ಬ್ರೇಕಿಂಗ್ ನ್ಯೂಸ್
23-05-23 12:52 pm Source: news18 ಕ್ರೀಡೆ
ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ತಲುಪಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಗೆಲುವಿನೊಂದಿಗೆ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ ಈ ಪಂದ್ಯದ ನಂತರ ಚೆನ್ನೈ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಧೋನಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದಲ್ಲಿ ಜಡೇಜಾ ನಾಲ್ಕು ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟಿದ್ದರು. ಇತರ ಬೌಲರ್‌ಗಳು ರನ್ ಕಂಟ್ರೋಲ್ ಮಾಡಿದರೆ, ಜಡೇಜಾ ಉದಾರವಾಗಿ ರನ್ ಬಿಟ್ಟುಕೊಟ್ಟಿದ್ದರು.
ಪಂದ್ಯದ ಬಳಿಕ ಡಗೌಟ್‌ಗೆ ಹೋಗುವಾಗ ಧೋನಿ ಜಡೇಜಾರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಜಡೇಜಾ ಜೊತೆ ಧೋನಿ ಸೀರಿಯಸ್ ಆಗಿ ಮಾತನಾಡಿದ್ದಾರೆ. ಜಡೇಜಾ ಕೇಳುವಷ್ಟೊತ್ತು ಕೇಳಿದ್ದಾರೆ. ಆ ಬಳಿಕ ಜಡೇಜಾ ಕೂಡ ಧೋನಿಗೆ ಗಂಭೀರವಾಗಿಯೇ ಉತ್ತರಿಸಿದ್ದಾರೆ. ನಂತರ ಜಡೇಜಾ ಧೋನಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಲೀಗ್ ಮುಗಿಯುವ ಮುನ್ನ ಈ ಘಟನೆ ನಡೆದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆದರೆ ಈ ಘಟನೆಯನ್ನು ಮರೆಯುವ ಮುನ್ನವೇ ಭಾನುವಾರ ಜಡೇಜಾ ಮಾಡಿರುವ ಟ್ವೀಟ್ ಸಂಚಲನ ಮೂಡಿಸಿದೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. " ಕರ್ಮವು ನಿಮ್ಮ ಬಳಿಗೆ ಮರಳುತ್ತದೆ, ಶೀಘ್ರದಲ್ಲಿ ಅಥವಾ ತಡವಾಗಿಯಾದರೂ ಖಂಡಿತವಾಗಿ ಬರುತ್ತದೆ " ಎಂದು ಟ್ವೀಟ್ ಮಾಡಿದ್ದಾರೆ.
ಪೋಸ್ಟರ್ಗೆ "ಡೆಫಿನೇಟ್ಲಿ" ಎಂಬ ಶೀರ್ಷಿಕೆಯನ್ನು ಸಹ ಸೇರಿಸಿದ್ದಾರೆ. ಈ ಟ್ವೀಟ್‌ಗೆ ಅವರ ಪತ್ನಿ ಕೂಡ ಪ್ರತಿಕ್ರಿಯಿಸಿದ್ದು, ಇದು 'ನಿಮ್ಮ ಸ್ವಂತ ಮಾರ್ಗವನ್ನು ಅನುಸರಿಸಿ' (Follow your own path) ಎಂದು ಉತ್ತರಿಸಿದ್ದಾರೆ. ಕಳೆದ ಸೀಸನ್‌ನಿಂದ ಧೋನಿ ಮತ್ತು ಜಡೇಜಾ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಗಾಸಿಫ್ ಕೇಳಿಬಂದಿದ್ದವು. ನಾಯಕನನ್ನಾಗಿ ಮಾಡಿದ ನಂತರ ಜಡೇಜಾ ಅವರು ಭಾವನಾತ್ಮಕ ಸಂಕಟದಲ್ಲಿದ್ದರು ಎಂಬ ವರದಿಗಳಾಗಿದ್ದವು. ಅದರೊಂದಿಗೆ ಚೆನ್ನೈನ ಎಲ್ಲಾ ಲೀಗ್ ಪಂದ್ಯಗಳು ಮುಗಿಯುವ ಮುನ್ನವೇ ಜಡೇಜಾ ನಾಯಕತ್ವ ತ್ಯಜಿಸಿದ್ದರು.
ಅದರ ನಂತರ ಅವರು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖಾತೆಗಳನ್ನ ಅನ್ ಫಾಲೋ ಮಾಡಿದ್ದರು. ಅಲ್ಲದೆ ಚೆನ್ನೈ ಫ್ರಾಂಚೈಸಿ ಜಡೇಜಾ ಅವರನ್ನು ಕೈ ಬಿಡಲಿದೆ ಎಂಬ ವರದಿಗಳೂ ಬಂದಿದ್ದವು. ಆದರೆ ಇದಕ್ಕೆಲ್ಲಾ ಪೂರ್ಣವಿರಾಮ ಹಾಕಲು ಚೆನ್ನೈ 16 ಕೋಟಿ ನೀಡಿ ಜಡೇಜಾ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇನ್ನು ಈ ಋತುವಿನಲ್ಲಿ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾಗ ಧೋನಿ ಅಭಿಮಾನಿಗಳು ಮೈದಾನದಲ್ಲಿ ಜಡೇಜಾ ಔಟಾಗಲಿ ಎಂದು ಫ್ಲೆಕ್ಸ್ಗಳನ್ನು ಪ್ರದರ್ಶಿಸುತ್ತಿರುವುದು ಗೊತ್ತೇ ಇದೆ. ಬೌಲಿಂಗ್‌ನಲ್ಲಿ ಮಿಂಚಿದರೂ ಯಾರೂ ತನ್ನತ್ತ ಗಮನ ಹರಿಸುತ್ತಿಲ್ಲ ಎಂಬ ಆತಂಕ ಜಡೇಜಾ ಮೇಲಿದೆ ಎಂಬುದು ಅವರ ಅಭಿಮಾನಿಗಳ ಆರೋಪ. ಇದೆಲ್ಲಾ ಬೆಳವಣಿಗೆಯಿಂದ ಮುಂದಿನ ಋತುವಿನಲ್ಲಿ ಜಡೇಜಾ ಚೆನ್ನೈ ಪರ ಆಡುವುದು ಅನುಮಾನ ಎನ್ನಲಾಗುತ್ತಿದೆ.
karma will get back at you ravindra jadeja shares cryptic post after heated conversation with ms dhoni viral.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm