RCB ಪಂದ್ಯಕ್ಕೂ ಮುನ್ನ ಮುಂಬೈಗೆ ಬಿಗ್​ ಶಾಕ್​! ಸ್ಟಾರ್​ ಬೌಲರ್​ ಟೂರ್ನಿಯಿಂದಲೇ ಔಟ್​

09-05-23 02:46 pm       Source: news18   ಕ್ರೀಡೆ

ಮತ್ತೊಬ್ಬ ಸ್ಟಾರ್ ಪ್ಲೇಯರ್​ ಐಪಿಎಲ್ 2023ರಿಂದ ಹೊರನಡೆದಿದ್ದಾರೆ. ಆರ್​ಸಿಬಿ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಬೌಲಿಂಗ್ ಸಂಕಷ್ಟ ಎದುರಿಸುತ್ತಿರುವ ಮುಂಬೈಗೆ ಭಾರೀ ಹಿನ್ನಡೆಯಾಗಿದೆ.

ಇಂದು ಸಂಜೆ ಆರ್​ಸಿಬಿ ಮತ್ತು ಮುಂಬೈ ವಿರುದ್ಧ ಐಪಿಎಲ್​ 2023ರ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಪ್ಲೇಆಫ್​ ರೇಸ್​ನಲ್ಲಿ ಉಳಿಯಲು ತಂಡ ಗೆಲ್ಲಲೇಬೇಕಿದೆ. ಇದರ ನಡುವೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬೈ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 4 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ. ಆದರೆ ಬೌಲಿಂಗ್​ ವಿಭಾಗ ಸಾಕಷ್ಟು ವೀಕ್​ ಆಗಿದೆ. 

ಜೋಫ್ರಾ ಆರ್ಚರ್ ಗಾಯಗೊಂಡು ಮನೆಗೆ ವಾಪಸ್ಸಾಗಿದ್ದಾರೆ. ಇದನ್ನು ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಜೋಫ್ರಾ ಬದಲಿಗೆ ಮುಂಬೈ ಮತ್ತೊಬ್ಬ ಇಂಗ್ಲಿಷ್ ಬೌಲರ್ ಕ್ರಿಸ್ ಜೋರ್ಡಾನ್ ಅವರನ್ನು ಆಯ್ಕೆ ಮಾಡಿದೆ. ಈಗಾಗಲೇ ಜೋರ್ಡನ್​ ಮುಂಬೈ ಇಂಡಿಯನ್ಸ್ ಪಾಳಯ ಸೇರಿದ್ದಾರೆ ಎಂದು ವರದಿಯಾಗಿದೆ. ಆದರೆ ಇಂದು ನಡೆಯಲಿರುವ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಬೌಲಿಂಗ್ ಲೈನ್‌ಅಪ್‌ನಿಂದ ಮುಂಬೈ ಸಂಕಷ್ಟಕ್ಕೆ ಸಿಲುಕಿದೆ.

 ಇದರ ನಡುವೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬೈ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 4 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ. ಆದರೆ ಬೌಲಿಂಗ್​ ವಿಭಾಗ ಸಾಕಷ್ಟು ವೀಕ್​ ಆಗಿದೆ.

 ಜೋಫ್ರಾ ಆರ್ಚರ್ ಗಾಯಗೊಂಡು ಮನೆಗೆ ವಾಪಸ್ಸಾಗಿದ್ದಾರೆ. ಇದನ್ನು ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಜೋಫ್ರಾ ಬದಲಿಗೆ ಮುಂಬೈ ಮತ್ತೊಬ್ಬ ಇಂಗ್ಲಿಷ್ ಬೌಲರ್ ಕ್ರಿಸ್ ಜೋರ್ಡಾನ್ ಅವರನ್ನು ಆಯ್ಕೆ ಮಾಡಿದೆ.

ಅದರಲ್ಲೂ ಸ್ಥಳೀಯ ಬೌಲರ್‌ಗಳು ದಯನೀಯವಾಗಿ ವಿಫಲರಾಗುತ್ತಿದ್ದಾರೆ. ಮತ್ತೊಂದೆಡೆ, ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅವರು ವೇಗದ ಬೌಲಿಂಗ್​ನಲ್ಲಿ ಉತ್ತಮ ಸ್ಪೆಲ್​ ಮಾಡುತ್ತಿದ್ದಾರೆ . ಮತ್ತೊಂದೆಡೆ, ರೋಹಿತ್ ಈ ಋತುವಿನಲ್ಲಿ ತಮ್ಮ ಕಳಪೆ ಫಾರ್ಮ್‌ನಿಂದ ಕೂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ಸ್ಟಬ್ಸ್, ನೆಹಾಲ್ ವಧೇರಾ, ಟಿಮ್ ಡೇವಿಡ್ ಮೊದಲಾದವರ ಜೊತೆ ಮುಂಬೈ ಬ್ಯಾಟಿಂಗ್ ಬಲಿಷ್ಠವಾಗಿದೆ. ಆದರೆ ಸ್ಥಿರತೆ ತಂಡಕ್ಕೆ ಸಮಸ್ಯೆಯಾಗಿದೆ.

 ಈಗಾಗಲೇ ಜೋರ್ಡನ್​ ಮುಂಬೈ ಇಂಡಿಯನ್ಸ್ ಪಾಳಯ ಸೇರಿದ್ದಾರೆ ಎಂದು ವರದಿಯಾಗಿದೆ. ಆದರೆ ಇಂದು ನಡೆಯಲಿರುವ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಬೌಲಿಂಗ್ ಲೈನ್‌ಅಪ್‌ನಿಂದ ಮುಂಬೈ ಸಂಕಷ್ಟಕ್ಕೆ ಸಿಲುಕಿದೆ.

 ಅದರಲ್ಲೂ ಸ್ಥಳೀಯ ಬೌಲರ್‌ಗಳು ದಯನೀಯವಾಗಿ ವಿಫಲರಾಗುತ್ತಿದ್ದಾರೆ. ಮತ್ತೊಂದೆಡೆ, ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅವರು ವೇಗದ ಬೌಲಿಂಗ್​ನಲ್ಲಿ ಉತ್ತಮ ಸ್ಪೆಲ್​ ಮಾಡುತ್ತಿದ್ದಾರೆ .

 ಆದರೆ ಇದರ ನಡುವೆ ಆರ್​ಸಿಬಿ ಸ್ಟಾರ್​ ಬೌಲರ್​ ತಂಡದಿಂದ ಹೊರನಡೆದಿರುವುದು ಇದೀಗ ಆರ್​ಸಿಬಿ ತಂಡಕ್ಕೆ ದೊಡ್ಡ ಅನುಕೂಲವಾಗಿದೆ. ಆರ್ಚರ್​ ಬೌಲಿಂಗ್​ ಹಾಗೂ ಕೆಲ ಸಮಯದಲ್ಲಿ ಬ್ಯಾಟಿಂಗ್​ನಲ್ಲಿಯೂ ಅಬ್ಬರಿಸುತ್ತಿದ್ದರು. ಆದರೆ ಇದೀಗ ಅವರು ಟೂರ್ನಿಯಿಂದ ಹೊರನಡೆದಿರುವುದು ಆರ್​ಸಿಬಿಗೆ ಒಳ್ಳೆಯ ಸುದ್ದಿಯಾಗಿದೆ.

ಆದರೆ ಇದರ ನಡುವೆ ಆರ್​ಸಿಬಿ ಸ್ಟಾರ್​ ಬೌಲರ್​ ತಂಡದಿಂದ ಹೊರನಡೆದಿರುವುದು ಇದೀಗ ಆರ್​ಸಿಬಿ ತಂಡಕ್ಕೆ ದೊಡ್ಡ ಅನುಕೂಲವಾಗಿದೆ. ಆರ್ಚರ್​ ಬೌಲಿಂಗ್​ ಹಾಗೂ ಕೆಲ ಸಮಯದಲ್ಲಿ ಬ್ಯಾಟಿಂಗ್​ನಲ್ಲಿಯೂ ಅಬ್ಬರಿಸುತ್ತಿದ್ದರು. ಆದರೆ ಇದೀಗ ಅವರು ಟೂರ್ನಿಯಿಂದ ಹೊರನಡೆದಿರುವುದು ಆರ್​ಸಿಬಿಗೆ ಒಳ್ಳೆಯ ಸುದ್ದಿಯಾಗಿದೆ.

ipl 2023 jofra archer ruled out of tournament with injury and chris jordan named replacement.