ಸೂಪರ್​ ಜೈಂಟ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು 9ನೇ ಸ್ಥಾನದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಕೊನೆಯಲ್ಲಿ ಡೆಲ್ಲಿ ಕ್ಯಾಪಟಿಲ್ಸ್ ತಂಡವಿದೆ.

IPL 2023 csk vs rr match rajasthan royals won by 32 runs.