ಪ್ರತಿ ವರ್ಷದಂತೆ ಈ ವರ್ಷವೂ ಕ್ಯಾಲ್ಕುಲೇಟರ್ ಹಿಡಿದುಕೊಂಡ ಫ್ಯಾನ್ಸ್​, ಆರ್​ಸಿಬಿ ಪ್ಲೇಆಫ್​ ತುಂಬಾ ಟಫ್!

08-05-23 11:47 am       Source: news18   ಕ್ರೀಡೆ

ಆರ್​ಸಿಬಿ ತಂಡ10 ಅಂಕಗಳನ್ನು ಹೊಂದಿದೆ. ಆದರೆ ಆರ್​ಸಿಬಿ ತಂಡಕ್ಕೆ ರಾಜಸ್ಥಾನ್​ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್​ ಕಿಂಗ್ಸ್ ತಂಡಗಳು ಹೆಚ್ಚು ಸವಾಲಾಗಿದೆ.

ಐಪಿಎಲ್​ 2023ರಲ್ಲಿ ಆರ್​ಸಿಬಿ ತಂಡ ಆರಂಭದಲ್ಲಿ ಉತ್ತಮ ರೀತಿ ಪ್ರದರ್ಶನ ನೀಡಿತು. ಸಾಲು ಸಾಲು ಗೆಲುವಿನೊಂದಿಗೆ ಉತ್ತಮ ಆರಂಭ ಪಡೆಯಿತು. ಆದರೆ ಇದೀಗ ಕೆಲ ಸೋಲುಗಳಿಂದ ಆರ್​ಸಿಬಿ ಪ್ಲೇಆಫ್​ ಹಾದಿ ಕಠಿಣವಾಗಿದೆ. ಆದರೆ ಬಳಿಕ ಕೆಲ ಸೋಲುಗಳಿಂದ ಆರ್​ಸಿಬಿ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾ ಬಂದಿತು. ಈ ಮೂಲಕ ಆರ್​ಸಿಬಿ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋಲನ್ನಪ್ಪಿದೆ.

ಆದರೆ ಇದೀಗ ಆರ್​ಸಿಬಿ ತಂಡಕ್ಕೆ ಹೊಸ ತಲೆನೋವೊಂದು ಶುರುವಾಗಿದೆ. ಅದು ಪ್ಲೇಆಫ್​ ಟೆನ್ಷನ್​. ಹೌದು, ಆರ್​ಸಿಬಿ ತಂಡಕ್ಕೆ ಪ್ಲೇಆಫ್​ ತಲುಪಲು ಇನ್ನು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆರ್​ಸಿಬಿ ತನ್ನ ಮುಂದಿನ 4 ಪಂದ್ಯಗಳಲ್ಲಿ 4ರಲ್ಲಿಯೂ ಗೆದ್ದರೆ 18 ಅಂಕವಾಗುತ್ತದೆ. ಆಗ ನೇರವಾಗಿ ಪ್ಲೇಆಫ್​ ಗೆ ತಲುಪಲಿದೆ. ಇದೀಗ ಆರ್​ಸಿಬಿ 10 ಅಂಕಗಳನ್ನು ಹೊಂದಿದೆ.

 ಆದರೆ ಬಳಿಕ ಕೆಲ ಸೋಲುಗಳಿಂದ ಆರ್​ಸಿಬಿ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾ ಬಂದಿತು. ಈ ಮೂಲಕ ಆರ್​ಸಿಬಿ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋಲನ್ನಪ್ಪಿದೆ.

 ಆದರೆ ಇದೀಗ ಆರ್​ಸಿಬಿ ತಂಡಕ್ಕೆ ಹೊಸ ತಲೆನೋವೊಂದು ಶುರುವಾಗಿದೆ. ಅದು ಪ್ಲೇಆಫ್​ ಟೆನ್ಷನ್​. ಹೌದು, ಆರ್​ಸಿಬಿ ತಂಡಕ್ಕೆ ಪ್ಲೇಆಫ್​ ತಲುಪಲು ಇನ್ನು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಆರ್​ಸಿಬಿ ತಂಡ ಮುಂದಿನ ಪಂದ್ಯವನ್ನು ಮೇ 9ರಂದು ವಾಖೆಂಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಸೆಣಸಾಡಲಿದೆ. ಬಳಿಕ ಮೇ 14ರಂದು ಆರ್​ಸಿಬಿ ತಂಡವು ರಾಜಸ್ಥಾನ್​ ರಾಯಲ್ಸ್ ವಿರುದ್ಧ ಸೆಣಸಾಡಲಿದೆ. ಆರ್​ಸಿಬಿ ತಂಡ10 ಅಂಕಗಳನ್ನು ಹೊಂದಿದೆ. ಆದರೆ ಆರ್​ಸಿಬಿ ತಂಡಕ್ಕೆ ರಾಜಸ್ಥಾನ್​ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್​ ಕಿಂಗ್ಸ್ ತಂಡಗಳು ಹೆಚ್ಚು ಸವಾಲಾಗಿದೆ. ಹೀಗಾಗಿ ಆರ್​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಕೇವಲ ಗೆಲ್ಲುವುದು ಮಾತ್ರವಲ್ಲದೇ ಹೆಚ್ಚಿನ ರನ್​​ರೇಟ್​ ಮೂಲಕ ಗೆಲ್ಲಬೇಕಾದ ಅವಶ್ಯಕತೆ ಇದೆ. ಇಲ್ಲವಾದ್ದಲ್ಲಿ ಆರ್​ಸಿಬಿ ತಂಡ ಮತ್ತೆ ಪ್ರತಿ ವರ್ಷದಂತೆ ಪ್ಲೇಆಫ್​ ಲೆಕ್ಕಾಚಾರ ಮಾಡಬೇಕಾಗುತ್ತದೆ.

IPL 2023 royal challengers bengaluru playoffs calculation.