ಬ್ರೇಕಿಂಗ್ ನ್ಯೂಸ್
19-05-23 02:37 pm Source: news18 ಕ್ರೀಡೆ
ಇದೇ ಮೇ 21ರ ಭಾನುವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಪಂದ್ಯ ಅಪರಾಹ್ನ 3.30ರಿಂದ ಹಾಗೂ ಸಂಜೆ 7.30ಕ್ಕೆ ನಡೆಯಲಿರುವ ಹಾಟ್ ಫೇವರಿಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ಉಚಿತ ಪ್ರವೇಶ
ಈ ಬಾರಿ ಮಂಗಳೂರಿನಿಂದ ಕೊಣಾಜೆ ಮಂಗಳೂರು ವಿವಿ ತೆರಳುವ ರಸ್ತೆಯಲ್ಲಿರುವ ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ಜಿಯೋ ಸಿನೆಮಾ ವತಿಯಿಂದ ಫ್ಯಾನ್ ಪಾರ್ಕ್ ನಿರ್ಮಾಣವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ಉಚಿತ ಪ್ರವೇಶವಿದ್ದು, ಭಾನುವಾರ ಮಧ್ಯಾಹ್ನ 1.30 ಗೇಟ್ ತೆರೆಯಲಿದೆ.
ವಿಘ್ನ ಎದುರಾಗದಿರಲಿ ಎನ್ನುತ್ತಿದ್ದಾರೆ ಫ್ಯಾನ್ಸ್!
ನಿಜ, ಈ ಹಿಂದೆ 2016ರಲ್ಲಿ ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಐಪಿಎಲ್ ಫ್ಯಾನ್ ಪಾರ್ಕ್ ತೆರೆದಿದ್ದು ಯಶಸ್ವಿಯಾಗಿ ನಡೆದಿತ್ತು. ಕಡಲನಗರಿಯ ಜನರ ಕ್ರಿಕೆಟ್ ಪ್ರೇಮ ಅರಿತ ಆಯೋಜಕರು 2017 ರಲ್ಲಿಯೂ ಅದೇ ಮೈದಾನದಲ್ಲಿ ಫ್ಯಾನ್ ಪಾರ್ಕ್ ತೆರೆದಿದ್ದರು. ಇನ್ನೇನು 2018ರಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ತೆರೆದಿದ್ದರಾದರೂ ಪಂದ್ಯ ಆರಂಭಕ್ಕೂ ಮುನ್ನವೇ ಗಾಳಿ ಮಳೆಯಾಗಿದ್ದ ಪರಿಣಾಮ ಆ ಬಾರಿಯ ಫ್ಯಾನ್ ಪಾರ್ಕ್ ಪಂದ್ಯಾಟ ವೀಕ್ಷಣೆ ರದ್ದುಗೊಂಡಿತ್ತು.
2019ರಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಮಂಗಳೂರು ನಗರದಲ್ಲಿ ಸಿದ್ಧತೆ ನಡೆದಿತ್ತಾದರೂ ಚುನಾವಣೆ ನೀತಿ ಸಂಹಿತೆ ಹಾಗೂ ಭದ್ರತೆ ದೃಷ್ಟಿಯಿಂದ ಅನುಮತಿ ನಿರಾಕರಿಸಲಾಗಿತ್ತು. ಬಳಿಕದ ಎರಡು ವರ್ಷ ಕೊರೊನಾ ಕಾಟವೂ ಫ್ಯಾನ್ ಪಾರ್ಕ್ ನಿರ್ಮಾಣಕ್ಕೆ ಅಡ್ಡಿಯಾಗಿತ್ತು ಅನ್ನೋದು ಮರೆಯುವಂತಿಲ್ಲ.
ಹೀಗಾಗಿ ಈ ಬಾರಿಯ ಐಪಿಎಲ್ ಫ್ಯಾನ್ ಪಾರ್ಕ್ ಗೆ ವಿಘ್ನ ಎದುರಾಗದಿರಲಿ ಅಂತಾ ಕ್ರಿಕೆಟ್ ಫ್ಯಾನ್ಸ್ ಬೇಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ದೇ ಈ ಬಾರಿ ಕಣಚೂರಿಗೆ ಲೊಕೇಶನ್ ಶಿಫ್ಟ್ ಮಾಡಲಾಗಿದ್ದು, ಎರಡು ಪಂದ್ಯವನ್ನು ನೋಡುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗಿದೆ.
mangalore ipl 2023 fan park on sunday at kanachur ground mangaluru.
08-06-23 12:43 pm
Bangalore Correspondent
ಸಕಲೇಶಪುರ ; ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ...
07-06-23 06:54 pm
ವಯಸ್ಸು, ಅನಾರೋಗ್ಯ, ವಿರೋಧಿ ಅಲೆ ; 25ರಲ್ಲಿ 13 ಬಿಜ...
07-06-23 03:17 pm
13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸ...
06-06-23 10:38 pm
ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವ...
06-06-23 10:28 pm
07-06-23 10:58 pm
HK News Desk
ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್ ; ಕೊಲ್ಲಾಪು...
07-06-23 10:32 pm
ಯುಪಿಯಲ್ಲಿ ಅತೀಕ್ ಅಹ್ಮದ್ ಬೆನ್ನಲ್ಲೇ ಮತ್ತೊಬ್ಬ ಗ...
07-06-23 08:51 pm
ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾ...
06-06-23 09:37 pm
ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶ...
06-06-23 08:18 pm
08-06-23 10:48 am
Mangalore Correspondent
ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ; ಜೂನ್ 9ರ...
07-06-23 11:09 pm
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ ; ಕರಾವಳಿಯಲ್ಲ...
07-06-23 09:34 pm
ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿ...
07-06-23 09:13 pm
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹು...
07-06-23 02:04 pm
06-06-23 10:43 am
Mangalore Correspondent
Illegal Cow Transport: ಕುತ್ತಾರಿನಲ್ಲಿ ಉಸಿರುಗಟ್...
05-06-23 01:02 pm
ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ...
04-06-23 02:14 pm
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm