ಬ್ರೇಕಿಂಗ್ ನ್ಯೂಸ್
02-05-23 12:46 pm Source: news18 ಕ್ರೀಡೆ
ಎಲ್ಲೆಲ್ಲೂ ವಿರಾಟ್ ಕೊಹ್ಲಿ-ಗಂಭೀರ್ ಜಗಳದ್ದೇ ಮಾತು. ಆ ಮಟ್ಟಕ್ಕೆ ಗಲಾಟೆಯಾಗಿದೆ ಅಂದ್ರೆ ಯೋಚನೆ ಮಾಡಿ. ಅದು ಆರ್ಸಿಬಿ ಸೋತಾಗ ಗಂಭೀರ್ ಕುಣಿದು ಕುಪ್ಪಳಿಸಿದ್ದರು. ಶ್ ಸನ್ನೆ ಮಾಡಿ ಅಲ್ಲಿ ನೆರೆದಿದ್ದವರಿಗೆ ವಾರ್ನಿಂಗ್ ಕೊಟ್ಟಿದ್ದರು. ಆದರೆ ನಿನ್ನೆ ಆರ್ಸಿಬಿ ಗೆಲುವನ್ನು ಗಂಭೀರ್ ಸಹಿಸಿಕೊಂಡಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೊಂದು ಫೋಟೊ ಸಾಕು ವಿರಾಟ್ ಏನು ಅಂತ ಗೊತ್ತಾಗೋಕೆ ಅಂತಿದ್ದಾರೆ ಫ್ಯಾನ್ಸ್
ಗಲಾಟೆಗೂ ಮುನ್ನ ಗ್ರೌಂಡ್ ಒಳಗೆ ಅಭಿಮಾನಿಯೊಬ್ಬ ಬಂದು ವಿರಾಟ್ ಕೊಹ್ಲಿ ಕಾಲು ಮುಟ್ಟಿ ನಮಸ್ಕರಿಸಿದ್ದಾನೆ. ವಿರಾಟ್ ಕೂಡ ಅವರನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಈ ಫೋಟೋ ವೈರಲ್ ಆಗುತ್ತಿರಲಿಲ್ಲ. ಆ ಅಭಿಮಾನಿ ಗೌತಮ್ ಗಂಭೀರ್ ಮುಂದೆಯೇ ವಿರಾಟ್ ಕಾಲಿಗೆ ಬಿದ್ದಿದ್ದಾರೆ. ಆಂಜನೇಯ ಶ್ರೀರಾಮನ ಮುಂದೆ ಮಂಡಿಯೂರುವಂತೆ ಫೋಟೋ ಕಾಣಿಸುತ್ತಿದ್ದು, ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಗತ್ತು ಎಲ್ಲರಿಗೂ ಗೊತ್ತು. ಈ ಫೋಟೋ ನೋಡಿದ್ರೆ ಸಾಕು. ಗಂಭೀರ್ ಮಾಡಿದ್ದೇ ತಪ್ಪು. ಗೆದ್ದಾಗ ಆ ರೀತಿ ಮಾಡಿ, ಸೋತಾಗ ಗಲಾಟೆ ಮಾಡೋದು ಎಷ್ಟು ಸರಿ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ.ಆರ್ಸಿಬಿ ತಂಡದ ಆಟಗಾರ ಕಿಂಗ್ ಕೊಹ್ಲಿ, ಎಲ್ಎಸ್ಜಿ ತಂಡದ ಮೆಂಟರ್ ಗಂಭೀರ್ ನಡುವೆ ದೊಡ್ಡ ಗಲಾಟೆಯಾಗಿತ್ತು. ಇಬ್ಬರು ಆಟಗಾರರು ಮೈದಾನದಲ್ಲೇ ಬಡಿದಾಡಿಕೊಳ್ಳುವಂತಹ ಪರಿಸ್ಥಿತಿಗೆ ಹೋಗಿತ್ತು.
ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮತ್ತು ನವೀನ್-ಉಲ್-ಹಕ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಬಿಸಿಸಿಐ ನಿಯಮ ಲೆವಲ್ 2 ಅಪರಾಧ ಮಾಡಿದ್ದಾರೆ ಅಂತ ಕೊಹ್ಲಿ-ಗಂಭೀರ್ ಪಂದ್ಯದ ಶುಲ್ಕದ ಮೇಲೆ 100% ದಂಡವನ್ನು ವಿಧಿಸಲಾಗಿದೆ. ನವೀನ್-ಉಲ್-ಹಕ್ ಅವರ ಲೆವೆಲ್ 1 ಅಪರಾಧಕ್ಕಾಗಿ ತಮ್ಮ ಪಂದ್ಯದ ಶುಲ್ಕದ 50% ನಷ್ಟು ದಂಡ ಕಟ್ಟಬೇಕು.ಗಂಭೀರ್, ಕೊಹ್ಲಿ ಮತ್ತು ನವೀನ್ ತಮ್ಮ ತಪ್ಪನ್ನು ಒಪ್ಪಿಕೊಂಡು ದಂಡ ಕಟ್ಟುವುದಾಗಿ ಹೇಳಿದ್ದಾರೆ.
ipl 2023 fan touches virat kohlis feet infront of gautam gambhir video viral.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm