ಬ್ರೇಕಿಂಗ್ ನ್ಯೂಸ್
17-05-23 12:46 pm Source: news18 ಕ್ರೀಡೆ
ಸನ್ ರೈಸರ್ಸ್ ಹೈದರಾಬಾದ್ 2017ರಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಭಾರಿ ಮೊತ್ತಕ್ಕೆ ಖರೀದಿಸಿತು. ಆಗ ಸಿರಾಜ್ ಜನಮಾನಸದಲ್ಲಿ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ. ಆದರೆ ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸಿ ಅವರನ್ನು ತಂಡಕ್ಕೆ ತೆಗೆದುಕೊಳ್ಳಲಾಗಿತ್ತು. ಒಂದು ವರ್ಷದ ನಂತರ, RCB ಅವರನ್ನು ತಮ್ಮ ತಂಡಕ್ಕೆ ತೆಗೆದುಕೊಂಡಿತು. 19ನೇ ವಯಸ್ಸಿನವರೆಗೂ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದ ಸಿರಾಜ್ 23ನೇ ವಯಸ್ಸಿನಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದರು.
ಆರಂಭದಲ್ಲಿ ಅವರ ಬೌಲಿಂಗ್‌ನಲ್ಲಿ ಉತ್ತಮ ಹಿಡಿತವಿರಲಿಲ್ಲ. ಆದರೆ ಕ್ರಮೇಣ ಸ್ಟಾರ್ ಬೌಲರ್ ಆಗಿ ಬದಲಾದರು. ಭಾರತ ತಂಡದಲ್ಲಿಯೂ ಅವಕಾಶ ಸಿಕ್ಕಿತು. ಈಗ ಅವರು ತಮ್ಮ ಜೀವನದಲ್ಲಿ ಸಾವಿನ ಬಾಗಿಲಿನಿಂದ ಹಿಂತಿರುಗಿದ ಘಟನೆಯ ಬಗ್ಗೆ ಹೇಳಿಕೊಂಡಿದ್ದರು. ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಶೋನಲ್ಲಿ ಮಾತನಾಡಿದ ಮೊಹಮ್ಮದ್ ಸಿರಾಜ್, ನನಗೆ ಒಮ್ಮೆ ಡೆಂಗ್ಯೂ ಜ್ವರ ಬಂದಿತ್ತು. ಆ ಸಮಯದಲ್ಲಿ ಪ್ಲೇಟ್‌ಲೆಟ್‌ಗಳು ವೇಗವಾಗಿ ಕಡಿಮೆಯಾಗುತ್ತಿತ್ತು.
U-23 ತಂಡದ ಜೊತೆ ಮರುದಿನ ಪಂದ್ಯಕ್ಕಾಗಿ ನಾನು ಹೊರಡಬೇಕಿತ್ತು. ನಾನು ಟೆನ್ಶನ್ ನಲ್ಲಿ ಓಡಾಡುತ್ತಿದ್ದೆ. ನನ್ನ ಹೆಸರು ತಂಡದಲ್ಲಿದ್ದರೂ ಸಹ ನಾನು ಮಾತ್ರ ಆಸ್ಪತ್ರೆಯಲ್ಲಿದ್ದೆ. ನನಗೆ ಡೆಂಗ್ಯೂ ಲಕ್ಷಣ ಇದೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದರು. ಆ ವೇಳೆಗಾಗಲೇ ನನ್ನ ರಕ್ತ ಕಣಗಳೂ ಕಡಿಮೆ ಆಗಿದ್ದವು. ಆಸ್ಪತ್ರೆಗೆ ಸೇರಿಸದೇ ಇದ್ದಿದ್ದರೆ ನಾನು ಸಾಯುತ್ತಿದ್ದೆ ಎಂದು ವೈದ್ಯರು ಹೇಳಿದ್ದರು ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ಇದರ ನಡುವೆ ನನ್ನ ಸ್ಥಿತಿಯ ಬಗ್ಗೆ ತರಬೇತುದಾರರ ಬಳಿಯೂ ಹೇಳಿದ್ದೆ.
ಆದರೆ ನಾನು ತಂಡಕ್ಕೆ ಹೊಸಬನಾಗಿದ್ದರಿಂದ ಕೆಲವರು ನನ್ನ ಮಾತನ್ನು ನಂಬಲಿಲ್ಲ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಎಲ್ಲರೂ ಭಾವಿಸಿದ್ದರು. ಏಕೆಂದರೆ ನಾನು ಸುಳ್ಳು ಹೇಳಿ ಅಭ್ಯಾಸದಿಂದ ದೂರವಿರುತ್ತೇನೆ ಎಂದು ಅವರು ಅವರುಗಳು ಅಂದುಕೊಂಡಿದ್ದರು ಎಂದು ಸಿರಾಜ್ ಹೇಳಿದ್ದಾರೆ. ಪ್ರಸ್ತುತ ಆರ್‌ಸಿಬಿ ತಂಡದಲ್ಲಿರುವ ಮೊಹಮ್ಮದ್ ಸಿರಾಜ್ ಈ ಋತುವಿನಲ್ಲಿ ಫಾರ್ಮ್‌ನಲ್ಲಿದ್ದಾರೆ. ಈ ಬಾರಿ ಮೊಹಮ್ಮದ್ ಸಿರಾಜ್ 12 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ಡಾಟ್ ಬೌಲ್ ಮಾಡಿದ ಬೌಲರ್‌ಗಳಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.
ipl 2023 rcb star bowler mohammad siraj is suffering from dengue fever.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm