ಬ್ರೇಕಿಂಗ್ ನ್ಯೂಸ್
04-05-23 01:08 pm Source: news18 ಕ್ರೀಡೆ
ಕ್ರಿಕೆಟ್ನ್ನು ಜಂಟೆಲ್ಮೆನ್ ಗೇಮ್ ಎಂದು ಕರೆಯಲಾಗುತ್ತದೆ. ಹೀಗಾಗಿ ಶಿಸ್ತಿನಿಂದ ಆಡಲು ಅನೇಕ ನಿಯಮಗಳನ್ನು ಮಾಡಲಾಗಿದೆ. ಮೈದಾನದಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದ ಆಟಗಾರನಿಗೆ ಶಿಕ್ಷೆಯಾಗುತ್ತದೆ. ಆಟಗಾರ ಯಾವುದೇ ರೀತಿಯ ತಪ್ಪು ಮಾಡಿದರೂ ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಹೀಗಾಗಿ ಆಟಗಾರರ ವಿರುದ್ಧ ದಂಡವನ್ನು ವಿಧಿಸಲಾಗಿದೆ. ಲಕ್ನೋ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮೈದಾದ್ಲಲಿಯೇ ಜಗಳ ನಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ.
ಹೀಗಾಗಿ ಕೊಹ್ಲಿ ಮತ್ತು ಗಂಭೀರ್ಗೆ ಪಂದ್ಯದ ಸಂಪೂರ್ಣ ಶುಲ್ಕವನ್ನು ದಂಡವಾಗಿ ವಿಧೀಸಲಾಯಿತು. ಆದರೆ ವಿವಾದಗಳಿಂದ ಸುತ್ತುವರಿದಿರುವ ವಿರಾಟ್ ಕೊಹ್ಲಿ, ಈ ಋತುವಿನಲ್ಲಿ ಮತ್ತೆ ಯಾವುದೇ ಪಂದ್ಯದಲ್ಲಿ ಈ ರೀತಿ ವರ್ತಿಸಿದರೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೌದು, ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಮತ್ತು ಬೆಂಗಳೂರಿನ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ನೀತಿ ಸಂಹಿತೆಯ ಲೆವೆಲ್ -2 ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು. ಮ್ಯಾಚ್ ರೆಫರಿ ಶಿಕ್ಷೆಯಾಗಿ ಇಬ್ಬರಿಗೂ ಪಂದ್ಯ ಶುಲ್ಕದ 100% ದಂಡವನ್ನು ವಿಧಿಸಿದರು. ಐಪಿಎಲ್ ನೀತಿ ಸಂಹಿತೆ ಪ್ರಕಾರ ಮತ್ತೊಮ್ಮೆ ಇಂತಹ ತಪ್ಪು ನಡೆದರೆ ವಿರಾಟ್ ಕೊಹ್ಲಿಯನ್ನು ಇಡೀ ಐಪಿಎಲ್ ಸೀಸನ್‌ನಿಂದ ಹೊರಹಾಕಬಹುದು.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಪಂದ್ಯದ ವೇಳೆ ಪಾಲುದಾರ ಅಥವಾ ಎದುರಾಳಿ ತಂಡದ ಯಾವುದೇ ಆಟಗಾರನೊಂದಿಗೆ ಅನುಚಿತವಾಗಿ ವರ್ತಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬಹುದು. ಪಂದ್ಯದ ವೇಳೆ ಆಟಗಾರರು ಮೈದಾನದಲ್ಲಿ ಅಶಿಸ್ತಿನ ತಪ್ಪಿತಸ್ಥರೆಂದು ಕಂಡುಬಂದರೆ, ನಂತರ 8 ಪಂದ್ಯಗಳ ನಿಷೇಧವನ್ನು ವಿಧಿಸಬಹುದು. ಇದರ ನಡುವೆ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಈ ಕುರಿತು ಮಾತನಾಡಿದ್ದು, ಕೊಹ್ಲಿ-ಗಂಭೀರ್ ಅವರ ರಿಯಾಕ್ಷನ್ ಜಾಸ್ತಿಯಾಗಿದೆ, ಇಷ್ಟವಿಲ್ಲದಿದ್ದರೆ ಸ್ವಇಚ್ಛೆಯಿಂದ ನಿರ್ಗಮಿಸಿ, ಆದರೆ ಈ ರೀತಿ ಭಾರತೀಯ ಕ್ರಿಕೆಟ್ ಖ್ಯಾತಿಗೆ ಚ್ಯುತಿ ತರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಶಿಸ್ತಿನ ಆರೋಪದಿಂದ ಒಂದು ಸೀಸನ್ ಪೂರ್ತಿ ಬ್ಯಾನ್ ಆಗಿದ್ದರು. ತಪ್ಪಿತಸ್ಥರೆಂದು ಸಾಬೀತಾದ ನಂತರ, ಅವರನ್ನು 11 ಪಂದ್ಯಗಳಿಗೆ ನಿಷೇಧಿಸಲಾಯಿತು. ಪಂಜಾಬ್ ಕಿಂಗ್ಸ್ ಇಲೆವೆನ್ (ಈಗ ಪಂಜಾಬ್ ಕಿಂಗ್ಸ್) ಆಟಗಾರ ಎಸ್ ಶ್ರೀಶಾಂತ್ ಅವರೊಂದಿಗೆ ಜಗಳವಾಡಿದ್ದಕ್ಕಾಗಿ ಈ ನಿಷೇಧವನ್ನು ವಿಧಿಸಲಾಗಿತ್ತು. ಆಟಗಾರ ಅಥವಾ ತಂಡವು ಮೂರಕ್ಕಿಂತ ಹೆಚ್ಚು ಬಾರಿ ನಿಯಮವನ್ನು ಉಲ್ಲಂಘಿಸಿದರೆ, ನಂತರ 1 ವರ್ಷದವರೆಗೆ ನಿಷೇಧವನ್ನು ವಿಧಿಸಬಹುದು.
virat kohli will face a ban if he violates the ipl code of conduct again.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm