ಆರ್​ಸಿಬಿ ಸೋಲಿಗೆ ಕಾರಣವಾಯ್ತು ಈ ಅಂಶಗಳು, ತಂಡದ ಆಟಗಾರರ ಮೇಲೆ ಬೇಸರಗೊಂಡ ಫಾಫ್

10-05-23 03:21 pm       Source: news18   ಕ್ರೀಡೆ

IPL 2023 ಐಪಿಎಲ್​ 2023 2023ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿತು. ಈ ಸೋಲಿಗೆ ಕೆಲ ಕಾರಣಗಳಿದ್ದು, ಫಾಫ್​ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ 2023 2023ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿತು. ಈ ಸೋಲಿಗೆ ಕೆಲ ಕಾರಣಗಳಿದ್ದು, ಫಾಫ್​ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 199 ರನ್​ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 200 ರನ್​ ಗಳ ಟಾರ್ಗೆಟ್​ ನೀಡಿತು. ಈ ಮೊತ್ತವನ್ನು ಮುಂಬೈ ಇಂಡಿಯನ್ಸ್ ತಂಡವು 16.3 ಓವರ್​ಗೆ 4 ವಿಕೆಟ್ ಚೇಸ್​ ಮಾಡುವ ಮೂಲಕ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಆದರೆ ಆರ್​ಸಿಬಿ ತಂಡ ಸೋಲಲು ಕೆಲ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾಗಿ, ಬೌಲಿಂಗ್​ ಎನ್ನಬಹುದು. ಆದರೆ ಮುಂಬೈ ಪರ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್​ ಅವರನ್ನು ನಿಯಂತ್ರಿಸಲು ಆರ್​ಸಿಬಿ ಬಳಿ ಸಾಧ್ಯವಾಗಲಿಲ್ಲ. ಇದು ತಂಡಕ್ಕೆ ದುಬಾರಿಯಾಯಿತು. ಜೊತೆಗೆ ಸೂರ್ಯ-ವಧೇರಾ ಜೊತೆಯಾಟ ಸಹ ಆರ್​ಸಿಬಿಗೆ ದೊಡ್ಡ ಹಿನ್ನಡೆಯಾಯಿತು. ಸೂರ್ಯಕುಮಾರ್ ಯಾದವ್​ ಮತ್ತು ನೇಹಲ್ ವಧೇರಾ uತ್ತಮ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಆರ್​ಸಿಬಿ ಬೌಲರ್​ಗಳು ಯಶಸ್ವಿಯಾಗಲಿಲ್ಲ.

 ಆದರೆ ಆರ್​ಸಿಬಿ ತಂಡ ಸೋಲಲು ಕೆಲ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾಗಿ, ಬೌಲಿಂಗ್​ ಎನ್ನಬಹುದು. ಆದರೆ ಮುಂಬೈ ಪರ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್​ ಅವರನ್ನು ನಿಯಂತ್ರಿಸಲು ಆರ್​ಸಿಬಿ ಬಳಿ ಸಾಧ್ಯವಾಗಲಿಲ್ಲ.

 ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 199 ರನ್​ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 200 ರನ್​ ಗಳ ಟಾರ್ಗೆಟ್​ ನೀಡಿತು. ಈ ಮೊತ್ತವನ್ನು ಮುಂಬೈ ಇಂಡಿಯನ್ಸ್ ತಂಡವು 16.3 ಓವರ್​ಗೆ 4 ವಿಕೆಟ್ ಚೇಸ್​ ಮಾಡುವ ಮೂಲಕ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಇನ್ನು, ವಾಂಕೆಡೆ ಮೈದಾನ ಬ್ಯಾಟಿಂಗ್​ ಸ್ನೇಹಿ ಪಿಚ್​ ಆಗಿದೆ. ಈ ಪಿಚ್​ನಲ್ಲಿ ಆರ್​ಸಿಬಿ ಸ್ಕೋರ್​ ಸಹ ಕಡಿಮೆ ಆಯಿತು. ಅಲ್ಲದೇ ಮುಂಬೈ ಚೇಸಿಂಗ್​ ಟೀಂ ಆಗಿರುವುದರಿಂದ ಇನ್ನೂ ಹೆಚ್ಚಿನ ಸ್ಕೋರ್​ ಬರಬೇಕಿತ್ತು. ಆರಂಭದಲ್ಲಿ ರೋಹಿತ್​ ಮತ್ತು ಇಶಾನ್ ಕಿಶನ್​ ವಿಕೆಟ್​ ಪಡೆದ ನಂತರ ಆರ್​ಸಿಬಿ ಬೌಲರ್ಸ್​ ಯಾವುದೇ ಪ್ರತಿದಾಳಿ ನೀಡದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಒಟ್ಟಾರೆಯಾಗಿ ಮತ್ತೊಮ್ಮೆ ಆರ್​ಸಿಬಿ ಬೌಲರ್​ಗಳು ಎಡವಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಅಲ್ಲದೇ ಮುಂಬರಲಿರುವ 3 ಪಂದ್ಯಗಳನ್ನು ಆರ್​ಸಿಬಿ ಗೆಲ್ಲಲೇಬೇಕಿದೆ.

 ಇನ್ನು, ವಾಂಕೆಡೆ ಮೈದಾನ ಬ್ಯಾಟಿಂಗ್​ ಸ್ನೇಹಿ ಪಿಚ್​ ಆಗಿದೆ. ಈ ಪಿಚ್​ನಲ್ಲಿ ಆರ್​ಸಿಬಿ ಸ್ಕೋರ್​ ಸಹ ಕಡಿಮೆ ಆಯಿತು. ಅಲ್ಲದೇ ಮುಂಬೈ ಚೇಸಿಂಗ್​ ಟೀಂ ಆಗಿರುವುದರಿಂದ ಇನ್ನೂ ಹೆಚ್ಚಿನ ಸ್ಕೋರ್​ ಬರಬೇಕಿತ್ತು. ಆರಂಭದಲ್ಲಿ ರೋಹಿತ್​ ಮತ್ತು ಇಶಾನ್ ಕಿಶನ್​ ವಿಕೆಟ್​ ಪಡೆದ ನಂತರ ಆರ್​ಸಿಬಿ ಬೌಲರ್ಸ್​ ಯಾವುದೇ ಪ್ರತಿದಾಳಿ ನೀಡದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು.

 ಈ ಕುರಿತು ಮಾತನಾಡಿದ ಫಾಫ್​, ನಮಗೆ ಇನ್ನು ಇರುವುದು ಕೇಲವ 3 ಪಂದ್ಯಗಳು ಈ ಪಂದ್ಯಗಳಲ್ಲಿ ಬೌಲರ್​ಗಳು ಫಾರ್ಮ್​ಗೆ ಮರಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ಮುಂಬೈ ತಂಡದ ಸೂರ್ಯಕುಮಾರ್ ಬ್ಯಾಟಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು, ನಾಯಕ ಫಾಫ್ ಡುಪ್ಲೆಸಿಸ್ ಸಹ ಬೌಲಿಂಗ್ ವಿಭಾಗದ ಬಗ್ಗೆ ಬೇಸರಗೊಂಡಿದ್ದಾರೆ.ಅದರಲ್ಲಿಯೂ ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್​ ಪಟೇಲ್​ ಬೌಲಿಂಗ್​ ಬಗ್ಗೆ ಫಾಫ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಫಾಫ್​, ನಮಗೆ ಇನ್ನು ಇರುವುದು ಕೇಲವ 3 ಪಂದ್ಯಗಳು ಈ ಪಂದ್ಯಗಳಲ್ಲಿ ಬೌಲರ್​ಗಳು ಫಾರ್ಮ್​ಗೆ ಮರಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ಮುಂಬೈ ತಂಡದ ಸೂರ್ಯಕುಮಾರ್ ಬ್ಯಾಟಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ipl 2023 here is the reason for rcb defeat against mumbai.